ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಡಾ:ಈಶ್ವರ್ ನಾಗನಾಥ್, ಹನುಮಂತರಾಯ ಮತ್ತು ಎಂ.ಎಸ್. ದಂಡಿನ್ ಸೇರಿ ನಿರ್ಮಿಸುತ್ತಿರುವ ಭಕ್ತಿಪ್ರದಾನ ಚಲನಚಿತ್ರ `ತ್ರಿಷ`.
ತೆಲುಗಿನ ಪ್ರೇಮಭಿಕ್ಷ, ಆಗಸ್ಟ್ 6 ರಾತ್ರಿ, ರುದ್ರಾಕ್ಷಪುರಂ ಚಿತ್ರಗಳನ್ನು ನಿರ್ದೇಶಿಸಿರುವ ಆರ್. ಕೆ. ಗಾಂಧಿ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ತ್ರಿಷ ಚಿತ್ರದ ಮುಹೂರ್ತ ಇತ್ತೀಚೆಗೆ ಹೈದರಾಬಾದ್ ನ ಮೀಯಾಪುರ್ ನಲ್ಲಿ ನೆರವೇರಿತು.
ಭಕ್ತಿಪ್ರದಾನ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಂಭವಾಮಿ ಯುಗೇ ಯುಗೇ ಎಂಬ ಟ್ಯಾಗ್ ಲೈನ್ ಇದ್ದು, ಮುಳಬಾಗಿಲು ತಾಲ್ಲೂಕಿನ ವಿರೂಪಾಕ್ಷ ದೇವಾಲಯದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಶಿವನ ಪರಮಭಕ್ತ ವಿರೂಪಾಕ್ಷನ ಪಾತ್ರವನ್ನು ಪಂಚಭಾಷಾ ತಾರೆ ಸುಮನ್ ನಿರ್ವಹಿಸುತ್ತಿದ್ದಾರೆ.
ಶಿವನೇ ಸರ್ವಸ್ವ ಎಂದು ನಂಬಿರುವ ಶಿವಭಕ್ತನಿಗೆ ಎದುರಾಗುವ ಸಮಸ್ಯೆಗಳು, ಮತ್ತು ಅವುಗಳಿಂದ ನೊಂದ ಆ ಶಿವಭಕ್ತ ದುಷ್ಕರ್ಮಿಗಳಿಗೆ ಕೊಡುವ ಶಾಪ ಹೇಗೆಲ್ಲಾ ಪ್ರತಿಫಲಿಸುತ್ತದೆ ಎಂಬ ಕಥಾನಕ ತ್ರಿಷ ಸಿನಿಮಾದಲ್ಲಿದೆ.
ಹೈದರಾಬಾದ್ ಸ್ಟುಡಿಯೋದಲ್ಲಿ ನಾಲ್ಕು ದಿನ ಚಿತ್ರೀಕರಿಸಿಕೊಂಡು ಬಂದಿರುವ ತಂಡ ಇದೇ 26ರಿಂದ ಹೊಸಕೋಟೆ ತಾಲೂಕಿನ ಭಕ್ತರಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ, ಮತ್ತು ಮುಳಬಾಗಿಲು ತಾಲೂಕಿನ ವಿರೂಪಾಕ್ಷ ದೇವಾಲಯದಲ್ಲಿ ಶೂಟಿಂಗ್ ಮುಂದುವರೆಸಲಿದೆ.
ತ್ರಿಷ ಚಿತ್ರಕ್ಕೆ ಎಂ..ಎಲ್ . ರಾಜ ಅವರ ಸಾಹಿತ್ಯ, ಸಂಗೀತ, ಮರಳಿಕೃಷ್ಣ ಅವರ ಛಾಯಾಗ್ರಹಣ, ನಾರ್ಸಿಂಗ್ ರಾಥೋಡ್ ಸಂಕಲನ, ಪ್ರಸಾದ್ ಕಲೆ, ಸೂರ್ಯಕಿರಣ್ ನೃತ್ಯ ಸಂಯೋಜನೆಯಿದ್ದು, ಸುರೇಶ್ ಸೂರ್ಯ, ಖುಷಿಗೌಡ, ಯುವೀನ, ಸುಪ್ರಿತಾ ರಾಜ್, ಮಹಾಂತೇಶ, ವಿರೂಪಾಕ್ಷಿ, ಭಕ್ತರಹಳ್ಳಿ ರವಿ, ಸುನಂದಾ ಕಲಬುರ್ಗಿ, ಗಣೇಶ್ ರಾವ್ ಕೇಸರಕರ್ ಉಳಿದ ತಾರಾಗಣದಲ್ಲಿದ್ದಾರೆ.