ಸಿದ್ಲಿಂಗು2 ಚಿತ್ರದ ಬ್ರಾಂಡ್ ಅಂಬಾಸಿಡರ್ ಆಗಿ, ಲೂಸ್ ಮಾದ ಯೋಗಿಯವರು, ಅಂಚೆ ಕಛೇರಿ ಅಚ್ಚುತಕುಮಾರ ಆಗಿ, ಸಿದ್ಲಿಂಗು2 ಚಿತ್ರದ ಮುಂದಿನ ಎಲ್ಲಾ ಪ್ರಚಾರ ಕಾರ್ಯಕ್ರಮಗಳನ್ನು ರೂಪಿಸಲಿದ್ದಾರೆ.
ಚಿತ್ರದ ಕುರಿತಾದ ಅಧಿಕೃತ ಮಾಹಿತಿಗಳನ್ನಾಗಲಿ ಅಥವಾ ಚಿತ್ರದ ಇನ್ನಿತರೆ ಎಲ್ಲ ಸುದ್ದಿ ಸಮಾಚಾರಗಳನ್ನ, ಅಂಚೆ ಕಛೇರಿ ಅಚ್ಚುತಕುಮಾರ ಇವರಿಂದಲೇ ಚಿತ್ರತಂಡ ಪ್ರೇಕ್ಷಕರಿಗೆ ಕೊಡಲಿದೆ, ಈ ತರಹದ ವಿಭಿನ್ನ ಪ್ರಯತ್ನದ ಮೂಲಕ ಸಿದ್ಲಿಂಗು2 ಚಿತ್ರವು ಎಲ್ಲಾ ಸಿನಿ ಪ್ರೇಮಿಗಳ ಗಮನ ಸೆಳೆಯಲು ಸಜ್ಜಾಗಿದ್ದು ಸದ್ಯದಲ್ಲೇ ಚಿತ್ರದ ವಿಶೇಷವಾದ ಅಂಶವೊಂದನ್ನ ಕೊಡಲಿದ್ದು, ಅಂತಹ ವಿಶೇಷ ಏನು ಅನ್ನೋದನ್ನ ನಾವು ಕಾದು ನೋಡೋಣ