Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಾಯಕ ಶ್ರೀ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಶುಭಕೋರಿದ``ಜಸ್ಟ್ ಪಾಸ್``ಚಿತ್ರತಂಡ
Posted date: 08 Fri, Sep 2023 09:45:05 AM
ಕೆ.ಎಂ.ರಘು ನಿರ್ದೇಶನದ "ಜಸ್ಟ್ ಪಾಸ್" ಚಿತ್ರದ ನಾಯಕ ಶ್ರೀ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ನಾಯಕನ ಹುಟ್ಟುಹಬ್ಬಕ್ಕೆ ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಶುಭಾಶಯ ತಿಳಿಸಿದೆ. 
 
ಈ ಹಿಂದೆ "ಇರುವುದೆಲ್ಲವ ಬಿಟ್ಟು" "ಗಜಾನನ ಅಂಡ್ ಗ್ಯಾಂಗ್ " "ಹೊಂದಿಸಿ ಬರೆಯಿರಿ" ಚಿತ್ರಗಳಲ್ಲಿ ನಟಿಸಿರುವ ನಾಯಕ ಶ್ರೀ ಅವರಿಗೆ   "ಜಸ್ಟ್ ಪಾಸ್" ನಾಲ್ಕನೇ ಚಿತ್ರ. 

ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್  ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.       ಶ್ರೀ ಅವರಿಗೆ ನಾಯಕಿಯಾಗಿ ಪ್ರಣತಿ ಅಭಿನಯಿಸಿದ್ದಾರೆ.   ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ(ಕಾಂತಾರ), ಪ್ರಕಾಶ್ ತುಮ್ಮಿನಾಡು, ಗೋವಿಂದೇಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸುಜಯ್ ಕುಮಾರ್ ಈ ಚಿತ್ರದ ಛಾಯಾಗ್ರಾಹಕರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಾಯಕ ಶ್ರೀ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಶುಭಕೋರಿದ``ಜಸ್ಟ್ ಪಾಸ್``ಚಿತ್ರತಂಡ - Chitratara.com
Copyright 2009 chitratara.com Reproduction is forbidden unless authorized. All rights reserved.