Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಮೀಟರ್ ಹಾಕಿ ಪ್ಲೀಸ್`` ಅಂತಿದ್ದಾರೆ ವಿನಾಯಕ ಜೋಶಿ .ಇದು ಆಟೋ ಚಾಲಕರ ಬದುಕು ಹಾಗೂ ಸಾಧನೆಗಳ ಪರಿಚಯಿಸುವ ಅಪರೂಪದ ಕಾರ್ಯಕ್ರಮ .
Posted date: 25 Thu, May 2023 11:00:14 AM
"ನಮ್ಮೂರ ಮಂದಾರ ಹೂವೆ" ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ವಿನಾಯಕ ಜೋಶಿ ಈತನಕ ಸುಮಾರು 85ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನಾಗಷ್ಟೇ ಅಲ್ಲದೆ, ವಿನಾಯಕ ಜೋಶಿ ಆರ್ ಜೆ ಹಾಗೂ ನಿರೂಪಕನಾಗೂ ಚಿರಪರಿಚಿತ.

ಪ್ರಸ್ತುತ ವಿನಾಯಕ ಜೋಶಿ, ತಮ್ಮದೇ ಆದ ಜೋಶಿ ಚಿತ್ರ ಲಾಂಛನದಲ್ಲಿ ‌"ಮೀಟರ್ ಹಾಕಿ ಪ್ಲೀಸ್ " ಎಂಬ ವೆಬ್ ಸೀರಿಸ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ಹಾಗೂ ನಿರೂಪಣೆ ಕೂಡ ಅವರದೆ. ಇತ್ತೀಚೆಗೆ ಈ ವೆಬ್ ಸಿರೀಸ್ ನ ಟ್ರೇಲರ್ ಬಿಡುಗಡೆ ಹಾಗೂ ಮೊದಲ  ಸಂಚಿಕೆ ಪ್ರದರ್ಶನ ನಡೆಯಿತು.‌ ಅಮೋಘವರ್ಷ(ಗಂಧದಗುಡಿ ಖ್ಯಾತಿ), ಧರ್ಮೇಂದ್ರ ಕುಮಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ವೆಬ್ ಸಿರೀಸ್ ಗೆ ಶುಭ ಕೋರಿದರು.

ಬಾಲನಟನಾಗಿ ಬಂದ ನಾನು, ನಾಯಕನೂ ಆದೆ. ಆನಂತರ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ಕೆಲವು ವರ್ಷಗಳ ಹಿಂದೆ "ಜೋಶ್ ಲೆ" ಎಂಬ ವೆಬ್ ಸಿರೀಸ್ ನಿರ್ಮಿಸಿದ್ದೆ. ಈಗ "ಮೀಟರ್ ಹಾಕಿ ಪ್ಲೀಸ್" ಎಂಬ ವಿಭಿನ್ನ ವೆಬ್ ಸಿರೀಸ್ ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನು ಮಾಡಿದ್ದೇನೆ. ಆಟೋ ಚಾಲಕರ ಜೀವನ ಹಾಗೂ ಸಾಧನೆಯನ್ನು ಪರಿಚಯಿಸುವ ವೆಬ್ ಸಿರೀಸ್ ಇದಾಗಿದೆ. ಸುಮಾರು ಏಳು ಕಂತುಗಳಲ್ಲಿ ಯೂಟ್ಯೂಬ್ ಹಾಗೂ Spotify ನಲ್ಲಿ ಇದು ಪ್ರಸಾರವಾಗಲಿದೆ. ಕರ್ನಾಟಕದಾದ್ಯಂತ ಇರುವ ಹತ್ತಕ್ಕೂ ಹೆಚ್ಚು ಜನಪ್ರಿಯ ಆಟೋಚಾಲಕರನ್ನು ಸಂದರ್ಶಿಸಿದ್ದೇನೆ.‌ 40 ನಿಮಿಷಗಳ ಕಾಲ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ನಮ್ಮ‌ ಸುಮಾರು 25 ಜನರ ತಂಡದ ಪರಿಶ್ರಮದಿಂದ ಈ ವೆಬ್ ಸಿರೀಸ್ ಮೂಡಿಬಂದಿದೆ. ಹಲವು ಪ್ರಾಯೋಜಕರ ಬೆಂಬಲ ನಮ್ಮಗಿದೆ ಎಂದು ವಿನಾಯಕ ಜೋಶಿ "ಮೀಟರ್ ಹಾಕಿ ಪ್ಲೀಸ್" ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಆಟೋ ಚಾಲಕರನ್ನು ಸನ್ಮಾನಿಸಲಾಯಿತು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಮೀಟರ್ ಹಾಕಿ ಪ್ಲೀಸ್`` ಅಂತಿದ್ದಾರೆ ವಿನಾಯಕ ಜೋಶಿ .ಇದು ಆಟೋ ಚಾಲಕರ ಬದುಕು ಹಾಗೂ ಸಾಧನೆಗಳ ಪರಿಚಯಿಸುವ ಅಪರೂಪದ ಕಾರ್ಯಕ್ರಮ . - Chitratara.com
Copyright 2009 chitratara.com Reproduction is forbidden unless authorized. All rights reserved.