Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸುನೀಲ್ ಕುಮಾರ್.ಬಿ.ಆರ್ ಸಾರಥ್ಯದ ಟಿಪಿಎಲ್ ಸೀಸನ್ -2 ಟ್ರೋಫಿ, ಜೆರ್ಸಿ ಅನಾವರಣ - ಮಾರ್ಚ್ 12ರಿಂದ ಕಿರುತೆರೆ ತಾರೆಯರ ಕ್ರಿಕೆಟ್ ರಂಗು
Posted date: 09 Thu, Mar 2023 06:52:04 PM
ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಿಸುವ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ -2 ಇದೇ ತಿಂಗಳು ನಡೆಯುತ್ತಿದೆ. ಈಗಾಗಲೇ ತಂಡದ ನಾಯಕರು, ಆಟಗಾರರ ಪಟ್ಟಿ ಬಿಡುಗಡೆ ಮಾಡಿರುವ ಆಯೋಜಕರು ಇದೀಗ ಸೀಸನ್ -2 ಟ್ರೋಫಿ ಹಾಗೂ ಜೆರ್ಸಿ ಅನಾವರಣ ಮಾಡಿದ್ದಾರೆ. 

ಟಿಪಿಎಲ್ ಟ್ರೋಫಿ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ನಟ ವಿನೋದ್ ಪ್ರಭಾಕರ್, ರಣಜಿ ಆಟಗಾರರಾದ ಶರತ್ ಶ್ರೀನಿವಾಸ್, ಅರ್ಜುನ್ ಹೊಯ್ಸಳ, ದೇಗ ನಿಶ್ಚಲ್, ಬಿ.ಯು.ಶಿವಕುಮಾರ್, ಅನಿರುದ್ಧ್ ಜೋಶಿ ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿರುವ ಮತ್ತು ರಣಜಿ ಆಟಗಾರ ಅಭಿಮನ್ಯು ಮಿಥುನ್ ಭಾಗಿಯಾಗಿ ಟಿಪಿಎಲ್ ಸೀಸನ್-2ಗೆ ಶುಭ ಹಾರೈಸಿದ್ದಾರೆ. 

ಮಾರ್ಚ್ 12ರಿಂದ 15ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಟಿಪಿಎಲ್ ಸೀಸನ್ -2 ನಡೆಯುತ್ತಿದೆ. ಮೊದಲ ಸೀಸನ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದರಿಂದ ಸೀಸನ್ -2 ನಡೆಸಲು ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕ ಸುನೀಲ್ ಕುಮಾರ್.ಬಿ.ಆರ್ ನಿರ್ಧರಿಸಿದ್ದು, ಈ ಬಾರಿಯೂ ಅದ್ದೂರಿಯಾಗಿ, ಕಲರ್ ಫುಲ್ ಆಗಿ ಟಿಪಿಎಲ್ ಸೀಸನ್ -2 ನಡೆಯಲಿದೆ. 

ಟಿಪಿಎಲ್ ಸೀಸನ್ -2 ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿದೆ. ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಆರು ತಂಡಗಳಿದ್ದು, ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ  ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಪ್ರತಿತಂಡಕ್ಕೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಗಳಿರಲಿದ್ದು, `ದಿ ಪರ್ಪಲ್ ರಾಕ್ ಪ್ಯಾಂಥರ್ಸ್` ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ `ಎನಿಎಲ್ಪ್ ಟೂರ್ನಿವಲ್`, ಫೈಜಾನ್ ಖಾನ್ `ಇನ್ಸೇನ್ ಕ್ರಿಕೆಟ್ ಟೀಂ`, ಮೊನೀಶ್ `ದಿ ಬುಲ್ ಸ್ಕ್ವಾಡ್`, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್  `ಆಕ್ಸ್ ಫರ್ಡ್ ವಿನ್ ಟೀಂ` ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ಅಂಬಾಸಿಡರ್ ಪಟ್ಟಿಯಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸುನೀಲ್ ಕುಮಾರ್.ಬಿ.ಆರ್ ಸಾರಥ್ಯದ ಟಿಪಿಎಲ್ ಸೀಸನ್ -2 ಟ್ರೋಫಿ, ಜೆರ್ಸಿ ಅನಾವರಣ - ಮಾರ್ಚ್ 12ರಿಂದ ಕಿರುತೆರೆ ತಾರೆಯರ ಕ್ರಿಕೆಟ್ ರಂಗು - Chitratara.com
Copyright 2009 chitratara.com Reproduction is forbidden unless authorized. All rights reserved.