ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಇನಾಮ್ದಾರ್ ಸಿನಿಮಾ ಇದೀಗ ಮತ್ತೊಂದು ವಿಚಾರದಲ್ಲಿ ಸದ್ದು ಮಾಡುತ್ತಿದೆ, ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನ ಮಾಡಿರುವ ಹಾಗೂ ನಿರಂಜನ್ ಶೆಟ್ಟಿ ತಲ್ಲೂರು ಬಂಡವಾಳ ಕೂಡಿರುವ ಈ ಸಿನಿಮಾ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ ಈಗಾಗಲೇ ಟೀಸರ್ ಮತ್ತು ಸಿಲ್ಕ್ ಮಿಲ್ಕು ಸಾಂಗ್ ಮೂಲಕ ಜನರ ಗಮನ ಸೆಳೆದ ಇನಾಮ್ದಾರ್ ಸಿನಿಮಾ ಬಿಡುಗಡೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ಚಿತ್ರತಂಡ ಹಲವು ದಿನಗಳಿಂದ ಪಾತ್ರ ಪರಿಚಯವನ್ನ ವಿಭಿನ್ನ ರೀತಿಯಲ್ಲಿ ಮಾಡುತ್ತಿದ್ದು ಒಂದಿಷ್ಟು ಕುತೂಹಲವನ್ನ ಕೆರಳಿಸಿದೆ, ಚಿತ್ರತಂಡ ವಿಭಿನ್ನವಾದ ಇನ್ನೊಂದು ಪ್ರಮೋಷನ್ ಆಕ್ಟಿವಿಟಿಗೆ ಕೈ ಹಾಕಿದ್ದು ಈ ವಿಡಿಯೋ ಇದೀಗ ಸಾಕಷ್ಟು ವೈರಲಾಗುತ್ತಿದೆ, ಟೀ ಅಂಗಡಿ ಹತ್ತಿರ ಟೀ ಕುಡಿತಿರೋ ಯಶ್ ಅಭಿಮಾನಿ ಇಬ್ಬರು ರಂಜಿನ್ ಛತ್ರಪತಿಯನ್ನು ನೋಡಿ ಯಶ್ ಎಂದು ಭಾವಿಸಿ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ ಆದರೆ ಇನಾಮ್ದಾರ್ ನಾಯಕ ನಟ ರಂಜನ್ ಛತ್ರಪತಿ ಯಶ್ ಅಭಿಮಾನಿಗಳ ಹಾವಭಾವ, ಅವರ ಮಾತುಗಳನ್ನು ಆಲಿಸಿ ತಮ್ಮ ಪ್ರಮೋಷನ್ ಗೆ ಈ ಹುಡುಗರನ್ನ ತಮ್ಮ ಕಾರ್ ನಲ್ಲಿ ಕಿಡ್ಡಪ್ ಮಾಡಿ ಕರ್ಕೊಂಡು ಹೋಗ್ತಾರೆ ಅನ್ನೋದು ಈ ಪ್ರಮೋಷನ್ ವಿಡಿಯೋದಲ್ಲಿರುವ ತುಳುಕು, ನಟ ಯಶ್ ರಂತೆ ಕಾಣುತ್ತಿರುವ ನಟ ರಂಜನ್ ಛತ್ರಪತಿ ಇದೀಗ ಇನಾಮ್ದಾರ್ ಸಿನಿಮಾದಲ್ಲಿ ಕಪ್ಪು ಮತ್ತು ಬಿಳಿ ಜನಾಂಗದ ಘರ್ಷಣೆಗೆ ಸಾಕ್ಷಿ ಆಗುವಂತೆ ಬಣ್ಣ ಹಚ್ಚಿ ವರ್ಣಭೇದದ ಕಥೆ ಹೇಳಲು ಬರುತ್ತಿದ್ದಾರೆ ಹೀಗೆ ದಿನದಿಂದ ದಿನಕ್ಕೆ ಇನಾಮ್ದಾರ್ ಸಿನಿಮಾ ಕುತೂಹಲವನ್ನು ಹೆಚ್ಚಿಸುತ್ತಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.