Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕೆಟಿಎಂ ಹಾಡುಗಳು ಸವಾರಿ...ದೀಕ್ಷಿತ್ ಶೆಟ್ಟಿ ಹಾಗೂ ಸಂಜನಾ ಜೋಡಿ ಮೋಡಿ...ಫೆ.16ಕ್ಕೆ ಸಿನಿಮಾ ರಿಲೀಸ್
Posted date: 05 Mon, Feb 2024 09:26:07 AM
ಕನ್ನಡದ `ದಿಯಾ` ಹಾಗೂ ತೆಲುಗಿನ `ದಸರಾ` ಸಿನಿಮಾ ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಅಭಿನಯದ "ಕೆಟಿಎಂ" ಸಿನಿಮಾ ತನ್ನ ಟೀಸರ್‌ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಚಿತ್ರತಂಡ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ನೀಡುತ್ತಿದೆ. ಕೆಟಿಎಂ ಸಿನಿಮಾದ ಹಾಡುಗಳು ಕೇಳುಗರನ್ನು ಮೋಡಿ ಮಾಡುತ್ತಿವೆ. ಈ ಹಿಂದೆ ಬಿಡುಗಡೆಯಾಗಿದ್ದ  ಎರಡು ಸಾಂಗ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ‌. ಮಿಲಿಯನ್  ವೀವ್ಸ್ ಪಡೆದುಕೊಂಡಿರುವ ಕೆಟಿಎಂ ಹಾಡುಗಳು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚು ಮಾಡಿವೆ‌. ಇದೀಗ  ಕೆಟಿಎಂ ಸಿನಿಮಾದ ಮೂರನೇ ಹಾಡು ಅನಾವರಣಗೊಂಡಿದೆ. 

ಎಲ್ಲಾ ನೀನೇನೆ ಎಂಬ ಮೆಲೋಡಿ ಗಾನಬಜಾನಕ್ಕೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು,  ಚೇತನ್ ರಾವ್ ಸಂಚಿತ್ ಹೆಗ್ಡೆ ಜೊತೆಗೂಡಿ ಧ್ವನಿಯಾಗುವುದರ ಜೊತೆಗೆ ಸಂಗೀತ ಒದಗಿಸಿದ್ದಾರೆ. ಎಲ್ಲಾ ನೀನೇನೆ ಎನ್ನುತ್ತಾ ದೀಕ್ಷಿತ್ ಸಂಜನಾ ದಾಸ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಈ ಹಿಂದೆ "ಅಥರ್ವ" ಸಿನಿಮಾ ನಿರ್ದೇಶಿಸಿದ್ದ ಅರುಣ್‌ "ಕೆಟಿಎಂ" ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. "ಮಹಾಸಿಂಹ ಮೂವೀಸ್‌" ಬ್ಯಾನರ್‌ನಲ್ಲಿ ವಿನಯ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನವಿರಾದ ಪ್ರೇಮಕಹಾನಿ ಇರುವ "ಕೆಟಿಎಂ" ಸಿನಿಮಾದಲ್ಲಿ ದೀಕ್ಷಿತ್‌ ಶೆಟ್ಟಿ ನಾಲ್ಕು ವಿಭಿನ್ನ ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಕಾಜಲ್‌ ಕುಂದರ್‌ ಹಾಗೂ ಸಂಜನಾ ನಾಯಕಿಯರಾಗಿದ್ದಾರೆ. ಉಳಿದಂತೆ ಉಷಾ ಭಂಡಾರಿ, ಪ್ರಕಾಶ್‌ ತುಮ್ಮಿನಾಡು, ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತು, ರಘು ರಾಮನಕೊಪ್ಪ, ಶಾನಿಲ್‌ ಗುರು, ಬಾಬು ಹಿರಣಯ್ಯ, ದೇವ್‌ ದೇವಯ್ಯ, ಅಭಿಷೇಕ್‌ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಿನಿಮಾಕ್ಕೆ ನವೀನ್‌ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನವಿದೆ. ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರು ಸುತ್ತಮುತ್ತ "ಕೆಟಿಎಂ" ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಇದೇ ಫೆಬ್ರವರಿ 16ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೆಟಿಎಂ ಹಾಡುಗಳು ಸವಾರಿ...ದೀಕ್ಷಿತ್ ಶೆಟ್ಟಿ ಹಾಗೂ ಸಂಜನಾ ಜೋಡಿ ಮೋಡಿ...ಫೆ.16ಕ್ಕೆ ಸಿನಿಮಾ ರಿಲೀಸ್ - Chitratara.com
Copyright 2009 chitratara.com Reproduction is forbidden unless authorized. All rights reserved.