Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕ್ರೈಸ್ಟ್ ಶಾಲೆಯ ಕನ್ನಡ ರಾಜ್ಯೋತ್ಸವದಲ್ಲಿ ಅರ್ಚನಾ ಕೊಟ್ಟಿಗೆ ಸಂಭ್ರಮ!
Posted date: 06 Mon, Nov 2023 01:59:34 PM
ಅಕ್ಷರ ಕಲಿಸಿದ ಶಾಲಾ ಕಾಲೇಜುಗಳ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳೋ ಅವಕಾಶ ಸಿಗುವುದು ಯಾರ ಪಾಲಿಗೇ ಆದರೂ ರೋಮಾಂಚಕ ಅನುಭೂತಿ. ಅದು ಎಷ್ಟೋ ಜನರ ಕನಸೂ ಹೌದು. ಓದು ಮುಗಿಸಿ ಒಂದಷ್ಟು ವರ್ಷಗಳಾದ ನಂತರ, ಅದೇ ಕಾಲೇಜಿನ ಸಮಾರಂಭಕ್ಕೆ ಆಹ್ವಾನ ಬರುವ ಸೌಭಾಗ್ಯ ಕೆಲವೇ ಕೆಲ ಮಂದಿಗೆ ಮಾತ್ರ ಸಿಗಲು ಸಾಧ್ಯ. ಸದ್ಯ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವ ಅರ್ಚನಾ ಕೊಟ್ಟಿಗೆಗೆ ಅಂಥಾದ್ದೊಂದು ಅವಕಾಶ ತಾನೇ ತಾನಾಗಿ ಒಲಿದು ಬಂದಿದೆ. ಅದರ ಭಾಗವಾಗಿಯೇ, ತಾನು ಡಿಗ್ರಿ ವ್ಯಾಸಂಗ ನಡೆಸಿದ್ದ ಕೋರಮಂಗಲದ ಕ್ರೈಸ್ಟ್ ಯೂನಿವರ್ಸಿಸಿಯ ಭಾಗವಾಗಿರುವ ಕ್ರೈಸ್ಟ್ ಶಾಲೆಯಲ್ಲಿ ನಡೆದ ಅರ್ಥಪೂರ್ಣವಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅರ್ಚನಾ ಕೊಟ್ಟಿಗೆ ಮುಖ್ಯ ಅತಿಥಿಯಾಗಿ ಭಾಗಿಯಾದ ಸಾರ್ಥಕ ಕ್ಷಣಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
 
ಇದೇ ತಿಂಗಳ ಮೂರನೇ ತಾರೀಕಿನಂದು ಬೆಂಗಳೂರಿನ ಕೋರಮಂಗಲದ ಕ್ರೈಸ್ಟ್ ಯೂನಿವರ್ಸಿಟಿಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿದೆ. ಅದರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅರ್ಚನಾ ಪಾಲಿಗೆ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ, ಕನ್ನಡದ ಹಬ್ಬದಲ್ಲಿ ಭಾಗಿಯಾದ ಖುಷಿ ಸಿಕ್ಕಿದೆ. ಯಾಕೆಂದರೆ, ಅದು ಮಾಮೂಲಿ ಕಾರ್ಯಕ್ರಮವಾಗಿರಲಿಲ್ಲ. ನಾಡು ನುಡಿಗಳಿಗೆ ಗೌರವ ಸಮರ್ಪಿಸುವ, ಕುವೆಂಪು, ಡಾ. ರಾಜ್ ಕುಮಾರ್ ರಂಥಾ ಕನ್ನಡದ ಅಸ್ಮಿತೆಯನ್ನು ಸ್ಮರಿಸುವ, ಜಾನಪದ ಕಲೆಯೂ ಸೇರಿದಂತೆ ಈ ನೆಲದ ಅಷ್ಟೂ ಸಂಸ್ಕøತಿಗಳ ಕನ್ನಡಿಯಂತಿದ್ದ ಚೆಂದದ ಸಮಾರಂಭವಾಗಿತ್ತೆಂಬ ಧನ್ಯತೆ ಅರ್ಚನಾರಲ್ಲಿದೆ.
 
ಅರ್ಚನಾ ಕೊಟ್ಟಿಗೆ ಈಗ ನಟಿಯಾಗಿ ನೆಲೆ ಕಂಡುಕೊಂಡಿದ್ದಾರೆ. ವಿಭಿನ್ನವಾದ ಪಾತ್ರಗಳನ್ನು ಆವಾಹಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಪ್ರೀತಿಯನ್ನೂ ಸಂಪಾದಿಸಿಕೊಂಡಿದ್ದಾರೆ. ಹೀಗೆ ನಟಿಯಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಅರ್ಚನಾ 2015-18ನೇ ಸಾಲಿನಲ್ಲಿ ಕೋರಮಂಗಲ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪದವಿ ವ್ಯಾಸಂಗ ನಡೆಸಿದ್ದರು. ಆ ಕಾಲದಲ್ಲಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲೊಮದು ಸೀಟು ಸಿಕ್ಕಿದರೆ ಸಾಕೆಂಬ ಮನಃಸ್ಥಿತಿ ಅರ್ಚನಾರಲ್ಲಿತ್ತಂತೆ. ಹಾಗೆ ಪದವಿ ಪೂರೈಸಿದ ನಂತರ ನಟಿಯಾಗಿ ಹೊರ ಹೊಮ್ಮಿದ್ದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದರು. ಅದುವೇ ಅವಬರು ಓದಿದ ಯೂನಿವರ್ಸಿಟಿಯ ಮುಖ್ಯಸ್ಥರು ಅವರನ್ನು ಗುರುತು ಹಿಡಿಯುವಂತೆ ಮಾಡಿದೆ.
 
ಕ್ರೈಸ್ಟ್ ಶಾಲೆಯ ಕನ್ನಡ ರಾಜ್ಯೋತ್ಸವಕ್ಕೆ ತಯಾರಿ ನಡೆಯುವಾಗ ಮುಖ್ಯ ಅತಿಥಿಯಾಗಿ ಯಾರನ್ನು ಕರೆಯೋದೆಂಬ ಬಗ್ಗೆ ಚರ್ಚೆ ನಡೆದಿತ್ತು. ಆ ಸಂದರ್ಭದಲ್ಲಿ ಆಡಳಿತ ಮಂಡಳಿಯವರೊಬ್ಬರು ತಮ್ಮಲ್ಲಿಯೇ ಓದಿ ಪ್ರಸಿದ್ಧಿ ಪಡೆದುಕೊಂಡಿರುವ ಅರ್ಚನಾ ಕೊಟ್ಟಿಗೆ ಹೆಸರನ್ನು ಸೂಚಿಸಿದ್ದರಂತೆ. ನಂತರ ಫಾದರ್ ಕೂಡಾ ಅದಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಕಡೆಗೂ ಕ್ರೈಸ್ಟ್ ಯೂನಿವರ್ಸಿಟಿ ಕಡೆಯಿಂದ ಕರೆ ಬಂದಾಗ ಅರ್ಚನಾ ಥ್ರಿಲ್ ಆಗಿ ಒಪ್ಪಿಕೊಂಡಿದ್ದರಂತೆ. ಕಡೆಗೂ ಅಂದುಕೊಂಡದ್ದಕ್ಕಿಂತಲೂ ಒಪ್ಪ ಓರಣವಾಗಿ ನಡೆದ ಕನ್ನಡದ ಕಾರ್ಯಕ್ರಮದ ಭಾಗವಾದ ಖುಷಿ ಅರ್ಚನಾಗೆ ಸಿಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕ್ರೈಸ್ಟ್ ಶಾಲೆಯ ಕನ್ನಡ ರಾಜ್ಯೋತ್ಸವದಲ್ಲಿ ಅರ್ಚನಾ ಕೊಟ್ಟಿಗೆ ಸಂಭ್ರಮ! - Chitratara.com
Copyright 2009 chitratara.com Reproduction is forbidden unless authorized. All rights reserved.