Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರುಳ ಕುಡಿಗಾಗೆ ತಾಯಿಯೊಬ್ಬಳ ಹೋರಾಟ ... --ರೇಟಿಂಗ್: 3.5/5 ****
Posted date: 30 Sat, Mar 2024 11:07:11 AM
ಹೆಣ್ಣು ಭ್ರೂಣಹತ್ಯೆ ಸಮಾಜದ ದೊಡ್ಡ ಪಿಡುಗು, ಅದರ ಪರಿಣಾಮ ಇತ್ತೀಚಿನ ದಿನಗಳಲ್ಲಿ ಹೆಣ್ಣು ಸಂತತಿಯೇ ಕಡಿಮೆಯಾಗುತ್ತಿದೆ. ಇಂಥದೇ ಒಂದು ಕಂಟೆಂಟ್ ಇಟ್ಟುಕೊಂಡು ಈ ವಾರ ತೆರೆಕಂಡಿರುವ ಚಿತ್ರ ತಾರಿಣಿ.  ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜ ಎಷ್ಟೇ ಮುಂದುವರಿದರೂ ಸಾಮಾಜಿಕ ವ್ಯವಸ್ಥೆಗಳು ಮಾತ್ರ ಬದಲಾಗಿಲ್ಲ. ಸುಶಿಕ್ಷಿತರು ಎನಿಸಿಕೊಂಡ ಜನರೇ  ಮೌಢ್ಯಗಳಿಗೆ ಒಳಗಾಗಿ ಪಾಪ ಕೃತ್ಯ ಮಾಡುವುದನ್ನು ನಾನು ಪ್ರತಿನಿತ್ಯ ನೋಡುತ್ತಿದ್ದೇವೆ. ಈ  ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ವಿವಿಧ ಹಂತಗಳಲ್ಲಿ ಶೋಷಣೆಗೊಳಗಾಗುತ್ತಲೇ ಇದ್ದಾಳೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಹೆಣ್ಣೆಂಬ ಕಾರಣಕ್ಕೆ ಭ್ರೂಣ ಹತ್ಯೆ ಪ್ರಕರಣಗಳು ಗ್ರಾಮೀಣ ಪ್ರದೇಶಗಳು ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಯುತ್ತಲೇ ಇವೆ. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಲಿಂಗಪತ್ತೆ ಮಾಡುವುದು ಅಪರಾಧವೆಂದು ಸರ್ಕಾರ ಕಾನೂನು ಜಾರಿಗೊಳಿಸಿದರೂ ಅಕ್ರಮವಾಗಿ ಲಿಂಗಪತ್ತೆ ಮಾಡುವುದು  ನಡೆಯುತ್ತಲೇ ಇದೆ.  ಭ್ರೂಣಹತ್ಯೆ ಪ್ರಕರಣಗಳನ್ನು ತಡೆಗಟ್ಟಿ ಉತ್ತಮ ಸಮಾಜ ರೂಪಿಸುವಲ್ಲಿ  ತಾರಿಣಿ ಚಿತ್ರತಂಡದ ಪ್ರಯತ್ನ  ಪ್ರಶಂಸನೀಯವಾದುದು.  ಈಗಾಗಲೇ ಬೆಂಗಳೂರು ಚಲನಚಿತ್ರೋತ್ಸವ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ  ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿದ್ದ ತಾರಿಣಿ  ೨೫ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. 
 
ನಾಯಕಿ ನಾಯಕಿ ಕೀರ್ತಿ(ಮಮತಾ ರಾಹುತ್)ತನ್ನ ಮಗುವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ  ಕಥೆಯನ್ನು ನಿರ್ದೇಶಕ ಸಿದ್ದು ಪೂರ್ಣಚಂದ್ರ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ, ಇದು  ಬರೀ  ಕೀರ್ತಿ ಒಬ್ಬಳ ಕಥೆಯಲ್ಲ, ಈ ರೀತಿ ಶೋಷಣೆಗೊಳಗಾದ ಲಕ್ಷಾಂತರ ಮಹಿಳೆಯರ ಪ್ರತಿನಿದಿಯಾಗಿ ಆಕೆ ಕಾಣಿಸಿಕೊಂಡಿದ್ದಾಳೆ.
 
ಮಧ್ಯಮ ವರ್ಗದ ಜನರನ್ನು ವಂಚಿಸಿ ಲಕ್ಷಾಂತರ  ಹಣ ಲೂಟಿ ಮಾಡುವ ಅಕ್ರಮ ಸ್ಕಾನಿಂಗ್ ಸೆಂಟರ್‌ಗಳು ಹಲವಾರು ಕುಟುಂಬಗಳನ್ನು ಬೀದಿಗೆ ತಂದ ಪ್ರಕರಣಗಳನ್ನು ನಾವು  ನಿತ್ಯ ನೋಡುತ್ತಿದ್ದೇವೆ. ಚಿತ್ರದಲ್ಲಿ  ಹೆಣ್ಣು ಮಗುವಿಗೆ ವಿಷವುಣಿಸಿ ಕೊಲ್ಲುವ ಹೀನವ್ಯವಸ್ಥೆ ಮಾನವೀಯತೆ ಮರೆತ ಸಮಾಜವನ್ನು ಪ್ರತಿಬಿಂಬಿಸುತ್ತದೆ,  ಜೊತೆಗೆ ಹೆಣ್ಣು ಮಗಳೊಬ್ಬಳ ನೋವಿನ ಕಥೆ ಹೃದಯ  ತಟ್ಟುತ್ತದೆ. ಭ್ರೂಣಹತ್ಯೆ ತಡೆಗಟ್ಟುವಲ್ಲಿ  ಎಷ್ಟೇ ಹೋರಾಟ, ಜನಜಾಗೃತಿ ಕಾರ್ಯಕ್ರಮಗಳು ನಡೆದರೂ ಧನದಾಹಿ ವೈದ್ಯರುಗಳು  ಇದಕ್ಕೆ  ಕುಮ್ಮಕ್ಕು ನೀಡುತ್ತಿರುತ್ತಾರೆ. 
 
ಅದಕ್ಕೆ ಗಂಡು ಮಗುವೇ ಬೇಕೆಂಬ ಕುರುಡು ಮನಸ್ಥಿತಿಯುಳ್ಳ  ಕುಟುಂಬದವರು, ಪತಿ ತಾಯಿಯಾಗಬೇಕೆಂದು ಕನಸುಹೊತ್ತ ತನ್ನ ಪತ್ನಿಯ ಮನದಾಸೆಗೆ ವಿರುದ್ದವಾಗಿ ಹೆಣ್ಣು ಮಗುವನ್ನು ಹತ್ಯೆ ಮಾಡಲು ಮುಂದಾಗುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳು ನಾಯಕಿ ಕೀರ್ತಿಯ ಜೀವನದಲ್ಲಿ ಹೊಸ ಬೆಳಕನ್ನು  ಮೂಡಿಸುತ್ತಾಳೆ.  ಕೀರ್ತಿ ತನ್ನ ಮಗುವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ  ಕಥೆಯೇ ತಾರಿಣಿ. ಹೆಣ್ಣೊಬ್ಬಳು ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಅಕ್ಕತಂಗಿಯಾಗಿ, ಸಮಾಜದಲ್ಲಿ ಗಂಡಿಗೆ ಸಮಾನವಾಗಿ ಕುಟುಂಬ ನಿರ್ವಹಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಾಳೆ. ಆದ್ದರಿಂದ ಹೆಣ್ಣು ಭ್ರೂಣಹತ್ಯೆ ತಡೆಯಲು ಸಮಾಜದ ಪ್ರತಿಯೊಬ್ಬರೂ  ಪ್ರಯತ್ನಿಸಬೇಕು ಎಂಬ ಸಂದೇಶವನ್ನು ಈ  ಸಿನಿಮಾದ ಮೂಲಕ ಹೇಳುವ ಪ್ರಯತ್ನ  ಮಾಡಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ. 
 
ಇಡಿ ಚಿತ್ರದಲ್ಲಿ ಮಮತಾ ರಾಹುತ್ ಅವರು ತುಂಬಿಕೊಂಡಿದ್ದಾರೆ. ಎಲ್ಲಾ  ಕಲಾವಿದರೂ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾಯಕನ ಪಾತ್ರದಲ್ಲಿ ರಂಜನ್ ಉತ್ತಮ ಅಭಿನಯ ನೀಡಿದ್ದಾರೆ,  ಡಾಕ್ಟರ್ ಆಗಿ ಭವಾನಿ ಪ್ರಕಾಶ್, ಡಾ,ಸುರೇಶ್ ಕೊಟ್ಯಾನ್, ಸುಧಾಪ್ರಸನ್ನ, ಪ್ರಮೀಳಾ ಸುಬ್ರಮಣ್ಯಂ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವತುಂಬಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರುಳ ಕುಡಿಗಾಗೆ ತಾಯಿಯೊಬ್ಬಳ ಹೋರಾಟ ... --ರೇಟಿಂಗ್: 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.