Chief Editor
Manohar. R (Manu)
Photo Journalist
chitrataramanu@gmail.com
+91 9845549026
1ರಾಬರಿ ಕಥೆ ಟ್ರೈಲರ್ ಬಿಡುಗಡೆ
Posted date: 03 Fri, Mar 2023 09:01:24 AM
ಹಲವಾರು ವರ್ಷಗಳ ಕಾಲ ರಂಗಭೂಮಿ, ಚಿತ್ರರಂಗದಲ್ಲಿರುವ ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಉಪನ್ಯಾಸಕರಾಗೂ ಕೆಲಸಮಾಡಿದ ಗೋಪಾಲ್ ಹಳ್ಳೇರ ಹೊನ್ನಾವರ ಅವರು ರಾಬರಿಯಲ್ಲಿ ಗಳಿಸಿದ ನಿಧಿಯ ಸುತ್ತ ನಡೆಯುವ ಕಥಾಹಂದರ  ಇಟ್ಟುಕಂಡು "1 ರಾಬರಿ ಕಥೆ" ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮನ್ವಿ ಕ್ರಿಯೇಷನ್ಸ ಬೇಲೂರು ಸಂಸ್ಥೆಯಡಿ ನಿರ್ಮಿಸಿರುವ ಪ್ರಥಮ ಚಿತ್ರ ಇದಾಗಿದ್ದು ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ  ಸಿದ್ಧತೆಗಳನ್ನು ಮಾಡಿಕೊಂಡಿದೆ. 

ಈ ಚಿತ್ರದಲ್ಲಿ ರಕ್ಕಂ ಖ್ಯಾತಿಯ ರಣಧೀರ್‌ ಗೌಡ ನಾಯಕನಾಗಿ ನಟಿಸಿದ್ದು, ಹೊಸ ಪ್ರತಿಭೆ ರಿಷ್ವಿ ಭಟ್  ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. 

ಈ ಚಿತ್ರದ ನಾಟಿಸ್ಟೈಲ್ ಸಾಂಗ್ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಂಥ ಪಕ್ಕಾ ಮಾಸ್ ಕಮರ್ಷಿಯಲ್, ಕಾಮಿಡಿ, ಆಕ್ಷನ್, ಸೆಂಟಿಮೆಂಟ್ ಕಥಾಹಂದರ  ಒಳಗೊಂಡ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಸಂದರ್ಭದಲ್ಲಿ  ನಿರ್ಮಾಪಕ ಸಂತೋಷ್ ಮಾತನಾಡಿ ನಾಗೇನಹಳ್ಳಿ ಎಂಬ ಚಿಕ್ಕ ಹಳ್ಳಿಯಿಂದ ಬಂದವನು. ನಿರ್ದೇಶಕರು ಬಂದು ಈ ಕಥೆ ಹೇಳಿದರು. ನಾನೂಸಹ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿ ಇವತ್ತು ಚಿತ್ರವನ್ನು ಕಂಪ್ಲೀಟ್ ಮಾಡಿಕೊಂಡು ನಿಮ್ಮ ಮುಂದೆ ಬಂದಿದ್ದೇವೆ ಎಂದು ಹೇಳಿದರು. 
 
ನಿರ್ದೇಶಕ ಗೋಪಾಲ್ ಹಳ್ಳೇರ ಮಾತನಾಡುತ್ತ ರಕ್ಕಂ ಚಿತ್ರದ ಸಮಯದಲ್ಲಿ ಈ ಎಳೆಯನ್ನು ರಣಧೀರ್‌ಗೌಡ ಅವರಿಗೆ ಹೇಳಿದ್ದೆ. ಆನಂತರ ನಿರ್ಮಾಪಕರನ್ನು ಹುಡುಕಿಕೊಂಡು ಬಂದಮೇಲೆ ಚಿತ್ರ ಆರಂಭವಾಯಿತು. ಉತ್ತರ ಕರ್ನಾಟಕದಲ್ಲಿ ನಡೆಯುವ ಕಥೆಯಿದು, ನಾಯಕ ಒಂದು ದೊಡ್ಡ ರಾಬರಿಯಲ್ಲಿ ಬಂಗಾರ ದರೋಡೆಮಾಡಿ ಆ ನಿಧಿಯನ್ನು ಒಂದೆಡೆ ಸಂಗ್ರಹಿಸಿಡುತ್ತಾನೆ. ನಂತರ ಆತ ೫ ವರ್ಷ ಜೈಲಲ್ಲಿರಬೇಕಾಗುತ್ತದೆ, ಜೈಲಿಂದ ಹೊರಬಂದಮೇಲೆ ನಿಧಿಯಿಟ್ಟಿದ್ದ ಜಾಗದಲ್ಲಿ ದೇವಸ್ಥಾನವೊಂದು ನಿರ್ಮಾಣವಾಗಿರುತ್ತೆ, ನಾಯಕ ಮತ್ತೆ ಆ ನಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತೇ ಇಲ್ಲವೇ ಎನ್ನುವುದೇ ಚಿತ್ರದ ಕಥೆ ಎಂದು ಹೇಳಿದರು. ನಾಯಕ ರಣಧೀರ್‌ಗೌಡ ಮಾತನಾಡಿ ಕೃಷ್ಣ ಎನ್ನುವ ನನ್ನ ಪಾತ್ರಕ್ಕೆ ೨ ಶೇಡ್ ಇದೆ. ಸಿಂದನೂರಿನ ರವಕುಂದದಲ್ಲಿ ೨೫ದಿನ, ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ ಸುತ್ತಮುತ್ತ ೧೫ದಿನ ನಂತರ ಬೆಂಗಳೂರು ಸೇರಿ ೪೫ ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಮಾಸ್ ಕಮರ್ಷಿಯಲ್ ಜೊತೆ ಒಳ್ಳೇ ಕಂಟೆಂಟ್ ಇರುವ ಚಿತ್ರವಿದು ಎಂದು ಹೇಳಿದರು. 
 
ನಾಯಕಿ ರಿಶ್ವಿಭಟ್ ಮಾತನಾಡಿ ಚಿತ್ರದಲ್ಲಿ ಅಂಗನವಾಡಿ ಟೀಚರ್ ಭಾಮಾ ಎಂಬ ಪಾತ್ರವನ್ನು ಮಾಡಿದ್ದೇನೆ. ಊರಿಗೆ ಸರ್ವೆ ಆಫೀಸರ್ ಬಂದಾಗ ಅವರಮೇಲೆ ಹೇಗೆ ಲವ್ವಾಗುತ್ತೆ ಎನ್ನೋದು ನನ್ನ ಪಾತ್ರ ಎಂದರು. ಹಿರಿಯನಟ ಸುಂದರರಾಜ್ ಅವರು ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಎಂಎಲ್‌ಎ ಪಾತ್ರ ಮಾಡಿದ್ದಾರೆ. ಶಿವರಾಜ್ ಕೆಆರ್ ಪೇಟೆ ಡೀಲ್ ಡಿಂಗ್ರಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ.  ನಿರ್ಮಾಪಕ ಸಂತೋಷ್ ನಾಗೇನಹಳ್ಳಿ ಅವರು ನಿರ್ಮಾಣದ ಜೊತೆಗೆ  ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
 
ಕರಿಸುಬ್ಬು, ಕಡ್ಡಿಪುಡಿಚಂದ್ರು, ತಬಲಾನಾಣಿ, ಜಹಾಂಗೀರ್, ಗಿರೀಶ್ ಶಿವಣ್ಣ, ಮೂಗ್ ಸುರೇಶ್, ಎಂ.ಕೆ.ಮಠ್, ನವೀನ್ ಪಡೀಲ್, ಸಂಜುಬಸಯ್ಯ ಇತರರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಕಾಶ್ ಅವರ ಸಂಭಾಷಣೆ, ಸಂತೋಷ್ ನಾಗೇನಹಳ್ಳಿ, ಪ್ರಕಾಶ್ ಅವರ ಸಾಹಿತ್ಯ, ಡಿಫರೆಂಟ್ ಡ್ಯಾನಿ ಅವರ ಸಾಹಸ, ಹರೀಶ್ ಜಿಂದೆ ಅವರ ಛಾಯಾಗ್ರಹಣ, ಸಂಜಿವರೆಡ್ಡಿ ಅವರ ಸಂಕಲನ ಮತ್ತು ಚಾಮರಾಜ್, ರೋಹಿತ್ ಅರುಣ್ ಅವರ ನೃತ್ಯನಿರ್ದೇಶನ  ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - 1ರಾಬರಿ ಕಥೆ ಟ್ರೈಲರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.