Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಿರಿಕನ್ನಡದಲ್ಲಿ ಭರ್ಜರಿಯಾಗಿ ಮೂಡಿ ಬರುತ್ತಿದೆ ಹಾಸ್ಯ ದಿಗ್ಗಜರ ಹಾಸ್ಯ ದರ್ಶನ ಹಾಗೂ ಲಿಟಲ್ ಕಿಲಾಡಿಗಳ ಮನರಂಜನೆ ರಸದೌತಣ
Posted date: 17 Sun, Sep 2023 01:09:14 PM
ಮುಟ್ಟುತ್ತಿರುವ ಸಿರಿಕನ್ನಡ ವಾಹಿನಿಯಲ್ಲಿ ಜನಪ್ರಿಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ. ಆ ಪೈಕಿ ಕರ್ನಾಟಕದ ಹೆಸರಾಂತ ಹಾಸ್ಯ ದಿಗ್ಗಜರು ನಡೆಸಿಕೊಡುವ "ಹಾಸ್ಯ ದರ್ಬಾರ್ ಸೀಸನ್ 02" ಹಾಗೂ ತಾಯಿ - ಮಗು ಭಾಗವಹಿಸುವ
 "ಲಿಟಲ್ ಕಿಲಾಡೀಸ್"  ಗೇಮ್ ಶೋ ಆರಂಭವಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿರಿಕನ್ನಡ ವಾಹಿನಿಯ ರಾಜೇಶ್ ರಾಜಘಟ್ಟ‌,  "ಹಾಸ್ಯ ದರ್ಬಾರ್ ಸೀಸನ್ 2"  ನಲ್ಲಿ ಭಾಗಿಯಾಗಿರುವ ಎಲ್ಲಾ ಹಾಸ್ಯ ದಿಗ್ಗಜರು ಹಾಗೂ "ಲಿಟಲ್ ಕಿಲಾಡೀಸ್" ಕಾರ್ಯಕ್ರಮದ  ನಿರ್ದೇಶಕ ಮಂಜೇಶ್ ಮಾಹಿತಿ ನೀಡಿದರು. ನಿರೂಪಕಿ ರಶ್ಮಿತಾ ಚಂಗಪ್ಪ ಉಪಸ್ಥಿತರಿದ್ದರು.

ಮೊದಲು ಮಾತನಾಡಿದ ಸಿರಿಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ,  ನಾಡಿನ ಪ್ರತಿಯೊಬ್ಬ ವೀಕ್ಷಕರನ್ನು ತಲುಪುವಂತಹ ಎರಡು ಜನಪ್ರಿಯ ಕಾರ್ಯಕ್ರಮಗಳು ನಮ್ಮ ವಾಹಿನಿಯಲ್ಲಿ ಆರಂಭವಾಗಿದೆ.  ಅದರಲ್ಲಿ ನಾಡಿನ ಪ್ರಮುಖ ಹಾಸ್ಯ ದಿಗ್ಗಜರು ನಡೆಸಿಕೊಡುವ "ಹಾಸ್ಯ ದರ್ಬಾರ್ ಸೀಸನ್ 2" ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8 ರಿಂದ 9 ರವರೆಗೂ ಪ್ರಸಾರವಾಗಲಿದೆ. 
 
ಮಕ್ಕಳು ಹಾಗೂ ಅಮ್ಮಂದಿರನ್ನು ಒಂದೇ ವೇದಿಕೆಯಲ್ಲಿ ಒಟ್ಟಾಗಿಸಿ ತಾಯಿ ಮಗುವಿನ emotion, fun, game, drama ಹಾಗೂ team building activity ಗಳನ್ನು ಒಳಗೊಂಡ " ಲಿಟಲ್ ಕಿಲಾಡೀಸ್"ಎಂಬ ವಿಭಿನ್ನ ಗೇಮ್ ಶೋ ಸೋಮವಾರದಿಂದ ಶುಕ್ರವಾರ ಸಂಜೆ 6 ರಿಂದ 7  ಗಂಟೆಯವರೆಗೆ ಪ್ರಸಾರ ಮಾಡಲಾಗುತ್ತಿದ್ದು, ಕಿರುತೆರೆಯ ಜನಪ್ರಿಯ ನಟಿ ರಶ್ಮಿತಾ ಚಂಗಪ್ಪ  ನಿರೂಪಣೆಯಲ್ಲಿ ಅಮೋಘವಾಗಿ ಮೂಡಿ ಬರುತ್ತಿದೆ.
 
ಎರಡು ಕಾರ್ಯಕ್ರಮಗಳು ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬರುತ್ತಿದ್ದು ಜನಮನ್ನಣೆ ಪಡೆಯುತ್ತಿದೆ ಎಂದರು.

"ಹಾಸ್ಯ ದರ್ಬಾರ್ ಸೀಸನ್ 2" ನಲ್ಲಿ ಭಾಗವಹಿಸುತ್ತಿರುವ ಹಿರೇಮಗಳೂರು ಕಣ್ಣನ್, ಮುಖ್ಯಮಂತ್ರಿ ಚಂದ್ರು, ರಿಚರ್ಡ್ ಲೂಯಿಸ್, ಪ್ರಾಣೇಶ್, ಪ್ರೊ .ಕೃಷ್ಣೇ ಗೌಡ, ಎಂ.ಎಸ್ ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ್, ಯಶವಂತ ಸರ್ ದೇಶಪಾಂಡೆ, ಗುಂಡುರಾವ್, ದುಂಡಿರಾಜ್, ನರಸಿಂಹ ಜೋಶಿ, ಮಹಾಮನೆ ಮುಂತಾದವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಇಂತಹ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ "ಸಿರಿ ಕನ್ನಡ" ವಾಹಿನಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಗೌರಿಗಣೇಶ ಹಬ್ಬದ ಪ್ರಯುಕ್ತ "ಲಿಟಲ್ ಕಿಲಾಡೀಸ್" ಕಾರ್ಯಕ್ರಮದಲ್ಲಿ "ಟಗರು" ಖ್ಯಾತಿಯ ಮಾನ್ವಿತಾ ಕಾಮತ್ 
ನಿಮ್ಮನೆಲ್ಲಾ ಮನರಂಜಿಸಲಿದ್ದಾರೆ. ಹಾಗೂ ಮತ್ತಷ್ಟು ವಿಶೇಷ ಮನರಂಜನೆಯ ಕಾರ್ಯಕ್ರಮಗಳು 
ಮೂಡಿಬರಲಿದೆ. ಇದರೊಟ್ಟಿಗೆ ಇತರ ಕಾರ್ಯಕ್ರಮಗಳನ್ನು ವೀಕ್ಷಿಸುವ ವೀಕ್ಷಕರಿಗೆ ವರಮಹಾಲಕ್ಷ್ಮೀ
ಹಬ್ಬದಿಂದ ದೀಪಾವಳಿಯವರೆಗೂ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ಸಿರಿಕನ್ನಡ ವಾಹಿನಿ ನೀಡುತ್ತಿದ್ದು, 
ಪ್ರತೀದಿನ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯ ವರೆಗೂ ನಿರ್ದಿಷ್ಟ ಅವಧಿಯಲ್ಲಿ ಮಿಸ್ ಕಾಲ್ 
ಕೊಟ್ಟವರಿಗೆ ಬಹುಮಾನ ಸಿಗಲಿದೆ ಎಂದು ಸಿರಿ ಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ ತಿಳಿಸಿದರು. ‌

ಶೀಘ್ರದಲ್ಲೇ "ಅಮೃತ ಘಳಿಗೆ" ಎಂಬ ಹೊಚ್ಚ ಹೊಸ ಧಾರಾವಾಹಿ ಸಹ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಿರಿಕನ್ನಡದಲ್ಲಿ ಭರ್ಜರಿಯಾಗಿ ಮೂಡಿ ಬರುತ್ತಿದೆ ಹಾಸ್ಯ ದಿಗ್ಗಜರ ಹಾಸ್ಯ ದರ್ಶನ ಹಾಗೂ ಲಿಟಲ್ ಕಿಲಾಡಿಗಳ ಮನರಂಜನೆ ರಸದೌತಣ - Chitratara.com
Copyright 2009 chitratara.com Reproduction is forbidden unless authorized. All rights reserved.