Chief Editor
Manohar. R (Manu)
Photo Journalist
chitrataramanu@gmail.com
+91 9845549026
VIJAY HEIGHT OF SIMPLICITY!
Posted date: 16/April/2010

The dashing action hero of Kannada cinema muscular Vijay (of Dhuniya fame) has showed his simplicity on Thursday on sunny afternoon just sleeping below the tree. A piece of cloth was tied on top of the tree for the shade. Vijay was fast asleep in the afternoon and tired from hectic shooting of ‘Kanteerava’.

We have seen stars staying in the caravan, going miles to take a nap in the AC rooms. Here is Vijay that was noticed by www.chitratara.com editor R Manohar when he visited Mysore on Thursday to cover assignments.

 

ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ತನಕ್ಕೆ ಮತ್ತೊಂದು ಹೆಸರು ನಿರ್ಮಾಪಕ ರಾಮು, ಇವರು ನಿರ್ಮಿಸುವ ಯಾವುದೇ ಚಿತ್ರ ರಿಮೇಕ್ ಆಗಲಿ ಸ್ವಮೇಕ್ ಆಗಲಿ ಆ ಚಿತ್ರವು ಸಾಕಷ್ಟು ಅದ್ದೂರಿ ತನದಿಂದ ಕೂಡಿರಬೇಕು ಎಂಬುದಕ್ಕೆ ರಾಮು ಅಭಿಪ್ರಾಯ ಬೇರೆ ಭಾಷೆಗಳಿಗೆ ಪೈಪೋಟಿಯಾಗಿ ಕನ್ನಡ ಚಿತ್ರಗಳು ನಿಲ್ಲಬೇಕೆಂಬುದೆ ಇವರ ಇಚ್ಛೆ. ಇವರ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ೨೭ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ.

    ನಿರ್ಮಾಪಕ ರಾಮು ರಾಮು ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ ಕಂಠೀರವ ಚಿತ್ರದ ಚಿತ್ರೀಕರಣವು ಮೈಸೂರಿನಲ್ಲಿ ನಡೆಯುತ್ತಿದ್ದು, ಚಿತ್ರಕ್ಕಾಗಿ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಹಾಕಿದ್ದ ಅದ್ದೂರಿ ಸೆಟ್‌ನಲ್ಲಿ ೩೦ ಜನ ಫೈಟರ‍್ಸ್‌ಗಳೊಂದಿಗೆ ವಿಜಯ್ ಏಕಾಂಗಿಯಾಗಿ ಯಾವುದೇ ಡ್ಯೂಪ್ ಇಲ್ಲದೆ ಹೊಡೆದಾಡುವ ಮೈನವಿರೇಳಿಸುವ ಸನ್ನಿವೇಶವನ್ನು ಮುಂಬೈ ಹಾಗೂ ಮಣಿಪುರದಿಂದ ಬಂದ ವಿಶೇಷ ತರಬೇತಿ ಪಡೆದ ತಾಂತ್ರಿಕ ವರ್ಗದವರನ್ನು ಬಳಸಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದೊಂದಿಗೆ ಎಂಟು ದಿವಸಗಳ ಕಾಲ ದಾಸರಿ ಸೀನು ಛಾಯಾಗ್ರಹಣದಲ್ಲಿ ನಿರ್ದೇಶಕ ತುಷಾರ್ ರಂಗನಾಥ್ ಚಿತ್ರಿಸಿಕೊಂಡರು.

    ದಿನವು ಬೆಳಿಗ್ಗೆ ೬ ಗಂಟೆಗೆ ಮೊದಲ ಶಾಟ್ ತೆಗೆಯುತ್ತಿದ್ದು, ಇಡೀ ಚಿತ್ರತಂಡವು ಹುರುಪಿನಿಂದ ಸಹಕರಿಸುತ್ತಿದ್ದು, ಚಿತ್ರವು ತುಂಬಾ ಅದ್ದೂರಿಯಾಗಿ ಮೂಡಿ ಬರುತ್ತಿದೆ ಎಂದಿರುವ ನಿರ್ಮಾಪಕ ರಾಮು ನವನಟಿ ರಿಷಿಕಾಳಿಗೆ ಈ ಚಿತ್ರ ಬಿಡುಗಡೆಯಾದ ನಂತರ ಸಾಕಷ್ಟು ಬೇಡಿಕೆಯ ನಟಿ ಎನಿಸಿಕೊಳ್ಳಲಿದ್ದಾಳೆ ಎಂದು ತಿಳಿಸಿದ್ದಾರೆ.

    ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ, ದಾಸರೀ ಸೀನು ಛಾಯಾಗ್ರಹಣ, ಚಕ್ರೀ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಹರ್ಷನೃತ್ಯ, ನಂಜುಂಡಸ್ವಾಮಿ ಕಲೆ, ಸುನಿಲ್ ಮಹೇಶ್ ನಿರ್ದೇಶನ, ಸಹಕಾರವಿದ್ದು, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ತುಷಾರ್ ರಂಗನಾಥ್ ಹೊತ್ತಿದ್ದಾರೆ.

    ತಾರಾಗಣದಲ್ಲಿ, ವಿಜಯ್, ಶುಭಾಪುಂಜ, ಶ್ರೀನಿವಾಸಮೂರ್ತಿ ಸಂಗೀತ, ಸುಧಾರಾಣಿ, ಶ್ರೀಧರ್, ಅವಿನಾಶ್, ಮುಕೇಶ್ ರಿಷ್ಯಾ, ರಾಹುಲ್‌ದೇವ್ ಜಿ.ವಿ., ಸಾಧುಕೋಕಿಲ, ಬುಲೆಟ್ ಪ್ರಕಾಶ್, ಧರ್ಮ, ರೇಖಾ ಮುಂತಾದವರಿದ್ದು, ಈ ಚಿತ್ರದ ಮೂಲಕ ರಿಶಿಕಾ ಸಿಂಗ್ ಎಂಬ ನವನಟಿಯ ಪರಿಚಯ ಕನ್ನಡ ಚಿತ್ರರಂಗಕ್ಕೆ ಆಗಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - VIJAY HEIGHT OF SIMPLICITY! - Chitratara.com
Copyright 2009 chitratara.com Reproduction is forbidden unless authorized. All rights reserved.