Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಿಡುಗಡೆಯಾಯ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರ ಸ್ಟೂಡೆಂಟ್ ಪಾರ್ಟಿ ವೀಡಿಯೋ ಸಾಂಗ್!
Posted date: 16 Sun, Jun 2024 10:05:10 AM
ಅರುಣ್ ಅಮುಕ್ತ ನಿರ್ದೇಶನದ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಸ್ಟೂಡೆಂಟ್ ಪಾರ್ಟಿ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯಲ್ಲಿ ಈ  ಸಾಂಗ್ ಅನ್ನು ಅನಾವರಣಗೊಳಿಸಲಾಗಿದೆ. ನಿರ್ದೇಶಕ ಅರುಣ್ ಅಮುಕ್ತ, ಚಂದನ್ ಶೆಟ್ಟಿ, ಚೇತನ್ ಕುಮಾರ್ ಹಾಜರಿದ್ದ ಈ ವೇದಿಕೆಯಲ್ಲಿ ಒಟ್ಟಾರೆ ಸಿನಿಮಾ ರೂಪುಗೊಂಡಿದ್ದರ ಬಗ್ಗೆ, ಸದರಿ ಪಾರ್ಟಿ ಸಾಂಗ್ ನ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. 
 
ಈಗ ಬಿಡುಗಡೆಗೊಂಡಿರೋ ಹಾಡು ರ್ಯಾಪ್ ಶೈಲಿಯಲ್ಲಿ ಮೂಡಿ ಬಂದಿದೆ. ಚೇತನ್ ಕುಮಾರ್ ಸಾಹಿತ್ಯಕ್ಕೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ಇದು ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಅವರುಗಳ ಎರಡನೇ ಸಮಾಗಮ. ವಿಜೇತ್ ಕೃಷ್ಣ, ಚಂದನ್ ಶೆಟ್ಟಿ ಮತ್ತು ಚೇತನ್ ಕುಮಾರ್ ದಶಕದ ಹಿಂದೆ ರೂಂ ಮೇಟ್ ಗಳಾಗಿದ್ದರಂತೆ. ಈ ಹಿಂದೆ ವಿಜೇತ್ ಮತ್ತು ಚಂದನ್ ಶೆಟ್ಟಿ ಸಮಾಗಮದಲ್ಲಿ ಒಂದೇ ಒಂದು ಪೆಗ್ಗಿಗೆ ಎಂಬ ಹಾಡು ಬಂದಿತ್ತು. ಅದು ಸೂಪರ್ ಹಿಟ್ ಆಗಿತ್ತು. ಈ ಹಾಡೂ ಅದೇ ರೀತಿ ಹಿಟ್ಟಾಗಲೆಂಬ ಆಶಯವನ್ನ ಚಂದನ್ ಶೆಟ್ಟಿ ವ್ಯಕ್ತ ಪಡಿಸಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಿಡುಗಡೆಯಾಯ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರ ಸ್ಟೂಡೆಂಟ್ ಪಾರ್ಟಿ ವೀಡಿಯೋ ಸಾಂಗ್! - Chitratara.com
Copyright 2009 chitratara.com Reproduction is forbidden unless authorized. All rights reserved.