ಎನ್ 1 ಕ್ರಿಕೆಟ್ ಅಕಾಡೆಮಿ ಕಳೆದೆರೆಡು ವರ್ಷಗಳಿಂದ ಆಯೋಜಿಸಿಕೊಂಡು ಬರ್ತಿರುವ ಟೆಲಿವಿಷನ್ ಪ್ರೀಮಿಯರ್ ಲೀಗ್-ಟಿಪಿಎಲ್ ಮತ್ತೆ ಶುರುವಾಗುತ್ತಿದೆ. ಈಗಾಗಲೇ ಯಶಸ್ವಿಯಾಗಿ ಎರಡು ಸೀಸನ್ ಮುಗಿದಿದ್ದು, ಮೂರನೇ ಸೀಸನ್ ಜನವರಿ ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಇಂದು ನೆಲಮಂಗಲ ಸಮೀಪದ ಆದಿತ್ಯ ಗ್ಲೋಬಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿಪಿಎಲ್ ಸೀಸನ್-3 ಫ್ಲೇಯರ್ಸ್ ಗಳ ಆಯ್ಕೆ ಮಾಡಲಾಯಿತು. ಬರೋಬ್ಬರಿ 100ಕ್ಕೂ ಹೆಚ್ಚು ಕಲಾವಿದರು ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಈ ಬಗ್ಗೆ ಮಾತನಾಡಿ ಟಿಪಿಎಲ್ ಆಯೋಜಕರಾದ ಸುನಿಲ್ ಕುಮಾರ್ ಬಿ ಆರ್, ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗುತ್ತಿರುವ ಎಲ್ಲರಿಗೂ ಒಳ್ಳೆದಾಗಲಿ. ಸೆಲೆಬ್ರಿಟಿಗಳ ಸಪೋರ್ಟ್ ಇಲ್ಲದೇ ಏನೂ ಆಗುವುದಿಲ್ಲ. ನಾವು ಕರೆ ಮಾಡಿದ ತಕ್ಷಣ ರೆಸ್ಪಾನ್ಸ್ ಮಾಡುತ್ತಾರೆ. ಅವರ ಬೆಂಬಲದಿಂದ ಪಂದ್ಯಾವಳಿ ಅಚ್ಚುಕಟ್ಟಾಗಿ ನಡೆಯುತ್ತಿದೆ. ಕ್ಯಾಪ್ಟನ್, ಓನರ್ಸ್ ಹಾಗೂ ಮಾಧ್ಯಮದವರು ಎಲ್ಲರು ಬೆಂಬಲಿಸುತ್ತಿದ್ದಾರೆ ಎಂದರು.
ಈ ಬಾರಿಯ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-3ನಲ್ಲಿ ಮಾಧ್ಯಮದವರಿಗೂ ಅವಕಾಶ ನೀಡಲಾಗಿದೆ. ಜೆರ್ಸಿ , ತಂಡಗಳು, ಆಟಗಾರರು, ಮತ್ತಿತರ ಅಪ್ ಡೇಟ್ ಬಗ್ಗೆ ಒಂದೊಂದಾಗಿ ತಿಳಿಸಲಾಗುತ್ತದೆ. ವಿಶೇಷ ಎಂದರೆ ಮ್ಯಾನ್ ಆಫ್ ದಿ ಸೀರಿಸ್ ಪಟ್ಟ ಪಡೆದವರಿಗೆ ಕಾರು, ಆರೆಂಜ್ ಕ್ಯಾಪ್ ಹೋಲ್ಡರ್(batsman), ಪರ್ಪಲ್ ಕ್ಯಾಪ್ ಹೋಲ್ಡರ್(bowler) ಪಡೆದವರಿಗೆ ಬೈಕ್ ಕೊಡಲಾಗುತ್ತದೆ ಎಂದು ಪಂದ್ಯಾವಳಿ ಆಯೋಜಕ ಸುನಿಲ್ ಕುಮಾರ್ ಬಿ.ಆರ್. ತಿಳಿಸಿದ್ದಾರೆ.