`ರಣಹದ್ದು` ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೆ ಸಜ್ಜಾಗುತ್ತಿರುವ ಮತ್ತೊಂದು ಹೊಸಬರ ಹೊಸ ಸಿನಿಮಾ. ತಮಿಳು ನಿರ್ದೇಶಕ ಮಾಣಿಕ್ಯ ಜೈ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ ಇದಾಗಿದ್ದು ಹೊಸಬರೆ ನಟಿಸಿದ್ದಾರೆ. ಮಾಣಿಕ್ಯ ನಿರ್ದೇಶನದ ಜೊತೆಗೆ ರಣಹದ್ದು ಸಿನಿಮಾದಲ್ಲಿ ನಟಿಸಿದ್ದಾರೆ.
ಮಾಣಿಕ್ಯ ಜೈ ಈಗಾಗಲೇ ತಮಿಳಿನಲ್ಲಿ 2 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ರಣಹದ್ದು ಕನ್ನಡದ ಮೊದಲ ಸಿನಿಮಾವಾಗಿದೆ. ಇದೀಗ ರಣಹದ್ದು ಚಿತ್ರದ ಫಸ್ಟ್ ಲುಕ್ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅಂದಹಾಗೆ ಹೊಸಬರ ಈ ಚಿತ್ರದ ಫಸ್ಟ್ ಲುಕ್ ಅನ್ನು ಸ್ಯಾಂಡಲ್ ವುಡ್ ನಟಿ ಜಂಬದ ಹುಡುಗಿ ಖ್ಯಾತಿಯ ಪ್ರೀಯ ಹಾಸನ್ ಹಾಗೂ ನಿರ್ಮಾಪಕ ಟೇಶಿವೆಂಕಟೇಶ್ ರಿಲೀಸ್ ಮಾಡಿದ್ದಾರೆ. ಇಬ್ಬರೂ ರಣಹದ್ದು ಚಿತ್ರಕ್ಕೆ ಸಾಥ್ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ರಣಹದ್ದು ಮೊಬೈಲ್ ಫೋನ್ ನಿಂದ ಆಗುವ ಮೋಸ, ವಂಚನೆ ಬಗ್ಗೆ ಇರುವ ಸಿನಿಮಾವಾಗಿದೆ. ನೈಜ ಘಟನೆಗಳನ್ನು ಆಧಾರಿಸಿ ಈ ಸಿನಿಮಾ ಮಾಡಲಾಗಿದೆ. ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಫಸ್ಟ್ ಲುಕ್ ಮೂಲಕ ಗಮ ಸೆಳೆಯುತ್ತಿದೆ.
ಇನ್ನೂ ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಮಾಣಿಕ್ಯ ಜೈ ಜೊತೆಗೆ ರಂಜಿತ್, ಯತೀಶ್ ಮತ್ತು ನಾಯಕಿಯಾಗಿ ಸೌಮ್ಯ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಸದ್ಯದಲ್ಲೆ ಚಿತ್ರೀಕರಣ ಪೂರ್ಣಗೊಳಿಸಿ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಸರಸ್ವತಿ ಹಾಗೂ ಜೈ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದು ತಾಜ್ ಸಿನಿಮಾಗೆ ಸಂಗೀತ ನೀಡಿದ್ದು ಜೀವನ್ ಕ್ಯಾಮೆರ ವರ್ಕ್ ಮಾಡಿದ್ದಾರೆ..ಸದ್ಯ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ರಣಹದ್ದು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಿಸಿದೆ.