Chief Editor
Manohar. R (Manu)
Photo Journalist
chitrataramanu@gmail.com
+91 9845549026
ದ್ವಂದ್ವ ಹಾಡು ಮತ್ತು ಟ್ರೇಲರ್ ಬಿಡುಗಡೆ ಸೆಪ್ಟೆಂಬರ್ 22 ರಂದು ತೆರೆ ಕಾಣುತಿದೆ
Posted date: 18 Mon, Sep 2023 09:46:24 PM
ಹೊಸಬರ `ದ್ವಂದ್ವ` ಚಿತ್ರದಲ್ಲಿ ತಿಲಕ್ ನಾಯಕನಾಗಿ ನಟಿಸಿದ್ದಾರೆ. ಬೆಂಗಳೂರಿನ ಎಲ್.ಭರತ್ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕಾಮನ್‌ಮ್ಯಾನ್ ಪ್ರೊಡಕ್ಷನ್ ಅಡಿಯಲ್ಲಿ ಹನೂರು ತಾಲ್ಲೂಕಿನ ಪ್ರದೀಪ್‌ಕೌದಳ್ಳಿ ಬಂಡವಾಳ ಹೂಡುತ್ತಿದ್ದಾರೆ. ಇವರೊಂದಿಗೆ ಹೆಚ್.ಆರ್.ವಿಶ್ವನಾಥ್, ರಾಮುಕೊಣ್ಣಾರ್ ಹಾಗೂ ಮಣಿಕಡಕೊಳ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಹಾಗೂ ಎರಡು ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. 

ಚಿತ್ರವು ಪೊಲಟಿಕಲ್ ಡ್ರಾಮ, ಸೈನ್ಸ್ ಫಿಕ್ಷನ್ ಏಳೆಯನ್ನು ಹೊಂದಿರುತ್ತದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ಅವಧಿಯಲ್ಲಿ, ಹೈಪರ್‌ಟೈಮಿಸಿಯಾ ಖಾಯಿಲೆ ಇರುವ ಹುಡುಗಿಯು ಒಂದು ಸಲ ಏನನ್ನಾದರೂ ನೋಡಿದರೆ 10-20 ವರ್ಷದ ಜ್ಘಾಪಕ ಇರುವ ಶಕ್ತಿ ಹೊಂದಿರುತ್ತಾಳೆ. ಇದನ್ನು ಅರಿತುಕೊಂಡ ಪ್ರಭಾವಿ ರಾಯಕೀಯದವರು ಆಕೆಯನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ. ಇದರಿಂದ ಅವಳ ಬದುಕು ಎಲ್ಲಿಗೆ ಹೋಗಿ ನಿಲ್ಲುತ್ತದೆ. ಇಂತಹ ಹಲವು ಅಂಶಗಳು ಥ್ರಿಲ್ಲರ್ ಮೂಲಕ ಸಾಗುತ್ತದೆ.
 
`ಕನ್ಯಾಕುಮಾರಿ`ಧಾರವಾಹಿಯಲ್ಲಿ ನಟಿಸಿದ್ದ ಆಸಿಯಾಫಿರ್ದೋಸಿ ಹಾಗೂ ನಯನ ನಾಯಕಿಯರು. ಉಳಿದಂತೆ ಅನಿತಾಭಟ್, ಶೋಭರಾಜ್, ದಿನೇಶ್‌ಮಂಗಳೂರು, ಹೆಚ್.ಎಂ.ಟಿ.ವಿಜಯ್, ರಘುರಮಣಕೊಪ್ಪ, ಬಲರಾಜವಾಡಿ, ಮಿಮಿಕ್ರಿಗೋಪಿ, ವರುಣ್‌ಕೃಷ್ಣ ನಟಿಸುತ್ತಿದ್ದಾರೆ. ಎರಡು ಹಾಡುಗಳಿಗೆ ಆಕಾಶ್‌ಪರ್ವ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ಋಷಿಕೇಶ್, ಸಾಹಸ ಗಣೇಶ್, ನೃತ್ಯ ಲಕ್ಷಣ್  ಅವರದಾಗಿದೆ. ಬೆಂಗಳೂರು,ಮೂಡಿಗೆರೆ, ಸಕಲೇಶಪುರ,ಊಟಿ ಸುಂದರ ತಾಣಗಳಲ್ಲಿ 37 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.  ಸಿನಿಮಾವು ಸೆಪ್ಟೆಂಬರ್ 22 ರಂದು ಬಿಡುಗಡೆಯಾಗುತ್ತಿದೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ದ್ವಂದ್ವ ಹಾಡು ಮತ್ತು ಟ್ರೇಲರ್ ಬಿಡುಗಡೆ ಸೆಪ್ಟೆಂಬರ್ 22 ರಂದು ತೆರೆ ಕಾಣುತಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.