Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನ್ನಡದಲ್ಲಿಯೂ ಲಭ್ಯ ತಮಿಳಿನ `ವಿಡುದಲೈ` ಸಿನಿಮಾ..Zee5 ಒಟಿಟಿಯಲ್ಲಿ ವೆಟ್ರಿಮಾರನ್-ವಿಜಯ್ ಸೇತುಪತಿ ಕಾಂಬೋದ ಚಿತ್ರಕ್ಕೆ ಪ್ರೇಕ್ಷಕ ಫಿದಾ
Posted date: 20 Sat, May 2023 01:59:54 PM
ತಮಿಳು ಚಿತ್ರರಂಗದ ಮಾಸ್ ಡೈರೆಕ್ಟರ್ ವೆಟ್ರಿಮಾರನ್ ನಿರ್ದೇಶನದ ವಿಡುದಲೈ ಸಿನಿಮಾ Zee5 ಒಟಿಟಿಯಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ವಿಜಯ್ ಸೇತುಪತಿ, ಸೂರಿ, ಕನ್ನಡದ ಸರ್ದಾರ್ ಸತ್ಯ, ಪ್ರಕಾಶ್ ರೈ, ಗೌತಮ್ ಮೆನನ್ ಸೇರಿದಂತೆ ಹಲವರು ನಟಿಸಿರುವ ಈ ಚಿತ್ರ ಈಗ ಕನ್ನಡದಲ್ಲಿಯೂ ಲಭ್ಯವಿದೆ.

ಇತ್ತೀಚೆಗೆ ಪರಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದ್ದು, ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಈಗ ವಿಡುದಲೈ ಸಿನಿಮಾ ಕೂಡ ಕನ್ನಡದಲ್ಲಿ ನೋಡುವ ಅವಕಾಶ ದೊರೆತಿದೆ. ಮೂಲ ತಮಿಳಿನ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ Zee5 ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ.  

ಆರ್‌.ಎಸ್‌. ಇನ್ಫೋಟೈನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಎಸ್. ಎಲ್ರೆಡ್ ಕುಮಾರ್ ಅದ್ಧೂರಿಯಾಗಿ ವಿಡುದಲೈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಾನ್ಸ್ಟೆಬಲ್ ಹಾಗೂ ಶಸಸ್ತ್ರ ಕ್ರಾಂತಿಕಾರಿ ಹೋರಾಟಗಾರನೊಬ್ಬನ ನಡುವಿನ ಕತೆಯನ್ನು ಒಳಗೊಂಡ ಈ ಚಿತ್ರ ಎರಡು ಭಾಗದಲ್ಲಿ ತೆರೆಗೆ ಬರ್ತಿದೆ. ಮೊದಲ ಪಾರ್ಟ್ ಗೆ ಈಗಾಗ್ಲೇ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಸದ್ಯ ಎರಡನೇ ಭಾಗದ ಶೂಟಿಂಗ್ ಭರದಿಂದ ಸಾಗುತ್ತಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡದಲ್ಲಿಯೂ ಲಭ್ಯ ತಮಿಳಿನ `ವಿಡುದಲೈ` ಸಿನಿಮಾ..Zee5 ಒಟಿಟಿಯಲ್ಲಿ ವೆಟ್ರಿಮಾರನ್-ವಿಜಯ್ ಸೇತುಪತಿ ಕಾಂಬೋದ ಚಿತ್ರಕ್ಕೆ ಪ್ರೇಕ್ಷಕ ಫಿದಾ - Chitratara.com
Copyright 2009 chitratara.com Reproduction is forbidden unless authorized. All rights reserved.