ಉತ್ತರ ಕರ್ನಾಟಕದ ಸೊಗಡಿನ ಸಿನಿಮಾ ಸೋಮು ಸೌಂಡ್ ಇಂಜಿನಿಯರ್...ಸುಕ್ಕ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ಚೊಚ್ಚಲ ಹೆಜ್ಜೆ ಇದು. ವಿಭಿನ್ನ ಶೀರ್ಷಿಕೆ ಜೊತೆಗೆ ವಿಭಿನ್ನ ಕಥಾಹಂದರ ಹೊಂದಿರುವ ಸೋಮು ಸೌಂಡ್ ಇಂಜಿನಿಯರ್ ಸಿನಿಮಾದ ಮೊದಲ ಗಾನಲಹರಿ ಅನಾವರಣಗೊಂಡಿದೆ.
ಎ2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಸೋಮು ಸೌಂಡ್ ಇಂಜಿನಿಯರ್ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ.
ಧನಂಜಯ್ ರಂಜನ್ ಕ್ಯಾಚಿ ಮ್ಯಾಚಿ ಸಾಹಿತ್ಯದ ಹಾಡಿಗೆ ಸ್ವರೂಪ್ ಖಾನ್ ಧ್ವನಿಯಾಗಿ, ಚರಣ್ ರಾಜ್ ಟ್ಯೂನ್ ಹಾಕಿದ್ದಾರೆ. ನಾಯಕ ಸೋಮು ಹಾವ-ಭಾವ, ವರ್ತನೆಯನ್ನು ಈ ಹಾಡಿನಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿಬಂದಿರುವ ಹಾಡಿಗೆ ಚರಣ್ ಅದ್ಭುತವಾದ ಮ್ಯೂಸಿಕ್ ಟಚ್ ಕೊಟ್ಟಿದ್ದು, ಶ್ರೇಷ್ಠ ಅಭಿನಯ ಅಮೋಘವಾಗಿದೆ.
ಸಲಗದ ಕೆಂಡ ಖ್ಯಾತಿಯ ಶ್ರೇಷ್ಠ ನಾಯಕನಾಗಿ, ಶೃತಿ ಪಾಟೀಲ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಜಹಾಂಗೀರ್, ಅಪೂರ್ವ,ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ವೈದ್ಯರಾಗಿರುವ ಕ್ರಿಸ್ಟೋಪರ್ ಕಿಣಿ ಸೋಮ ಸೌಂಡ್ ಇಂಜಿನಿಯರ್ ಗೆ ಹಣ ಹಾಕಿದ್ದು, ಮಾಸ್ತಿ ಮಾತು ಪೊಣಿಸಿದ್ದಾರೆ. ಶಿವಸೇನಾ ಕ್ಯಾಮೆರಾ ಕೈಚಳಕ, ಚರಣ್ ಸಂಗೀತದ ಪುಳಕ ಚಿತ್ರದ ಫ್ಲಸ್ ಪಾಯಿಂಟ್. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್ ಗಂಜಿಹಾಳ ಕೂಡಲಸಂಗಮದ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಕಡ್ಡಿಪುಡಿ, ಕೆಂಡಸಂಪಿಗೆ, ದೊಡ್ಡಮನೆ ಹುಡುಗ, ಟಗರು ಚಿತ್ರಗಳಿಗೂ ಡೈರೆಕ್ಟರ್ ಅಭಿ ಸಹ ನಿರ್ದೇಶಕರಾಗಿ ದುಡಿದಿದ್ದ ಅಭಿ ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಸೋಮು ಸೌಂಡ್ ಇಂಜಿನಿಯರ್ ಬಳಗ ರೀ ರೆಕಾರ್ಡಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ.