Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಾಯಕನಾಗಿ ಭಡ್ತಿಪಡೆದ ಧರ್ಮಣ್ಣ ರಾಜಯೋಗ ಫಸ್ಟ್ ಲುಕ್ ಅನಾವರಣ
Posted date: 14 Tue, Mar 2023 02:00:34 PM
ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಎನ್ನುವುದು ಬಹಳ ಮುಖ್ಯ. ಪ್ರತಿಭೆಯ ಜೊತೆಗೆ ಅದೃಷ್ಟವಿದ್ದರೆ ಮಾತ್ರವೇ ಹೆಸರು ಖ್ಯಾತಿ ಗಳಿಸಲು ಸಾಧ್ಯ. ಅದರ ಜೊತೆ ಯೋಗವೂ ಇರಬೇಕಾಗುತ್ತದೆ. ಹಾಗೇ ಮನುಷ್ಯನ ಜೀವನದಲ್ಲಿ ರಾಜಯೋಗ ಬಂತೆಂಕಮಲದರೆ ಆತ ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವಂತಾಗುತ್ತದೆ. ಈಗ ಅದೇ ಶೀರ್ಷಿಕೆಯಡಿ ಚಲನಚಿತ್ರವೊಂದು ನಿರ್ಮಾಣವಾಗುತ್ತಿದೆ. ಈ ಚಿತ್ರದ ಮೂಲಕ ಪೋಷಕ ನಟನಾಗಿದ್ದ ಧರ್ಮಣ್ಣ ಕಡೂರು ನಾಯಕನಾಗಿ ಭಡ್ತಿ ಪಡೆಯುತ್ತಿದ್ದಾರೆ. ಈಗಾಗಲೇ ಚಿತ್ರೀಕರಣವನ್ನೂ ಪ್ರಾರಂಭಿಸಿ ಒಂದು ಹಂತ ಮುಗಿಸಿಕೊಂಡಿರುವ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
 
ಲಿಂಗರಾಜ ಉಚ್ಚಂಗಿದುರ್ಗ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡ ಗೊತ್ತಿಲ್ಲ ನಿರ್ಮಿಸಿದ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ಅರ್ಜುನ್ ಅಣತಿ ಅಲ್ಲದೆ ಧರ್ಮಣ್ಣ ಸಹೋದರ ಹೊನ್ನಪ್ಪ ಕಡೂರು ಈ ಆರು ಜನ ನಿರ್ಮಾಪಕರು ಸೇರಿ  ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 
 
ಈ ಸಂದರ್ಭದಲ್ಲಿ ನಿರ್ದೇಶಕ ಲಿಂಗರಾಜು ಮಾತನಾಡುತ್ತ,  ಹಿಂದೆ ವಿಜಯಪ್ರಸಾದ್ ಜೊತೆ ಸಿಲ್ಲಿ ಲಲ್ಲಿ ಸೀರಿಯಲ್‌ಗೆ ಅಸಿಸ್ಟೆಂಟ್ ಆಗುವ ಮೂಲಕ ಇಂಡಸ್ಟ್ರಿಗೆ ಬಂದೆ. ಈಚೆಗೆ ಶಿರಡಿ  ಸಾಯುಬಾಬಾದಲ್ಲೂ ವರ್ಕ್ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಮೊದಲಚಿತ್ರ. ಈ ಸಿನಿಮಾ ಪ್ರಾರಂಭವಾಗಲು ಕಾರಣ ದೀಕ್ಷಿತ್ ಕೃಷ್ಣ, ಧರ್ಮರ್ಣ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಎಲ್ಲರಿಗೂ ಒಂದಲ್ಲ ಒಂದು ದಿನ ರಾಜಯೋಗ ಬಂದೇ ಬರುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ. ಧರ್ಮಣ್ಣ ಅವರನ್ನು ರಾಮ ರಾಮ ರೇ ಚಿತ್ರದಲ್ಲಿ ನೋಡಿದ್ದೆ, ಅವರ ಪಾತ್ರ ಅಭಿನಯ ಇಷ್ಟವಾಗಿತ್ತು. ಹಾಗಾಗಿ ಈ ಚಿತ್ರದ ಮೂಲಕ ಹೀರೋ ಮಾಡಿದ್ದೇನೆ. ತಂದೆ, ಪತ್ನಿ, ಚಿಕ್ಕಪ್ಪ ದೊಡ್ಡಪ್ಪ ಹೀಗೆ ಎಲ್ಲಾ ಪಾತ್ರಗಳು ಅವರ ಸುತ್ತ ಬರುತ್ತವೆ. ತಂದೆ ಮಗನ ಸುತ್ತ ನಡೆಯುವ ಕಥೆ. ಜೋತಿಷ್ಯ ಸುಳ್ಳಲ್ಲ, ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಅಂಥದೇ ಕಥೆಯನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರದ ಕೊನೆಯಲ್ಲಿ ಮಗನ ಪಾತ್ರದ ಮೂಲಕ ತಂದೆಗೆ ಬುದ್ದಿ ಕಲಿಸುವ ಕಥೆಯಿದೆ. ಚಿತ್ರದಲ್ಲಿ ಒಂದು ಸೀರಿಯಸ್ ವಿಷಯವನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಿದ್ದು, ಈಗಾಗಲೇ ೧೦ ದಿನಗಳ ಕಾಲ ಮೊದಲಹಂತದ ಚಿತ್ರೀಕರಣ ಮುಗಿಸಿದ್ದೇವೆ ಎಂದು ಹೇಳಿದರು, 
 
ನಾಯಕನಟ ಧರ್ಮಣ್ಣ ಮಾತನಾಡುತ್ತ ನನ್ನ ಪಾತ್ರದಲ್ಲಿ ಕಾಮಿಡಿ, ಎಮೋಷನ್ ಎಲ್ಲಾ ಇದೆ, ಈ ಥರದ ಪಾತ್ರವನ್ನು ಹಿಂದೆಂದೂ ಮಾಡಿಲ್ಲ, ಗ್ರಾಮೀಣ ಭಾಗದಲ್ಲಿ ನಡೆಯೋ  ಕಥೆಯನ್ನು ಲಿಂಗರಾಜು ಅವರು ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲ ಪಾತ್ರಗಳಿಗೂ ಸಮಾನ ಅವಕಾಶವಿದೆ. ನನ್ನನ್ನು ನಂಬಿ ಇಂಥ ದೊಡ್ಡ ಪಾತ್ರವನ್ನು ಕೊಟ್ಟಿದ್ದಾರೆ ಎಂದು ಹೇಳಿದರು,  
ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿರುವ ನಿರೀಕ್ಷಾರಾವ್ ಮಾತನಾಡುತ್ತ ಮೂಢನಂಬಿಕೆ, ನಂಬಿಕೆಗಳ ಮಧ್ಯೆ ನಡೆಯುವ ಕಥೆ. ನನ್ನದು ಕುಟುಂಬದ ಗೃಹಿಣಿಯ ಪಾತ್ರ ಎಂದು ಹೇಳಿಕೊಂಡರು. ಚಿತ್ರದಲ್ಲಿ ೬ ಹಾಡುಗಳಿದ್ದು, ಅಕ್ಷಯ್ ರಿಶಭ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಷ್ಣುಪ್ರಸಾದ್ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ. ಬಿ.ಎಸ್.ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ,  ನಾಗೇಂದ್ರ ಶಾ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದು, ಕೃಷ್ಣ ಮೂರ್ತಿ ಕವುತಾರ್ ಜನರನ್ನು ದಾರಿ ತಪ್ಪಿಸುವ ಜೋತಿಷಿಯ ಪಾತ್ರ ಮಾಡಿದ್ದಾರೆ. ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಉಳಿದ ಪಾತ್ರವರ್ಗದಲ್ಲಿದ್ದಾರೆ,
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಾಯಕನಾಗಿ ಭಡ್ತಿಪಡೆದ ಧರ್ಮಣ್ಣ ರಾಜಯೋಗ ಫಸ್ಟ್ ಲುಕ್ ಅನಾವರಣ - Chitratara.com
Copyright 2009 chitratara.com Reproduction is forbidden unless authorized. All rights reserved.