Chief Editor
Manohar. R (Manu)
Photo Journalist
chitrataramanu@gmail.com
+91 9845549026
ಇದೇ ತಿಂಗಳಲ್ಲಿ ದಿಗ್ವಿಜಯ ಬಿಡುಗಡೆ
Posted date: 11 Mon, Sep 2023 08:48:35 AM
ಸುಮಾರು 65 ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಹಾಗೂ ಸೀಯು, ಕರ್ತ ಚಿತ್ರಗಳನ್ನು ನಿರ್ದೇಶಿಸಿರುವ ದುರ್ಗಾ ಪಿ.ಎಸ್.  ಹಾಗೂ ಹೊನ್ನವಳ್ಳಿ ಶ್ರಿಕಾಂತ್ ಜಂಟಿಯಾಗಿ ನಿರ್ದೇಶಿಸಿರುವ ದಿಗ್ವಿಜಯ ಚಿತ್ರಕ್ಕೆ “ಯು” ಸರ್ಟಿಫಿಕೇಟ್ ಸಿಕ್ಕಿದ್ದು ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.
 
ಒಬ್ಬ  ವರದಿಗಾರ ಮನಸು ಮಾಡಿದ್ರೆ ಸಮಾಜದ ಎಷ್ಟೇ ದೊಡ್ಡ ಸಮಸ್ಯೆಯನ್ನಾದರೂ  ಬಗೆಹರಿಸಬಹುದು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಆತ ಒಬ್ಬ ಅರೆ ಹುಚ್ಚನನ್ನು ಮುಂದಿಟ್ಟುಕೊಂಡು ಕೇವಲ ಮೂರು ದಿನದಲ್ಲಿ ರಾಜ್ಯದ ಎಲ್ಲಾ ರೈತರ ಸಾಲವನ್ನು ಮನ್ನಾ  ಮಾಡಿಸುತ್ತಾನೆ. ಅದು ಹೇಗೆ ಎನ್ನುವುದೇ ಚಿತ್ರದ ಕಥಾಹಂದರ. ಚಿತ್ರದಲ್ಲಿ ನಾಯಕನ ತಂದೆ, ತಾಯಿ ಕೂಡ ರೈತರೇ ಆಗಿದ್ದು, ಅವರೂ  ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಳೆನಷ್ಠ ಅನುಭವಿಸಿ, ತಂದೆ ತಾಯಿ ವಿಷ ಸೇವಿಸಿದ ಶಾಕ್ ನಿಂದ ನಾಯಕನ ಗೆಳೆಯ ಅರೆ ಹುಚ್ಚನಾಗಿರುತ್ತಾನೆ.
     
ಈ ಚಿತ್ರವನ್ನು  ಜೆ.ಪಿ. ಎಂಟರ್ ಟೈನ್ ಮೆಂಟ್ ಅಡಿ  ಜಯಪ್ರಭು ಆರ್. ಲಿಂಗಾಯತ್,  ಅರುಣ್ ಸುಕದರ್ ಹಾಗೂ  ಹರೀಶ್ ಆರ್.ಸಿ. ಅವರು  ನಿರ್ಮಾಣ ಮಾಡಿದ್ದಾರೆ.  ಈ ಚಿತ್ರವು ಗೋವಾ ಫಿಲಂ ಫೆಸ್ಟಿವಲ್ ಹಾಗೂ ಜಮ್ಮು ಕಾಶ್ಮೀರದಲ್ಲಿ ನಡೆದ ಚಿತ್ರೋತ್ಸವದಲ್ಲಿ  ಪ್ರದರ್ಶನಗೊಂಡು ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಹಾಗು ನಾಯಕನಿಗೆ ಬೆಸ್ಟ್ ಹೀರೋ  ಪ್ರಶಸ್ತಿ ಗಳಿಸಿದೆ. ಈ ಚಿತ್ರಕ್ಕೆ ದುರ್ಗಾ ಪಿ. ಎಸ್.  ಹಾಗೂ ಹೊನ್ನವಳ್ಳಿ ಶ್ರೀಕಾಂತ್  ಸೇರಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಕಲನದ ಜೊತೆ  ನಿರ್ದೇಶನ ಕೂಡ ಮಾಡಿದ್ದಾರೆ. ಜಯಪ್ರಭು ಆರ್ ಲಿಂಗಾಯತ್ ಅವರೇ ಚಿತ್ರದ ನಾಯಕನಾಗಿ ನಟಿಸಿದ್ದು,  ಸ್ನೇಹ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.
 
ಸುಚೇಂದ್ರ ಪ್ರಸಾದ್,  ಪಟ್ರೆ ನಾಗರಾಜ್,  ಹೊನ್ನವಳ್ಳಿ ಕೃಷ್ಣ, ಹೊನ್ನವಳ್ಳಿ ಶ್ರೀಕಾಂತ್ , ಕಿಲ್ಲರ್ ವೆಂಕಟೇಶ್, ಶಿವಕುಮಾರ್ ಆರಾಧ್ಯ, ರಾಹುಲ್,ಆಕಾಶ್ ಎಂ ಪಿ, ರಮಿತ ರಿತಿಕಯಲ್ಲಪ್ಪ ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು ಹರ್ಷ ಸಂಗೀತ ನೀಡಿದ್ದಾರೆ. ವೀನಸ್ ಮೂರ್ತಿ ಅವರ ಛಾಯಾಗ್ರಹಣ, ಸೂಪರ್ ಸುಬ್ಬು. ಡ್ಯಾನ್ಸ್ ಮಾಸ್ಟರ್ ಜಗ್ಗು ಸಾಹಸ ಸಂಯೋಜನೆ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಇದೇ ತಿಂಗಳಲ್ಲಿ ದಿಗ್ವಿಜಯ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.