ಇಡೀ ಊರಿಗೆ ಊರು ರಣ ರಣ ಬಿಸಿಲಾವಳಿ. ಎಲ್ಲೆಲ್ಲೂ ಧೂಳಿನ ದರ್ಪ. ಕೆಂಪುಕೆಂಪಾದ ರಸ್ತೆಗಳು. ಕಣ್ಣಿಗೆ ಚಾಕು ಇರಿಯುವಂಥ ಗವ್ ಎನ್ನುವ ಮರುಭೂಮಿ ರೂಪದ ಗಣಿಭೂಮಿ. ನೀರಿಗಾಗಿ ಎಲ್ಲೆಡೆ ಹಾಹಾಕಾರ. ಕೆಂಡಕ್ಕೇ ಸವಾಲು ಹಾಕುವ ಉರಿತಾಪ...
ಹೀಗೆ ಇಡೀ ಚಿತ್ರ ಬಳ್ಳಾರಿಯ ದರ್ಶನ ಮಾಡಿಸುತ್ತದೆ. ಗಣಿ ಧಣಿಗಳ ದುರಾಚಾರ, ಬಡವರ ಮೇಲಿನ ದೌರ್ಜನ್ಯ, ಕರ್ನಾಟಕ-ಆಂದ್ರದ ಗಡಿಭಾಗವಾದ ಆ ಬಳ್ಳಾರಿ ಎಂಬ ಬಳ್ಳಾರಿಯ ದಳ್ಳುರಿಗೆ ಕನ್ನಡಿ ಹಿಡಿಯುತ್ತಾ, ಗಣಿ ಮಾಲೀಕರ ಅ"ಗಣಿ"ತ ಭ್ರಷ್ಟಾಚಾರವನ್ನು ಹತ್ತಿಕ್ಕುವ ಪೃಥ್ವಿ ಎಂಬ ನಾಯಕನ ಬಗ್ಗೆ ಮುನ್ನುಡಿ ಬರೆಯುತ್ತಾ ಹೋಗುತ್ತಾರೆ ನಿರ್ದೇಶಕ ಜೇಕಬ್ ವರ್ಗಿಸ್.