Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಾಲಿ ಧನಂಜಯ ಕೈಲಿ `ತೋತಾಪುರಿ`ವಿಭಿನ್ನ ಗೆಟಪ್‌ಗಳಲ್ಲಿ ನಟರಾಕ್ಷಸ ಅಬ್ಬರ
Posted date: 03 Thu, Aug 2023 02:27:13 PM
ಹಾಡು ಮತ್ತು ಟ್ರೇಲರ್ ಮೂಲಕ ಸದ್ದು ಮಾಡಿದ್ದ `ತೋತಾಪುರಿ`, ಬಿಡುಗಡೆಯಾದ ಮೇಲೂ ಗಮನ ಸೆಳೆದಿತ್ತು. ಇದೀಗ `ತೋತಾಪುರಿ-2`ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಹರಿಬಿಟ್ಟ ಈ ಸಿನಿಮಾದ ಪೋಸ್ಟರ್‌ಗಳು ಹಾಗೂ ಹಾಡೊಂದು ನಾನಾ ಕಾರಣಗಳಿಂದಾಗಿ ಸದ್ದು ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಜಗ್ಗೇಶ್-ಡಾಲಿ ಧನಂಜಯ್ ಕಾಂಬಿನೇಷನ್ ಇದೇ ಮೊದಲ ಬಾರಿಗೆ ಎಂಬುದು ಒಂದೆಡೆಯಾದರೆ, ಎರಡು ಭಾಗಗಳಲ್ಲಿ ಮೂಡಿಬಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಕಾನಿಸಿಕೊಂಡಿರೋದು ವಿಶೇಷ.

ಡಾಲಿ ಧನಂಜಯ್ ಈವರೆಗೂ ವಿಭಿನ್ನ ರೀತಿಯ ಪಾತ್ರಗಳ ಮೂಲಕ ಮಿಂಚು ಹರಿಸಿದ್ದಾರೆ. ಅವರು ನಟಿಸಿರುವ ಪಾತ್ರಗಳಲ್ಲಿ ನಾಯಕ-ಖಳನಾಯಕನಾಗಿ ಅಬ್ಬರಿಸಿದ್ದಾರೆ. ಇದೀಗ `ತೋತಾಪುರಿ-2` ಮೂಲಕ ಮತ್ತಷ್ಟು ಸೌಂಡು ಮಾಡಲು ಸಜ್ಜಾಗಿದ್ದಾರೆ ಡಾಲಿ.

ಈಗಾಗಲೇ ತೋತಾಪುರಿ ಮೊದಲ ಭಾಗದಲ್ಲಿ ಅವರ ಪಾತ್ರದ ಪರಿಚಯವಾಗಿತ್ತು. ಆದರೆ ಅವರು ಎಷ್ಟು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಗೆಟಪ್, ಡೈಲಾಗ್ ಇತ್ಯಾದಿ ವಿಷಯಗಳ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ಹೊರ ಹಾಕಿರಲಿಲ್ಲ. ಇದೀಗ `ತೋತಾಪುರಿ-2` ಬಿಡುಗಡೆಯ ಹಂತಕ್ಕೆ ಬಂದಿದೆ. ಹೀಗಾಗಿ ಅವರ ಪಾತ್ರದ ಬಗ್ಗೆ ಒಂದಷ್ಟು ವಿವರಣೆ ಹೊರಬಿದ್ದಿದೆ.

ನಾರಾಯಣ್ ಪಿಳ್ಳೈ ಎಂಬ ಪಾತ್ರ ನಿರ್ವಹಿಸುತ್ತಿರುವ ಡಾಲಿ, ಬೃಹತ್ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಲೈಫ್‌ಸ್ಟೈಲ್, ಲವ್‌ಸ್ಟೋರಿ ಸೇರಿದಂತೆ ಇನ್ನಿತರ ವಿಷಯಗಳ್ನು `ತೋತಾಪುರಿ-2`ರಲ್ಲಿ ತೆರೆದಿಡುವ ಪ್ರಯತ್ನವಾಗಿದೆಯಂತೆ. ಇತ್ತೀಚೆಗಷ್ಟೇ ಡಾಲಿ ಹಾಗೂ ಸುಮನ್ ರಂಗನಾಥ್ ಕಾಣಿಸಿಕೊಂಡಿರುವ `ಮೊದಲ ಮಳೆ` ಹಾಡು ಬಿಡುಗಡೆಯಾಗಿದ್ದು. ಇದೀಗ `ಲಾಂಗ್ ಡ್ರೈವ್ ಹೋಗೋಣ` ಎಂಬ ಹಾಡು ಸಹ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಡಾಲಿ ಮೂರ‍್ನಾಲ್ಕು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಶೇಡ್ ಕೂಡ ಇರಲಿದೆ ಎಂಬುದು ಸದ್ಯದ ಮಾಹಿತಿ. ಈವರೆಗೂ ಕಾಣಿಸಿಕೊಂಡಿರದ ಸ್ಟೈಲ್, ಮಾತಿನ ಲಹರಿ `ತೋತಾಪುರಿ-2` ಮೂಲಕ ಅನಾವರಣ ಮಾಡಲು ಸಜ್ಜಾಗಿದೆ ಚಿತ್ರತಂಡ. ಬಿಡುಗಡೆಗೂ ಮುನ್ನ ಡಾಲಿ ಗೆಟಪ್‌ಗಳನ್ನು ಹರಿಬಿಟ್ಟಿರುವ ಚಿತ್ರತಂಡ, ಸಿನಿಮಾ ಮೇಲೆ ನೀರಿಕ್ಷೆ ಹೆಚ್ಚುವಂತೆ ಮಾಡಿದೆ. ಮೈಸೂರು, ಕೂರ್ಗ್, ಕೇರಳ ಸೇರಿದಂತೆ ರಮಣೀಯ ಸ್ಥಳಗಳಲ್ಲಿ ಡಾಲಿ-ಸುಮನ್ ಅಭಿನಯಿಸಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಇನ್ನು ಡಾಲಿ ಜೋಡಿಯಾಗಿ ಸುಮನ್ ರಂಗನಾಥ್ ನಟಿಸಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಬೃಹತ್ ತಾರಾಗಣವೇ ಇದೆ. ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಾಲಿ ಧನಂಜಯ ಕೈಲಿ `ತೋತಾಪುರಿ`ವಿಭಿನ್ನ ಗೆಟಪ್‌ಗಳಲ್ಲಿ ನಟರಾಕ್ಷಸ ಅಬ್ಬರ - Chitratara.com
Copyright 2009 chitratara.com Reproduction is forbidden unless authorized. All rights reserved.