Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಿಂಗ್ ಕೊಹ್ಲಿ ತಂಡಕ್ಕೆ ಚಿಯರ್ ಎಂದ ಕನ್ನಡ ತಾರೆಯರು..RCB ಕಪ್ ಎತ್ತಿ ಹಿಡಿಲೇಬೇಕು..ಇದು `ಮರ್ಯಾದೆ ಪ್ರಶ್ನೆ` ಗುರು..
Posted date: 23 Sat, Mar 2024 08:20:37 AM
ಆರ್ಸಿಬಿ ಅಭಿಮಾನಿಗಳ ‘ಈ ಸಲ ಕಪ್ ನಮ್ದೇ’ ಎನ್ನುವ ಘೋಷಣೆಗೆ ಪರಿಪೂರ್ಣ ಅರ್ಥಸಿಕ್ಕಂಗಾಗಿದೆ.  ಆರ್ಸಿಬಿ ವನಿತೆಯರು ತಂಡ WPL ಟ್ರೋಫಿ ಎತ್ತಿ ಹಿಡಿದು, ಬೆಂಗಳೂರಿಗರ ಬಹು ವರ್ಷಗಳ ಕನಸ್ಸನ್ನು ನನಸು ಮಾಡಿದ್ದಾರೆ. WPL ಮುಗಿಯುತ್ತಿದ್ದಂತೆ ಈಗ ಐಪಿಎಲ್ ಜ್ವರ ಏರುತ್ತಿದೆ. ಹೆಣ್ಮಕ್ಳು ಸ್ಟ್ರಾಂಗ್ ಗುರು ಅಂತಾ ನಮ್ಮ ಆರ್ ಸಿಬಿ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಈಗ ಕಿಂಗ್ ಕೊಹ್ಲಿ ಬಳಗ ಕಪ್ ಹೊಡೆಯುತ್ತಿಕ್ಕೆ ನಮ್ಮ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಚಿಯರ್ಸ್ ಹೇಳಿದ್ದಾರೆ.

ಆರ್ ಸಿಬಿ ತಂಡ ಪ್ರೋತ್ಸಾಹ ಫ್ಲಸ್ ಉತ್ಸಹ ಹೆಚ್ಚಿಸುವ ಹಾಡೊಂದು ಬಿಡುಗಡೆಯಾಗಿದೆ.
 
ಸಕ್ಕತ್ ಸ್ಟುಡಿಯೋನ ಸ್ಪೆಷಲ್ ಕೊಡುಗೆಯಾಗಿರುವ ಆರ್ ಸಿಬಿ ಕಪ್ ಗೆಲ್ಬೇಕು ಮರ್ಯಾದೆ ಪ್ರಶ್ನೆ ಎಂಬ ಹಾಡಿಗೆ ಕೀರ್ತಿ ನಾರಾಯಣ್ ಪದ ಪೊಣಿಸಿದ್ದು, ಐಶ್ವರ್ಯ ರಂಗರಾಜನ್ ಕಂಠ ಕುಣಿಸಿದ್ದಾರೆ. ಯುವ ತಾರೆಗಳಾದ ಶೈನ್ ಶೆಟ್ಟಿ, ಸಾನ್ಯಾ ಅಯ್ಯರ್, ಕಿಶನ್ ಬೆಳಗಲಿ, ದಿವ್ಯಾ ಉರುಡುಗ ಮತ್ತು ರಘು ಗೌಡ ಮತ್ತು ಅನೇಕರು ಕಲ್ಯಾಣ್ ಟ್ಯೂನ್ ಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ್ದಾರೆ. 

ಆರ್ ಸಿಬಿ ಪುರುಷ ತಂಡಕ್ಕೆ ಹೊಸ ಹುರುಪು ತುಂಬಲಿರುವ ಈ ಸಿಂಗಿಂಗ್ ಎಲ್ಲೆಡೆ ಸೆನ್ಸೇಷನ್ ಸೃಷ್ಟಿಸುತ್ತಿದೆ. ಈ ಹಾಡಿಗೆ ಹೆಜ್ಜೆ ಹಾಕಿರುವ ಶೈನ್ ಶೆಟ್ಟಿ ಮಾತನಾಡಿ,  "ಕ್ರಿಕೆಟ್ ಕೇವಲ ಒಂದು ಆಟವಲ್ಲ; ಇದು ಲಕ್ಷಾಂತರ ಅಭಿಮಾನಿಗಳನ್ನು ಒಗ್ಗೂಡಿಸುವ ಭಾವನೆಯಾಗಿದೆ. ನಮ್ಮ ಮಹಿಳಾ ತಂಡದ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾದ ನಂತರ, ಪುರುಷರ ತಂಡಕ್ಕೆ ನಮ್ಮ ಹೃತ್ಪೂರ್ವಕ ಬೆಂಬಲವನ್ನು ನೀಡುವ ಸಮಯ ಬಂದಿದೆ. ಈ ಹಾಡಿನ ಮೂಲಕ, ನಾವು ಅವರ ಸಾಮರ್ಥ್ಯಗಳ ಮೇಲಿನ ನಮ್ಮ ನಂಬಿಕೆಯನ್ನು ತಿಳಿಸಲು ಬಯಸುತ್ತೇವೆ ಮತ್ತು ಮೈದಾನದಲ್ಲಿ ನಮ್ಮನ್ನು ಹೆಮ್ಮೆಪಡುವಂತೆ ಮಾಡಲು ಅವರನ್ನು ಒತ್ತಾಯಿಸುತ್ತೇವೆ " ಎಂದಿದ್ದಾರೆ.

ಸಾನ್ಯಾ ಅಯ್ಯರ್, "ಎಲ್ಲಾ ವರ್ಗದ ಜನರನ್ನು ಪ್ರೇರೇಪಿಸುವ ಮತ್ತು ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಇದೆ. ಕಲಾವಿದರಾಗಿ, ನಮ್ಮ ತಂಡಗಳಿಗೆ ಸಕಾರಾತ್ಮಕತೆಯನ್ನು ಹರಡಲು ಮತ್ತು ಹುರಿದುಂಬಿಸಲು ನಮ್ಮ ವೇದಿಕೆಗಳನ್ನು ಬಳಸುವುದು ನಮ್ಮ ಜವಾಬ್ದಾರಿಯಾಗಿದೆ. ಬೆಂಗಳೂರು ಪುರುಷರ ಕ್ರಿಕೆಟ್ ತಂಡವು ಗೆಲ್ಲುವುದು ಎಂಬ ನಿರೀಕ್ಷೆಯಿದೆ ನಮಗೆ ವಿಶ್ವಾಸವಿದೆ "ಎಂದು ಹೇಳಿದರು. 

ಸೋಷಿಯಲ್ ಮೀಡಿಯಾ ಸ್ಟಾರ್  ರಘು ಗೌಡ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದರು. "ಕ್ರೀಡೆಗಳು ಸಮುದಾಯಗಳನ್ನು ಹೇಗೆ ಒಗ್ಗೂಡಿಸುತ್ತವೆ ಎಂಬುದನ್ನು ನೋಡುವುದು ನಂಬಲಾಗದ ಸಂಗತಿ. ಈ ಹಾಡು ಸ್ಯಾಂಡಲ್ ವುಡ್ ಮತ್ತು ಕ್ರಿಕೆಟ್ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಮತ್ತು ಇದು ಬೆಂಗಳೂರು ತಂಡದ ಹಿಂದೆ ಇನ್ನೂ ಹೆಚ್ಚಿನ ಉತ್ಸಾಹದಿಂದ ನಿಲ್ಲಲು ಅಭಿಮಾನಿಗಳನ್ನು ಪ್ರೇರೇಪಿಸುತ್ತದೆ ಎಂದು ನಾನು ನಂಬುತ್ತೇನೆ "ಎಂದು ಅವರು ಹೇಳಿದರು. 

ನೃತ್ಯಕ್ಕೆ ಹೆಸರುವಾಸಿಯಾದ ಕಿಶನ್ ಬೆಲಗಲಿ"ನೃತ್ಯ ಸಂಯೋಜಕ ಸುಚಿನ್ ನ ಹುಕ್ ಸ್ಟೆಪ್ ನನಗೆ ತುಂಬಾ ಇಷ್ಟವಾಯಿತು."ಎಂದು ಅವರು ಹೇಳಿದರು, 

" ಮರ್ಯಾದೆ ಪಶ್ನೆ " ಚಿತ್ರವನ್ನು ನಿರ್ಮಿಸಿರುವ ಸಕ್ಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿದ್ದು, ಈ ಹಾಡಿಗೂ ಸಿನಿಮಾಗೂ ಸಂಬಂಧವಿಲ್ಲ. ಆದರೆ  ಸಿನಿಮಾ ಶೀರ್ಷಿಕೆ ಇದರಲ್ಲಿ ಬಳಕೆಯಾಗಿದೆ, ಸಿನಿಮಾ ಪ್ರಚಾರಕ್ಕಿಂತ ನಮ್ಮ ಬೆಂಗಳೂರು ತಂಡ ಗೆಲ್ಲಲ್ಲಿ ಎಂಬುದು ಮರ್ಯಾದೆ ಪ್ರಶ್ನೆ ಚಿತ್ರತಂಡ ಆಶಯ. ಸಖತ್ ಕ್ರಿಯೇಟಿವಿಟಿಯಾಗಿ ಪ್ರಚಾರದ ಪಡಸಾಲೆಗೆ ಇಳಿದಿರುವ ಆರ್ ಜೆ ಪ್ರದೀಪ್ ಅವರ ತಂಡಕ್ಕೆ ರಾಯಲ್ ಸೆಲ್ಯೂಟ್.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಿಂಗ್ ಕೊಹ್ಲಿ ತಂಡಕ್ಕೆ ಚಿಯರ್ ಎಂದ ಕನ್ನಡ ತಾರೆಯರು..RCB ಕಪ್ ಎತ್ತಿ ಹಿಡಿಲೇಬೇಕು..ಇದು `ಮರ್ಯಾದೆ ಪ್ರಶ್ನೆ` ಗುರು.. - Chitratara.com
Copyright 2009 chitratara.com Reproduction is forbidden unless authorized. All rights reserved.