"ಕೆ.ಜಿ.ಎಫ್", " ಕಾಂತಾರ " ದಂತಹ ವಿಶ್ವಪ್ರಸಿದ್ಧ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಬಹು ನಿರೀಕ್ಷಿತ ಚಿತ್ರ "ಸಲಾರ್".
ವಿಜಯ ಕಿರಗಂದೂರ್ ಅವರ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಖ್ಯಾತ ನಟ ಪ್ರಭಾಸ್ ನಾಯಕರಾಗಿ ನಟಿಸಿರುವ " ಸಲಾರ್" ಚಿತ್ರ ಡಿಸೆಂಬರ್ 22 ರಂದು ಭಾರತದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾ ವಿತರಣೆಯನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಮಾಡುತ್ತಿದೆ. "ಕರುನಾಡಿನಾದ್ಯಂತ ವಿತರಣೆಯ ಹೊಣೆ ನಮ್ಮದು. ಅತ್ಯಮೋಘ ಅನುಭನ ನೀಡುವ ಭರವಸೆಯೊಂದಿಗೆ ನಿಮ್ಮ ಮುಂದೆ" ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ. ಹಲವು ವಿಶೇಷಗಳನ್ನೊಳಗೊಂಡಿರುವ "ಸಲಾರ್" ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಹೊಂಬಾಳೆ ಫಿಲಂಸ್ ಈವರೆಗೂ ನಿರ್ಮಿಸಿರುವ ಎಲ್ಲಾ ಚಿತ್ರಗಳು ಹೊಂಬಾಳೆ ಫಿಲಂಸ್ ಸಂಸ್ಥೆ ಕರ್ನಾಟಕದಲ್ಲಿ ವಿತರಣೆ ಮಾಡಿದೆ . ಬಹು ನಿರೀಕ್ಷಿತ "ಸಲಾರ್" ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆ distribution ಮಾಡಲಿದೆ.