Chief Editor
Manohar. R (Manu)
Photo Journalist
chitrataramanu@gmail.com
+91 9845549026
ತಾತ್ವಿಕ ಅಂತ್ಯ ಕಂಡ ಪರಿಮಳ ಡಿಸೋಜಾ ಮರ್ಡರ್ ಕೇಸ್ 3/5 ***
Posted date: 16 Sat, Sep 2023 08:52:02 AM
ಸೌಂದರ್ಯದ ಖನಿಯಂತಿದ್ದ  ಪರಿಮಳ ಡಿಸೋಜಾ ತನ್ನ ಮನೆಯಲ್ಲೇ ಹೆಣವಾಗುತ್ತಾಳೆ. ಮೇಲ್ನೋಟಕ್ಕೆ ಆಕೆ ತಾನೇ ಕೈ ಕುಯ್ದುಕೊಂಡು ಸೂಸೈಡ್ ಮಾಡಿಕೊಂಡಂತೆ ಕಂಡರೂ, ತನಿಖೆ ನಡೆಸುತ್ತ  ಹೋದಂತೆ ಅದು ಮರ್ಡರ್ ಕೇಸ್ ಆಗಿ ಟರ್ನ್ ಆಗುತ್ತದೆ. ಅನ್ಯೋನ್ಯವಾಗಿದ್ದ ಕುಟುಂಬದ ಸೊಸೆಯಾಗಿ ಬರುವ ಪರಿಮಳ ಡಿಸೋಜಾ (ಪೂಜಾ ರಾಮಚಂದ್ರ) ಕ್ರೈಸ್ತ ಮಹಿಳೆಯಾದರೂ ರಾಮನ ಭಕ್ತೆ.
 
ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದಲ್ಲದೆ, ಅಲ್ಲಿದ್ದ ಭಿಕ್ಷುಕರಿಗೆಲ್ಲ ಅನ್ನದಾತೆ, ಹಸಿದವರನ್ನು ಕಂಡರೆ  ಮರುಗುವ ಆಕೆ ದೇವಾಲಯಕ್ಕೆ ಹೋದಾಗಲೆಲ್ಲ ಅಲ್ಲಿನ ಭಿಕ್ಷುಕರಿಗೆ ಹೊಸ ಬಟ್ಟೆ ಬರೆ, ಆನ್ನಾಹಾರ ನೀಡುತ್ತಾಳೆ. ಅಲ್ಲಿನ  ಭಿಕ್ಷುಕನೊಬ್ಬ ಈಕೆಯಲ್ಲಿ ತನ್ನ ತಾಯಿಯ ಪ್ರತಿರೂಪವನ್ನೇ ಕಾಣುತ್ತಾನೆ, ಹೀಗೆ ಚಿಕ್ಕ ವಯಸಿನಲ್ಲೇ ತನ್ನ ಪ್ರೀತಿಯ ತಾಯಿ(ಭವ್ಯ)ಯನ್ನು ಕಳೆದುಕೊಂಡು ಅಲೆಯುತ್ತಿದ್ದ  ಸೈಕಲ್ ಪಾಪಣ್ಣ(ಸುನಿಲ್)ನಿಗೆ  ಪರಿಮಳ ಡಿಸೋಜಾ ತಾಯಿಯಾಗಿರುತ್ತಾಳೆ. ಇಂಥವಳ ದುರ್ಮರಣ ಆತ್ಮಹತ್ಯೆಯೋ, ಕೊಲೆಯೋ ಎಂಬುದು ತನಿಖೆ ನಡೆಸುತ್ತ ಹೋದಂತೆ ಬಯಲಾಗುತ್ತ ಹೋಗುತ್ತದೆ.
 
ಆ ಕೊಲೆಯ ಹಿಂದಿರುವ ಸತ್ಯ, ಸೂಕ್ಷ್ಮತೆಗಳನ್ನು  ನಿರ್ದೇಶಕ ಗಿರಿಧರ್  ಸಮರ್ಥವಾಗಿ  ನಿಭಾಯಿಸಿದ್ದಾರೆ, ಕೊಲೆ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮಹಿಳಾ ಇನ್‌ಸ್ಪೆಕ್ಟರ್ ವಿಜಯಲಕ್ಷ್ಮಿ (ಕೋಮಲ ಬನವಾಸಿ)  ಮನೆಯ ಪ್ರತಿಯೊಬ್ಬರನ್ನೂ ವಿಚಾರಿಸುತ್ತ ಹೋದಂತೆ ಅನೇಕ ವಿಚಾರಗಳು ಬಯಲಾಗುತ್ತವೆ,  ಪರಿಮಳ ಕೊಲೆಯನ್ನು ಯಾರು ಮಾಡಿದರು, ಏಕೆ ಮಾಡಿದರು, ಆಕೆಯನ್ನು  ಹತ್ಯೆ ಮಾಡುವಂಥ ದ್ವೇಷವಾದರೂ ಯಾರಿಗಿತ್ತು, ಎಂದು ತನಿಖೆ ನಡೆಸುವಾಗ ಆಕೆಯ ಗಂಡನ  ಮನೆಯ  ಪ್ರತಿಯೊಬ್ಬರ ಮೇಲೂ ಅನುಮಾನ ಹುಟ್ಟುತ್ತದೆ,  
 
ಪ್ರಥಮಾರ್ಧದಲ್ಲಿ  ಪರಿಮಳ‌ ಗಂಡ, ಅತ್ತೆ ಮಾವ, ಮನೆಯ ಸೆಕೂರಿಟಿ ಗಾರ್ಡ್, ಮೆನೆಕೆಲಸದಾಕೆ, ಆಳು ಹೀಗೆ ಎಲ್ಲರ ವಿಚಾರಣೆ ನಡೆಯುತ್ತದೆ, ಆನಂತರ ಕಥೆ ಬೇರೆಯದೇ ಸ್ವರೂಪ ಪಡೆದುಕೊಳ್ಳುತ್ತದೆ, ಕೊಲೆಯಾದ ಸಮಯದಲ್ಲಿ ಮನೆಯ ಸುತ್ತಲೂ ಆಕ್ಟಿವ್ ಆಗಿದ್ದ ಫೋನ್  ನಂಬರ್‌ಗಳನ್ನು ಟ್ರೇಸ್ ಮಾಡಿ ಅವುಗಳ‌ ಸಹಾಯದಿಂದ  ಕೊಲೆಗಾರನನ್ನು ಹಿಡಿಯಲು ಹೋದ ಪೋಲೀಸರಿಗೆ ಅಲ್ಲಿ ಇನ್ನೊಂದು ಅಚ್ಚರಿ ಕಾದಿರುತ್ತದೆ. ಅಲ್ಲಿ  ಕೊಲೆಗಾರ ಎಂದುಕೊಂಡವನೇ  ಸತ್ತು ಬಿದ್ದಿರುತ್ತಾನೆ, ಆತನ ಬಳಿ  ಸಿಕ್ಕ ಡೈರಿ ಬೇರೊಂದು  ಕಥೆಯನ್ನು ಹೇಳುತ್ತದೆ.
 
ಹೀಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತ ಸಾಗುವ ಪರಿಮಳ ಡಿಸೋಜಾ,  ಪ್ರೇಕ್ಷಕನಿಗೆ ಸಖತ್ ಥ್ರಿಲ್ ಅನುಭವ‌ದ ಜೊತೆಗೆ ಗುಡ್ ಫೀಲ್ ನೀಡುತ್ತದೆ.
 
ವಿನೋದ್ ಶೇಷಾದ್ರಿ ನಿರ್ಮಿಸಿ, ಡಾ.ಗಿರಿಧರ್ ಹೆಚ್,ಟಿ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ  ಈ ಚಿತ್ರದಲ್ಲಿ ನಿರ್ಮಾಪಕ ವಿನೋದ್ ಶೇಷಾದ್ರಿ ಅವರು ಪೊಲೀಸ್ ಕಾನ್ಸ್ ಟೇಬಲ್ ವಿನೋದ್ ಆಗಿ  ಲವಲವಿಕೆಯ ಅಭಿನಯ ನೀಡಿದ್ದಾರೆ,  ಅವರ ಜೋಡಿ ಲಲಿತಾಳಾಗಿ  ಚಂದನಾ ಶ್ರೀನಿವಾಸ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪರಿಮಳ ಪಾತ್ರದಲ್ಲಿ ನಾಯಕಿ  ಪೂಜಾ ರಾಮಚಂದ್ರ ನೋಡುಗರಿಗೆ ಇಷ್ಟವಾಗುತ್ತಾರೆ, ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯವಿರುವ ತಾಯಿಸಾಂಗ್ ಅರ್ಥಗರ್ಭಿತವಾಗಿದೆ,
Kannada Cinema's Latest Wallpapers
Kannada Cinema's Latest Videos
Kannada Movie/Cinema News - ತಾತ್ವಿಕ ಅಂತ್ಯ ಕಂಡ ಪರಿಮಳ ಡಿಸೋಜಾ ಮರ್ಡರ್ ಕೇಸ್ 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.