Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ`` ಚಿತ್ರವು ಡಿಜಿಟಲ್ ಪ್ಲಾಟ್‌ಫಾರ್ಮ್ ನಲ್ಲಿ ``ಜಂಕಾರ್ ಮ್ಯೂಸಿಕ್ ಮೂವೀಸ್``ನಲ್ಲಿ
Posted date: 12 Tue, Sep 2023 � 11:58:30 AM
ಅಧಿಕೃತ ಘೋಷಣೆ: "ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ" ಚಿತ್ರವು ಡಿಜಿಟಲ್ ಪ್ಲಾಟ್‌ಫಾರ್ಮ್ ಆದ "ಜಂಕಾರ್ ಮ್ಯೂಸಿಕ್ ಮೂವೀಸ್" ನಲ್ಲಿ ಬಿಡುಗಡೆಗೊಂಡು ನೋಡಲು ಲಭ್ಯವಿದೆ.

ಒಬ್ಬ ಕಲಾವಿದ… ಇಪ್ಪತ್ತ ನಾಲ್ಕು ಪಾತ್ರಗಳು… ನಾಲ್ಕು ಹಾಡುಗಳು… ಹನ್ನೆರಡು ಪ್ರಾಸಂಗಿಕ ಹಾಡುಗಳು ಹೊಂದಿರುವ "ಶ್ರೀ. ರವೀಂದ್ರನಾಥ್ ಠಾಗೂರ್" ಅವರ ಕಾದಂಬರಿ ಆಧರಿತ ಚಿತ್ರ "ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ" ಒಂದು ವಿಶ್ವಮಟ್ಟದ  ರಂಗಭೂಮಿ ಅನುಭವದ ಚಿತ್ರ.

ಸಿನಿಮಾ ತಂತ್ರಗಾರಿಕೆಯಲ್ಲಿ ರಂಗಭೂಮಿಯ ನಿರೂಪಣೆ... "ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ" ಶ್ರೀ ರವೀಂದ್ರನಾಥ್ ಠಾಗೂರ್ ಅವರ  “Once There was a King” ಕಾದಂಬರಿಯನ್ನು ರಂಗ ರೂಪಕ್ಕೆ ತಂದು ರಂಗಭೂಮಿಯ ಮೇಲೆ ಇಪ್ಪತ್ತೊಂದು ವರ್ಷಗಳ ಹಿಂದೆ ಯೋಗೇಶ್ ಮಾಸ್ಟರ್ ಅವರು ಮಾಡಿದ ಏಕವ್ಯಕ್ತಿ ಪ್ರದರ್ಶನದ ಪ್ರಯೋಗ ಇದು. 

ಈ ಪ್ರಯೋಗವನ್ನು, ರಂಗಭೂಮಿಯಿಂದ ಚಲನಚಿತ್ರ ಮಾದ್ಯಮಕ್ಕೆ ತರುವ ಸಾಹಸ ಮಾಡಿದ್ದು ದೃಷ್ಟಿ ಮೀಡಿಯಾ ಸಂಸ್ಥೆ. ಸಿನಿಮಾ ಮಾಧ್ಯಮದಲ್ಲಿ ರಂಗಭೂಮಿಯಲ್ಲಿ ಇರುವ ಇತಿಮಿತಿಗಳನ್ನು ಮೀರಲು ಸಾಧ್ಯವಾಯಿತು. ಮೇಕಪ್, ಅಗತ್ಯದ ವೇಷಭೂಷಣ, ಬೆಳಕು ಮತ್ತು ಅಭಿನಯದ ಸೂಕ್ಷ್ಮ ಸಂವೇದನೆಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು. ಒಟ್ಟಾರೆ ಹೇಳುವುದಾದರೆ ರಂಗ ಪ್ರಯೋಗದ ಸ್ವರೂಪವನ್ನು ಬದಲಿಸದೇ ಅದನ್ನು ಸಿನಿಮಾದ ಮೂಲಕ ಮತ್ತಷ್ಟು ಕುಸುರಿಗೊಳಿಸುವ ಕೆಲಸ ಇದಾಗಿದೆ.

"ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ" ಚಿತ್ರವು ದಿನಾಂಕ 09-09-2023 ರಂದು "ಜಂಕಾರ್ ಮ್ಯೂಸಿಕ್ ಮೂವೀಸ್" ಡಿಜಿಟಲ್ ಪ್ಲಾಟ್‌ಫಾರ್ಮ್ ನಲ್ಲಿ ಬಿಡುಗಡೆಗೊಂಡಿರುವುದು ನಮಗೆ ಹೆಮ್ಮೆಯ ಸಂಗತಿ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ`` ಚಿತ್ರವು ಡಿಜಿಟಲ್ ಪ್ಲಾಟ್‌ಫಾರ್ಮ್ ನಲ್ಲಿ ``ಜಂಕಾರ್ ಮ್ಯೂಸಿಕ್ ಮೂವೀಸ್``ನಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.