Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಬಲ್ ಇಸ್ಮಾರ್ಟ್ ಬಿಡುಗಡೆಗೆ‌ ಮುಹೂರ್ತ ಫಿಕ್ಸ್..ಆ.15ಕ್ಕೆ ಪೂರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಸಿನಿಮಾ ರಿಲೀಸ್
Posted date: 17 Mon, Jun 2024 10:20:32 AM
ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟ ರಾಮ್ ಪೋತಿನೇನಿ ಕಾಂಬಿನೇಷನ್ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆಯೇ `ಡಬಲ್ ಇಸ್ಮಾರ್ಟ್` ಚಿತ್ರದ ಟೀಸರ್​ ಮೂಡಿಬಂದಿದೆ. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಆಗಸ್ಟ್ 15ಕ್ಕೆ ಡಬಲ್ ಇಸ್ಮಾರ್ಟ್ ಚಿತ್ರ ತೆರೆಗೆ ಬರಲಿದೆ.
 
ಸೌತ್​ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್​ ಇಸ್ಮಾರ್ಟ್​’ ಚಿತ್ರದಲ್ಲೂ ವಿಲನ್​ ಆಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಕಾವ್ಯಾ ಥಾಪರ್ ನಟಿಸಿದ್ದಾರೆ. 
 
ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ`ಡಬಲ್​ ಇಸ್ಮಾರ್ಟ್` ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. `ಪುರಿ ಕನೆಕ್ಟ್ಸ್​` ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
 
ಈ‌ ಮೊದಲ ಬಂದ ಈ ಚಿತ್ರದ ಮೊದಲ ಸರಣಿ ಸಿನಿಮಾ 2019 ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ. ಟಾಲಿವುಡ್‌ನಲ್ಲಿ ಈಗಲೇ ಒಂದು ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ ಅಂತ ಹೇಳಬಹುದು.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಬಲ್ ಇಸ್ಮಾರ್ಟ್ ಬಿಡುಗಡೆಗೆ‌ ಮುಹೂರ್ತ ಫಿಕ್ಸ್..ಆ.15ಕ್ಕೆ ಪೂರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಸಿನಿಮಾ ರಿಲೀಸ್ - Chitratara.com
Copyright 2009 chitratara.com Reproduction is forbidden unless authorized. All rights reserved.