Chief Editor
Manohar. R (Manu)
Photo Journalist
chitrataramanu@gmail.com
+91 9845549026
ದಿಯಾ ದೀಕ್ಷಿತ್ ಗೆ ಡಿವೈನ್ ಸ್ಟಾರ್ ರಿಷಬ್ ಸಾಥ್..ಕೆಟಿಎಂ ಟ್ರೈಲರ್ ರಿಲೀಸ್ ಮಾಡಿದ ಕೀರ್ತಿ ಸುರೇಶ್-ರಚಿತಾ-ರಶ್ಮಿಕಾ..
Posted date: 10 Sat, Feb 2024 09:32:30 AM
ದಸರಾ ಸಿನಿಮಾ ಮೂಲಕ ನ್ಯಾಚುಲರ್ ಸ್ಟಾರ್ ನಾನಿ ಜೊತೆಗೂಡಿ ಧಮಾಕ ಎಬ್ಬಿಸಿದ್ದ ಕನ್ನಡದ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಈಗ ಬಹುಭಾಷಾ ನಟ..ಕನ್ನಡದ ಜೊತೆಗೆ ಪಕ್ಕದ ತೆಲುಗು, ಮಲಯಾಳಂಗೂ ಹೆಜ್ಜೆ ಇಟ್ಟಿರುವ ಈ ಚಾಕಲೇಟ್ ಹೀರೋ ನಟನೆಯ ಬಹುನಿರೀಕ್ಷಿತ ಸಿನಿಮಾ ಕೆಟಿಎಂ..ಟೈಟಲ್ ನಿಂದ ಗಮನಸೆಳೆಯುತ್ತಿರುವ ಹಾಡುಗಳ ಮೂಲಕ ಮೋಡಿ ಮಾಡ್ತಿರುವ ಕೆಟಿಎಂ ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ.
 
ಕೆಟಿಎಂ ಸಿನಿಮಾದ ಟೀಸರ್ ನ್ನು ಏಕಕಾಲದಲ್ಲಿ 70ಕ್ಕೂ ಹೆಚ್ಚು ಕನ್ನಡ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈಗ ಮೊದಲ ನೋಟವನ್ನು ಸೌತ್ ಇಂಡಿಯಾ ಸ್ಟಾರ್ಸ್ ಬಿಡುಗಡೆ ಮಾಡಿದ್ದಾರೆ. ರಿಷಬ್ ಶೆಟ್ಟಿ, ಡಿಂಪಲ್ ಕ್ವೀನ್ ರಚಿತಾರಾಮ್, ಮಹಾನಟಿ ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ,  ಮಲಯಾಳಂ ನಟ ಶೈನ್ ಟಾಮ್ ಚಾಕೋ, ತೆಲುಗಿನ ರಾಹುಲ್ ರವೀಂದ್ರನ್ ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.  
 
ಒಂದು ಸುಂದರ ಪ್ರೇಮಕಥೆ..ಈ ಕಥೆಯಲ್ಲಿ ಒಬ್ಬ ನಾಯಕ..ಇಬ್ಬರು ನಾಯಕಿಯರು..ಪ್ರೀತಿಗಾಗಿ ಪರಿತಪ್ಪಿಸುವ ನಾಯಕ..ನಾಯಕಅಂದ್ರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಾಯಕಿಯರು..ನಾಯಕನ ಜೀವನದಲ್ಲಿ ನಡೆದ ಏರಿಳಿತಗಳು ಕೆಟಿಎಂ ಟ್ರೇಲರ್ ನ ಹೈಲೆಟ್ಸ್..ಥೇಟ್ ದಿಯಾ ಸಿನಿಮಾವನ್ನು ಮತ್ತೊಮ್ಮೆ ನೆನಪು ಮಾಡಿರುವ ಈ ಝಲಕ್ ನೋಡುಗರಿಗೆ ಕುತೂಹಲ ಹೆಚ್ಚಿಸಿದೆ. ಹಾಗಂತ ಈ ಚಿತ್ರಕ್ಕೂ ಆ ಚಿತ್ರಕ್ಕೂ ಯಾವುದೇ ಲಿಂಕ್ ಇಲ್ಲ..ದೀಕ್ಷಿತ್ ಶೆಟ್ಟಿ ಭಗ್ನಪ್ರೇಮಿಯಾಗಿ ಪ್ರೇಕ್ಷಕರನ್ನು ಆವರಿಸಿಕೊಂಡ್ರೆ, ಅವರಿಗೆ ಜೋಡಿಯಾಗಿ ಸಂಜನಾ ದಾಸ್ ಹಾಗೂ ಕಾಜಲ್ ಕುಂದರ್ ಸಾಥ್ ಕೊಟ್ಟಿದ್ದಾರೆ. ಉಷಾ ಭಂಡಾರಿ, ಪ್ರಕಾಶ್ ತುಮ್ಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಣಯ್ಯ, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
 
ಅಥರ್ವ ಸಿನಿಮಾ ನಿರ್ದೇಶಿಸಿದ್ದ ಅರುಣ್ ‘ಕೆಟಿಎಂ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಎರಡನೇ ಪ್ರಯತ್ನ.. ಈ ಚಿತ್ರವನ್ನು ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ನಿರ್ಮಾಣ ಮಾಡಿದ್ದು, ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನವೀನ್ ಕ್ಯಾಮೆರಾ ವರ್ಕ್, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಸಂಗೀತ ನಿರ್ದೇಶನ, ಅಭಿನಂದನ್ ದೇಶಪ್ರಿಯ ಸಂಭಾಷಣೆ ಈ ಚಿತ್ರಕ್ಕೆ ಇದೆ. ಭರದಿಂದ ಕೆಟಿಎಂ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದ್ದು, ಇದೇ ತಿಂಗಳ 16ಕ್ಕೆ ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರ್ತಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದಿಯಾ ದೀಕ್ಷಿತ್ ಗೆ ಡಿವೈನ್ ಸ್ಟಾರ್ ರಿಷಬ್ ಸಾಥ್..ಕೆಟಿಎಂ ಟ್ರೈಲರ್ ರಿಲೀಸ್ ಮಾಡಿದ ಕೀರ್ತಿ ಸುರೇಶ್-ರಚಿತಾ-ರಶ್ಮಿಕಾ.. - Chitratara.com
Copyright 2009 chitratara.com Reproduction is forbidden unless authorized. All rights reserved.