Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸದ್ದು ಮಾಡುತ್ತಿದೆ ಆದಿಪುರುಷ್ ಟ್ರೇಲರ್
Posted date: 10 Wed, May 2023 11:34:27 AM
ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ `ಆದಿಪುರುಷ್` ಚಿತ್ರದ ಟ್ರೇಲರ್ ಮೊದಲು ಹೈದರಬಾದ್‌ನಲ್ಲಿ, ನಂತರ ಮುಂಬೈದಲ್ಲಿ ದೊಡ್ಡ ಇವೆಂಟ್ ನಡೆಸಿ ಅಲ್ಲಿಯೂ ಎರಡನೆ ಬಾರಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಏಕಕಾಲಕ್ಕೆ 70 ದೇಶಗಳಲ್ಲಿ ತುಣುಕುಗಳು ಹೊರ ಬಂದಿರುವುದು ವಿಶೇಷ. ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್ ನಿರ್ದೇಶನದಲ್ಲಿ, `ಟಿ` ಸೀರೀಸ್‌ನ ಭೂಷಣ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮಿಕಿ ಬರೆದ ರಾಮಾಯಣದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ.
 
ಇದು ನನ್ನ ಪ್ರಭು ರಾಮನ ಕಥೆ. ಮನುಷ್ಯನಾಗಿ ಹುಟ್ಟಿದವ ದೇವರಾದ ಚರಿತೆ. ಅವನ ಬದುಕೆ ಘನತೆಯ ಉತ್ಸವ. ಅದಕ್ಕೆ ಆತನ ಹೆಸರು ರಾಘವ’ ಎನ್ನುವ ಸಂಭಾಷಣೆಯೊಂದಿಗೆ ಶುರುವಾಗುವ 3.15 ನಿಮಿಷದ ಟ್ರೇಲರ್ ನೋಡುಗರನ್ನು ಹೆಚ್ಚು ಆಕರ್ಷಿಸಿದೆ. ಉನ್ನತ ದರ್ಜೆಯ ದೃಶ್ಯಗಳು, ಬೃಹತ್ ಪ್ರಮಾಣದ ಹಿಡಿತದ ಕಥಾವಸ್ತು ಮತ್ತು ನಕ್ಷತ್ರದಂತೆ ಹೊಳೆಯುವ ಸಿನಿಮಾದ ಸೀನ್ಸ್‌ಗಳು ಪ್ರಪಂಚದ ಒಂದು ನೋಟವನ್ನು ನೀಡಲಿದೆ.  
 
ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿಸನೂನ್, ರಾವಣನಾಗಿ ಸೈಫ್‌ಆಲಿಖಾನ್ ಮತ್ತು ಸನ್ನಿಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ದೇವದತ್ತನಾಗೆ, ವತ್ಸಲ್‌ಸೇತ್, ಸೋನಾಲ್‌ಚೌಹಾಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್‌ಪಳನಿ, ಸಂಕಲನ ಅಪೂರ್ವ ಮೋತಿವಾಲೆಸಹಾಯ್-ಆಶಿಷ್‌ಮಾತ್ರ. ಅಂದಹಾಗೆ ಸಿನಿಮಾವು ಜೂನ್ 12ರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3D ಮಾದರಿಯಲ್ಲಿ ತೆರೆಗೆ ಬರುತ್ತಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ದು ಮಾಡುತ್ತಿದೆ ಆದಿಪುರುಷ್ ಟ್ರೇಲರ್ - Chitratara.com
Copyright 2009 chitratara.com Reproduction is forbidden unless authorized. All rights reserved.