Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಕಾಡೆಮಿ ಮಾಡಲಾಗದ ಕೆಲಸಗಳನ್ನು ಪತ್ರಕರ್ತರ ಸಂಘ ಮಾಡಬೇಕಿದೆ : ನಾಗಾಭರಣ
Posted date: 06 Mon, Feb 2023 10:20:45 AM
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘವು ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್ ಅವರ ನೆನಪಿಗಾಗಿ  ಜೀವಬಿಂಬ ಎಂಬ ಪುಸ್ತಕವನ್ನು ಹೊರತಂದಿದೆ. ಅದರ ಬಿಡುಗಡೆ ಸಮಾರಂಭ  ಪ್ರೆಸ್‌ಕ್ಲಬ್ ಆವರಣದಲ್ಲಿ  ನೆರವೇರಿತು. ಇದೇ ಸಂದರ್ಭದಲ್ಲಿ  ಪತ್ರಕರ್ತರ ಸಂಘದ ಅಧಿಕೃತ  ಜಾಲತಾಣವನ್ನು  ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ, ಹಿರಿಯನಟ ದೇವರಾಜ್, ನಟಿ ಭಾವನಾ ರಾಮಣ್ಣ  ಉದ್ಘಾಟಿಸಿದರು. ವೇದಿಕೆಯಲ್ಲಿ ಮಾತನಾಡಿದ ನಟ ದೇವರಾಜ್  ನಾಗೇಶ್ ಒಬ್ಬ  ಸರಳಜೀವಿ, ನನ್ನ ಮೊದಲ ಫೋಟೋಶೂಟ್ ಅವರೇ ಮಾಡಿದ್ದರು. ಅವರ, ನನ್ನ ಸ್ನೇಹ ೩೫ ವರ್ಷದ್ದು ಎಂದು ಹೇಳಿದರು,  ನಟಿ ಭಾವನಾ ಮಾತನಾಡುತ್ತ  ನನ್ನ ಪ್ರಥಮ ಛಾಯಾಚಿತ್ರವನ್ನು ಕ್ಲಿಕ್ ಮಾಡಿದ್ದು ಡಿಸಿ, ಅದು ಮಯೂರದಲ್ಲಿ ಪ್ರಕಟವಾಗಿತ್ತು. ನನ್ನ ತಂದೆಯ ಜೊತೆ ಸಾಕಷ್ಟು ಬಾರಿ ಅವರ ಮನೆಗೆ ಹೋಗಿದ್ದೆ ಎಂದು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರು.  
 
ಸಂಘದ ಅಧ್ಯಕ್ಷ ಬಿ.ಎನ್. ಸುಬ್ರಹ್ಮಣ್ಯ ಮಾತನಾಡುತ್ತ ನಮ್ಮ ಸಂಘ ಬಹಳಷ್ಟು ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡಿದೆ. ಸಂಘದ ಜಾಲತಾಣವನ್ನು ಗೆಳೆಯರಾದ ಚಂದ್ರಶೇಖರ್ ಮಾಡಿಕೊಟ್ಟಿದ್ದಾರೆ. ಸಂಘದ ಸದಸ್ಯತ್ವವನ್ನು ಅರ್ಹತೆ ಪರಿಗಣಿಸಿ ನೀಡಲಾಗುತ್ತದೆ, ನೇರವಾಗಿ ಯಾರಿಗೂ ಕೊಡುತ್ತಿಲ್ಲ, ಮುಂದಿನ ದಿನಗಳಲ್ಲಿ ಹಲವಾರು ಲೇಖನಗಳನ್ನು ಪ್ರಕಟಿಸುವ ಆಶಯವಿದೆ ಎಂದರು.
 
ಕೊನೆಯಲ್ಲಿ ಮಾತನಾಡಿದ  ನಾಗಾಭರಣ,  ಬಹಳ ಅರ್ಥಪೂರ್ಣವಾಗಿ ಜೀವಬಿಂಬವನ್ನು ಬಿಡುಗಡೆ ಮಾಡಿದ್ದಾರೆ, ನನ್ನ ಸಿನಿಮಾ, ಜೀವನ ಪಯಣವನ್ನೂ ಸಹ ಡಿಸಿ ತನ್ನ ಬಿಂಬದಲ್ಲಿ ದಾಖಲಿಸಿ ಕೊಟ್ಟಿದ್ದಾನೆ. ಕನ್ನಡ ಚಿತ್ರರಂಗದ ಇತಿಹಾಸವನ್ನು ಪ್ರಗತಿ ಸ್ಟುಡಿಯೋ ಕಟ್ಟಿಕೊಟ್ಟಿದ್ದರೂ, ಅದನ್ನು ಡಿಸಿ ಮುಂದುವರೆಸಿಕೊಟ್ಟಿದ್ದಾರೆ. ಆತ ಬಹುಮುಖ ವ್ಯಕ್ತಿತ್ವ ಹೊಂದಿದ ಬಿಂಬಗ್ರಾಹಿ, ಆತನಲ್ಲೊಂದು ತುಡಿತವಿತ್ತು. ಆತನಿಂದ ಬೆಳ್ಳಿಹೆಜ್ಜೆಯ ಸ್ವರೂಪ ಬೇರೆಯದೇ ರೂಪ ಪಡೆಯುತ್ತಿತ್ತು. ಆತ ದಾಖಲೆಗಳ ಸೃಷ್ಟಿಕರ್ತ. ತಪಸ್ಸನ್ನು ಮಾಡಿದಂಥ ವ್ಯಕ್ತಿ. ಲಕ್ಷಾಂತರ ಮನಸುಗಳಿಗೆ ಆತ ಬೇಕಾದವನಾಗಿ ಬದುಕಿದ್ದಾನೆಂದು ಡಿಸಿ ಸ್ಮರಿಸಿದ ನಂತರ,  ಚಲನಚಿತ್ರ ಅಕಾಡೆಮಿ ಮಾಡಲಾಗದ ಹಲವು ಕೆಲಸಗಳನ್ನು ಪತ್ರಕರ್ತರ ಸಂಘ ಮಾಡಬೇಕಿದೆ, ಪತ್ರಕರ್ತರ ಸಂಘ ಹಿಂದೆಯೂ ಇತ್ತು. ನಾವೆಲ್ಲ ಆಗ ಬೇರೆಬೇರೆ ಕಾರಣಗಳಿಂದಾಗಿ ಪತ್ರಕರ್ತರ ಸಂಘವನ್ನು ಒಂದು ಮಾನದಂಡವಾಗಿ ಪರಿಗಣಿಸುತ್ತಿದ್ದೆವು ಎಂದು  ಹೇಳಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಮಾತನಾಡುತ್ತ  ಅವರು  ತಮ್ಮ ಹಾಗೂ ಡಿಸಿ ಜೊತೆಗಿನ ಒಡನಾಟದ ಸಂದರ್ಭವನ್ನು ನೆನಪು ಮಾಡಿಕೊಂಡರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಕಾಡೆಮಿ ಮಾಡಲಾಗದ ಕೆಲಸಗಳನ್ನು ಪತ್ರಕರ್ತರ ಸಂಘ ಮಾಡಬೇಕಿದೆ : ನಾಗಾಭರಣ - Chitratara.com
Copyright 2009 chitratara.com Reproduction is forbidden unless authorized. All rights reserved.