Chief Editor
Manohar. R (Manu)
Photo Journalist
chitrataramanu@gmail.com
+91 9845549026
`ರಾಜಸ್ಥಾನ್` ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ``ತಾರಿಣಿ``ಆಯ್ಕೆ
Posted date: 16 Thu, Nov 2023 11:31:49 PM

ವಿಭಿನ್ನ ಕಥೆಗಳ ಸಿನಿಮಾಗಳನ್ನು ನಿರ್ದೇಶಿಸಿ ಪ್ರಸಿದ್ದಿ ಪಡೆದಿರುವ ನಿರ್ದೇಶಕ  ಸಿದ್ದು ಪೂರ್ಣಚಂದ್ರ  ರವರು ಮತ್ತೊಂದು ಅಂತಹದೇ ಕಥೆ ಚಿತ್ರಕಥೆ  ಬರೆದು ನಿರ್ದೇಶಿಸಿರುವ ಚಿತ್ರ "ತಾರಿಣಿ"   ಪ್ರತಿಷ್ಟಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೊಂದಾದ "ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್" ಗೆ `ತಾರಿಣಿ` ಆಯ್ಕೆಯಾಗಿದೆ ಎಂದು ಚಿತ್ರತಂಡದಿಂದ  ಸಂತಸದ ಸುದ್ದಿ ಹೊರಬಂದಿದೆ.

ಜನವರಿ ತಿಂಗಳಲ್ಲಿ ರಾಜಸ್ಥಾನದ `ಜೈಪುರ್` ನಲ್ಲಿ ತಾರಿಣಿ ಚಿತ್ರ ಪ್ರದರ್ಶನವಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಬರುವ ಚಿತ್ರ ಪ್ರೇಮಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳುವರು ಎಂದು ಚಿತ್ರದ ನಿರ್ದೇಶಕ "ಸಿದ್ದು ಪೂರ್ಣಚಂದ್ರ" ರವರು ಮಾಹಿತಿ ಹಂಚಿಕೊಂಡರು. "ಶ್ರೀ ಗಜನಿ ಪ್ರೊಡಕ್ಷನ್ಸ್" ಲಾಂಛನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಡಾ.ಸುರೇಶ್ ಕೋಟ್ಯಾನ್ ಚಿತ್ರಾಪು ರವರು ಬಂಡವಾಳ ಹೂಡಿದ್ದಾರೆ, ಜೊತೆಗೆ  ಒಂದು ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ.                                               

ಗರ್ಭಿಣಿ ಮಹಿಳೆ ಕುರಿತಾದ ಕಥಾ ಸಾರಾಂಶ ಹೊಂದಿರುವ "ತಾರಿಣಿ" ಚಿತ್ರದಲ್ಲಿ ನಿಜವಾಗಿಯೂ ಪ್ರಗ್ನೆಂಟ್ ಆಗಿಯೇ ಮಮತಾ ರಾಹುತ್ ರವರು ಅಭಿನಯಿಸಿದ್ದಾರೆ. ಆಗಷ್ಟೇ ಹುಟ್ಟಿದ ಮಮತಾ ರಾಹುತ್ ಅವರ ಮಗುವಿನ ದೃಶ್ಯಗಳೂ `ತಾರಿಣಿ` ಚಿತ್ರದಲ್ಲಿರುವುದು ವಿಶೇಷ. ಈಗಾಗಲೇ ಅನೇಕ ಚಿತ್ರೋತ್ಸವಗಳಿಗೂ ಈ ಚಿತ್ರವನ್ನು  ಕಳುಹಿಸಲಾಗಿದೆ ಎಲ್ಲಾ ಕಡೆಯೂ ಪ್ರದರ್ಶನಗೊಂಡು ಅವಾರ್ಡ್ ಗೆಲ್ಲುವ ನಿರೀಕ್ಷೆಯಿದೆ ಎಂದು ನಿರ್ದೇಶಕರು ಆತ್ಮವಿಶ್ವಾಸ ತೋರಿದರು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಾಜಸ್ಥಾನ್` ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ``ತಾರಿಣಿ``ಆಯ್ಕೆ - Chitratara.com
Copyright 2009 chitratara.com Reproduction is forbidden unless authorized. All rights reserved.