Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾರ್ಚ್ ಹತ್ತರಂದು ಬರಲಿದೆ ಮನಸೂರೆಗೊಳ್ಳುವ``ಚೌಕಾಬಾರ``
Posted date: 06 Mon, Mar 2023 05:21:50 PM
ಕನ್ನಡದಲ್ಲಿ ಈಗ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹುದೇ ವಿಭಿನ್ನ ಕಂಟೆಂಟ್ ವುಳ್ಳ " ಚೌಕಾಬಾರ " ಚಿತ್ರ ಇದೇ ಮಾರ್ಚ್ 10ರಂದು ಕರ್ನಾಟಕದಾದ್ಯಂತ ಐವತ್ತಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗಲಿದೆ. 
ಮಾರ್ಚ್ 24, 25 ಹಾಗೂ 26 ಅಮೇರಿಕಾದ ಐದು ರಾಜ್ಯಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.

ಸುಮಾರು ವರ್ಷಗಳಿಂದ ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ಸಕ್ರಿಯರಾಗಿರುವ ನಮಿತಾರಾವ್ ಹಾಗೂ ವಿಕ್ರಮ್ ಸೂರಿ ದಂಪತಿಗಳ ಕನಸಿನ ಕೂಸು ಈ "ಚೌಕಾಬಾರ".

ನವಿನಿರ್ಮಿತಿ ಲಾಂಛನದಲ್ಲಿ ನಮಿತಾರಾವ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಕ್ರಮ್ ಸೂರಿ ನಿರ್ದೇಶನ ಮಾಡಿದ್ದಾರೆ. 

ನಮಿತಾರಾವ್ ಚಿತ್ರದ ನಿರ್ಮಾಪಕಿ ಅಷ್ಟೇ ಅಲ್ಲ. ನಾಯಕಿ ಕೂಡ. ವಿಹಾನ್ ಪ್ರಭಂಜನ್ ನಾಯಕ. ಕಾವ್ಯ ರಮೇಶ್, ಸುಜಯ್ ಹೆಗಡೆ, ಸಂಜಯ್ ಸೂರಿ, ಪ್ರಥಮ ಪಸಾದ್ ಮುಂತಾದವರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಮಣಿರಾವ್ ಅವರ ಕಾದಂಬರಿ ಆಧರಿಸಿರುವ ಈ ಚಿತ್ರಕ್ಕೆ ರೂಪ ಪ್ರಭಾಕರ್ ಸಂಭಾಷಣೆ ಬರೆದಿದ್ದಾರೆ. ಅಶ್ವಿನ್ ಪಿ ಕುಮಾರ್ ಸಂಗೀತ ಸಂಯೋಜನೆ, ರವಿರಾಜ್ ಛಾಯಾಗ್ರಹಣ ಶಶಿಧರ್ ಸಂಕಲನ ಹಾಗೂ ಮದನ್-  ಹರಿಣಿ,  ಸಚಿನ್ ಅವರ ನೃತ್ಯ ನಿರ್ದೇಶನ "ಚೌಕಾಬಾರ" ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾರ್ಚ್ ಹತ್ತರಂದು ಬರಲಿದೆ ಮನಸೂರೆಗೊಳ್ಳುವ``ಚೌಕಾಬಾರ`` - Chitratara.com
Copyright 2009 chitratara.com Reproduction is forbidden unless authorized. All rights reserved.