Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೌರಿಶ್ರೀ ನಿರ್ದೇಶನದ ಮಹಿಳಾಪ್ರಧಾನ ರೀತು ಚಿತ್ರಕ್ಕೆ ಚಾಲನೆ
Posted date: 17 Wed, May 2023 09:38:08 AM
ಕನ್ನಡದಲ್ಲಿ ಕವಿತಾ ಲಂಕೇಶ್, ರೂಪಾ ಅಯ್ಯರ್, ಸುಮನಾ ಕಿತ್ತೂರು ಸೇರಿದಂತೆ ಹಲವಾರು ಮಹಿಳಾ ನಿರ್ದೇಶಕಿಯರಿದ್ದಾರೆ. ಆ ಸಾಲಿಗೆ ಸೇರಿರುವ  ಗೌರಿಶ್ರೀ ಈಗಾಗಲೇ ೨ ಚಿತ್ರಗಳನ್ನು ನಿರ್ದೇಶಿಸಿದ್ದು, ಮೂರನೇ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ನಿರ್ದೇಶಕಿ, ನಿರ್ಮಾಪಕಿಯೂ ಆದ ಗೌರಿಶ್ರೀ ಕನ್ನಡದಲ್ಲಿ ಸಹ ಕಲಾವಿದೆಯಾಗಿ ಸುಮಾರು ನೂರರಿಂದ 150  ಮಹಿಳಾಪ್ರದಾನ ಕಥಾಹಂದರ ಹೊಂದಿರುವ ರೀತು ಹೆಸರಿನ ಆ ಚಿತ್ರದ ಮುಹೂರ್ತ ಸಮಾರಂಭ ಆಡುಗೋಡಿಯ ಪಟಾಲಮ್ಮ ದೇವಸ್ಥಾನದಲ್ಲಿ ನೆರವೇರಿತು. ಪ್ರೇಮಂ ಪೂಜ್ಯಂ, ಜೂಲಿಯೆಟ್-೨ ಖ್ಯಾತಿಯ ಬೃಂದಾ ಆಚಾರ್ಯ ಚಿತ್ರದ ನಾಯಕಿಯಾಗಿದ್ದು, ಮಡೇನೂರು ಮನು, ಪ್ರಫುಲ್ ಸುರೇಂದ್ರ ಹಾಗೂ ಆರ್ಯನ್ ಮೂವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ವಿ೨ ಪ್ರೊಡಕ್ಷನ್ಸ್ ಮೂಲಕ ಆನಂದ್ ಹಲಗಪ್ಪ ಹಾಗೂ ಹೇಮಂತ್ ಹೆಚ್.ಕೆ. ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ, 
 
ಮುಹೂರ್ತದ ನಂತರ ಮಾತನಾಡಿದ ನಿರ್ದೇಶಕಿ ಗೌರಿಶ್ರೀ, ಜನರಕ್ಷಕ ಹಾಗೂ ಅಮೂಲ್ಯ ನಂತರ ನನ್ನ ನಿರ್ದೇಶನದ ಮೂರನೇ ಚಿತ್ರವಿದು. ನಾನು ಒಮ್ಮೆ ಮಂಡ್ಯಗೆ ಹೋದಾಗ ಈ ಘಟನೆಯ ಬಗ್ಗೆ  ತಿಳಿದುಕೊಂಡಿದ್ದೆ, ಒಬ್ಬ ಹುಡುಗಿಯ ಜೀವನದಲ್ಲಿ ನಡೆಯುವ ಕಥೆ. ಆಕೆಯ ಹಣೆಬರಹ ಸರಿ ಇಲ್ಲದಿದ್ರೆ ಜನ ಆಕೆಯನ್ನು ಹೇಗೆಲ್ಲ ನೋಡ್ತಾರೆ, ಅಲ್ಲದೆ ತುಂಬಿದ ಫ್ಯಾಮಿಲಿಯಲ್ಲಿ ಒಬ್ಬ ಹುಡುಗಿ ಹೇಗೆ ತುಂಬಾ ಇಂಪಾರ್ಟೆಂಟ್ ಆಗಿರ‍್ತಾಳೆ. ಮದುವೆಯಾದ ನಂತರ ಆಕೆಯ ಲೈಫ್ ಹೇಗೆ ಬದಲಾಗುತ್ತೆ ಎಂಬುದನ್ನು ರೀತು ಚಿತ್ರದ ಮೂಲಕ ಹೇಳಹೊರಟಿದ್ದೇನೆ. ಬೆಂಗಳೂರು, ಮೈಸೂರು, ಮಂಡ್ಯ, ಊಟಿ, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆಯಿದೆ ಎಂದು ಹೇಳಿದರು. 
 
ಗೌರಿಶ್ರೀ ಒಬ್ಬ ನೃತ್ಯಸಂಯೋಜಕಿಯೂ ಹೌದು, ತಮ್ಮದೇ ಆದ ನೃತ್ಯಶಾಲೆಯನ್ನು ಹೊಂದಿದ್ದು,  ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದು ನಿರ್ದೇಶನ  ಮಾಡಿದ್ದಾರೆ, 
 
ನಂತರ ನಾಯಕಿ ಬೃಂದಾ ಆಚಾರ್ಯ ಮಾತನಾಡಿ ಜೂಲಿಯೆಟ್ ನಂತರ ಮಾಡುತ್ತಿರುವ ಮತ್ತೊಂದು ಫೀಮೇಲ್ ಲೀಡ್ ಚಿತ್ರ, ನನ್ನದು ರೀತು ಎಂಬ ಪಾತ್ರ, ಆಕೆಯ ಮೇಲೆ ಇಡೀ ಕಥೆ ನಡೆಯುತ್ತದೆ, ಆಕೆಯ ಹೋರಾಟದ ಜರ್ನಿ ತುಂಬಾ  ಚೆನ್ನಾಗಿದೆ. ಮಹಿಳಾ ನಿರ್ದೇಶಕಿಯ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಎಂದರು. ನಾಯಕರಲ್ಲೊಬ್ಬರಾದ ಪ್ರಫುಲ್ ಮಾತನಾಡಿ ನಾನು ಒಂದಷ್ಟು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದೆ, ಪಾತ್ರ ತುಂಬಾ ಚೆನ್ನಾಗಿದೆ ಎಂದರು. ಮತ್ತೊಬ್ಬ ನಾಯಕಿ ಆರ್ಯನ್ ಮಾತನಾಡಿ ಈ ಹಿಂದೆ ವೇಷಧಾರಿ, ಗ್ರೂಫಿ ಚಿತ್ರಗಳಲ್ಲಿ ನಟಿಸಿದ್ದೆ, ನನ್ನ ಮೊದಲ ಚಿತ್ರವಿದು. ಪಾತ್ರವೂ ತುಂಬಾ ಚೆನ್ನಾಗಿದೆ ಎಂದರು. ನಟ ಲಯೇಂದ್ರ ಮಾತನಾಡಿ  ಈ ಕಥೆಯನ್ನು ನಾನೇ ಮೊದಲು ಕೇಳಿದ್ದೆ,  ಆಕೆಯ ಹೋರಾಟ, ಟ್ರಾಜಿಡಿ ಕಥೆ ಜನರಿಗೆ ಇಂಪ್ಯಾಕ್ಟ್ ಆಗುತ್ತೆ, ಕಥೆ ತುಂಬಾ ಚೆನ್ನಾಗಿದ್ದು, ಅದನ್ನು ಹೇಗೆ ಪ್ರೆಸೆಂಟ್ ಮಾಡುತ್ತಾರೆ ಎನ್ನುವುದರ ಮೇಲೆ ಸಿನಿಮಾ ನಿಂತಿದೆ ಎಂದರು. ನಾಯಕಿಯ ತಂದೆಯ ಪಾತ್ರ ಮಾಡಿರುವ ಆಡುಗೋಡಿ ಶ್ರೀನಿವಾಸ್, ಶಿವಕುಮಾರ್ ಆರಾಧ್ಯ ಚಿತ್ರದ ಕುರಿತು ಮಾತನಾಡಿದರು, ನಟಿಯರಾದ ಜಾಹ್ನವಿ, ತೇಜಸ್ವಿನಿ ತಂತಮ್ಮ ಪಾತ್ರಗಳನ್ನು  ವಿವರಿಸಿದರು. ಸಂಗೀತ ಕಾರ್ಯ ಕ್ರಮಗಳನ್ನು ನಿರ್ದೇಶಕ ಹೇಮಂತ್‌ಕುಮಾರ್ ಮಾತನಾಡಿ ಚಿತ್ರದಲ್ಲಿ ೫ ಹಾಡುಗಳಿದ್ದು ಎಲ್ಲವೂ ವಿಭಿನ್ನವಾಗಿವೆ ಎಂದರು. ಛಾಯಾಗ್ರಾಹಕ ಸಂದೀಪ್ ಹೊನ್ನಳ್ಳಿ ಮಾತನಾಡಿ ಹಿಂದೆ ಧೀರನ್ ಚಿತ್ರದಲ್ಲಿ ಕೆಲಸ ಮಾಡಿದ್ದೆ. ಮೊದಲಬಾರಿಗೆ ಲೇಡಿ ಡೈರೆಕ್ಟರ್ ಜೊತೆ ಕೆಲಸ ಮಾಡುತ್ತಿರುವುದು ಹೊಸ ಅನುಭವ ಎಂದು ಹೇಳಿದರು. ಇನ್ನು ಈ ಚಿತ್ರದಲ್ಲಿ ನಿರ್ದೇಶಕ ನಾಗೇಂದ್ರ ಅರಸ್ ಅವರು ನಾಯಕಿಯ ಅಣ್ಣನಾಗಿ, ಅಲ್ಲದೆ ಹಿರಿಯನಟ ಶೋಭರಾಜ್ ಭಾವನಾಗಿ ನಟಿಸುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೌರಿಶ್ರೀ ನಿರ್ದೇಶನದ ಮಹಿಳಾಪ್ರಧಾನ ರೀತು ಚಿತ್ರಕ್ಕೆ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.