Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಫೈರ್ ಫ್ಲೈ` ತಂಡದಿಂದ ಹೊಸ ಸುದ್ದಿ...ಶಿವಣ್ಣನ ಪುತ್ರಿ ಜತೆ ಕೈ ಜೋಡಿಸಿದ ಅಚ್ಯುತ್ ಕುಮಾರ್
Posted date: 08 Mon, Jul 2024 01:36:43 PM
ಫೈರ್ ಫ್ಲೈ ಸಿನಿಮಾ ತಾರಾಬಳಗದ ಮೂಲಕವೇ ಸದ್ದು ಸುದ್ದಿಯಾಗುತ್ತಿದೆ. ಕಳೆದ ವಾರವಷ್ಟೇ ಸುಧಾರಾಣಿ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ   ಹಿರಿಯ ನಟ ಅಚ್ಯುತ್ ಕುಮಾರ್ ಫೈರ್ ಫ್ಲೈನಲ್ಲಿ ಅಭಿನಯಿಸುತ್ತಿರುವ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಅಚ್ಯುತ್ ಕುಮಾರ್ ಇಲ್ಲಿ ನಾಯಕನ ತಂದೆ ಪಾತ್ರ ನಿಭಾಯಿಸಲಿದ್ದಾರೆ. ಅವರಿಗೆ ಜೋಡಿಯಾಗಿ ಸುಧಾರಾಣಿ ಸಾಥ್ ಕೊಡುತ್ತಿದ್ದಾರೆ.‌
 
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅಚ್ಯುತ್ ಕುಮಾರ್, "ನಾನು ಹೀರೋ ತಂದೆಯ ಪಾತ್ರ ಮಾಡುತ್ತಿದ್ದೇನೆ.ಪಾತ್ರ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಒಬ್ಬ ತಂದೆ ಮಗನ ಬಾಂಧವ್ಯ ಮತ್ತು ಅವರಿಬ್ಬರು ಫ್ರೆಂಡ್ಸ್ ಆಗಿದ್ರೆ ಹೇಗೆ ಮಜವಾಗಿರುತ್ತೆ ಅಂತ ಈ ಸಿನೆಮಾದಲ್ಲಿ ನೋಡಬಹುದು. ನನ್ನ ಕೋಸ್ಟಾರ್ ಆಗಿ ಸುಧಾರಾಣಿಯವರು ನಟಿಸುತ್ತಿದ್ದಾರೆ. ಮುಂಚೆ ನಾವು ಬೇರೆ ಸಿನೆಮಾಗಳಲ್ಲಿ ನಮ್ಮ ಜೋಡಿಯನ್ನು ನೋಡಿ ಜನ ಮೆಚ್ಚಿದ್ದರು. ಆದ್ರೆ ಈ ಸಿನೆಮಾದಲ್ಲಿ ನಮ್ಮಿಬ್ಬರ ಜೋಡಿ ಹಿಂದಿನ ಸಿನೆಮಾಗಳಿಗಿಂತ ವಿಭಿನ್ನವಾಗಿರುತ್ತದೆ. ಅದನ್ನು ನೀವು ಸ್ಕ್ರೀನ್ ಮೇಲೆ ನೋಡಬೇಕು. ಫೈರ್ ಫ್ಲೈ ತುಂಬಾ ಕಲರ್ ಫುಲ್ ಆಗಿ ಮೂಡಿ ಬಂದಿದೆ ಮತ್ತು ತುಂಬಾ ಮನರಂಜನೆಯಿಂದ ಕೂಡಿದೆ. ನೀವುಗಳು ಮಿಸ್ ಮಾಡದೆ ದೀಪಾವಳಿಗೆ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ.
ನಮ್ಮ ಶಿವಣ್ಣನ ಮಗಳು ನಿವೇದಿತಾ ಸಿನೆಮಾ ಮಾಡುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ಶ್ರೀಮುತ್ತು ಸಿನಿ ಸರ್ವಿಸ್ ನಡಿ ತುಂಬಾ ಪ್ರೊಪೆಷನಲ್ ಆಗಿ ಮುನ್ನೆಡೆಯುತ್ತಿರುವುದು ನೋಡಿದ್ರೆ ಇಂತಹದೊಂದು ನಿರ್ಮಾಣ ಸಂಸ್ಥೆ  ಮತ್ತು ನಿರ್ಮಾಪಕಿ ನಮ್ಮ ಚಿತ್ರರಂಗಕ್ಕೆ ಬೇಕಿತ್ತು ಮತ್ತು ಹೊಸಬರಿಗೆ ಅವಕಾಶ ಕೊಡುತ್ತಿರುವುದರಿಂದ ಹೊಸ ತಲೆಮಾರಿನ ಫಿಲ್ಮಂಮೇಕರ್ ಗೆ ಅನುಕೂಲವಾಗುತ್ತದೆ. ಇವರು ಆಯ್ಕೆ ಮಾಡಿಕೊಂಡಿರುವ ಕಥೆ  ಕುಟುಂಬ ಕೂತು ನೋಡಬಹುದು. ಮತ್ತೆ ಮತ್ತೆ ಈ ತರ ಹೊಸಬರಿಗೆ ಅವಕಾಶ ಕೊಟ್ಟಿ ನಮ್ಮ ಇಂಡಸ್ಟ್ರೀ ಮುಂದಿನ ಹೆಜ್ಜೆಗಳಿಗೆ ಇವರ ನಿರ್ಮಾಣ ಸಂಸ್ಥೆ ಮೆಟ್ಟಿಲುಗಳಾಗಲಿ ಎಂದು ಆಶಿಸುತ್ತೇನೆ" ಎಂದಿದ್ದಾರೆ.
 
`ಫೈರ್ ಫ್ಲೈ` ಸಿನಿಮಾದಲ್ಲಿ ವಂಶಿ ಅವರು ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. `ಹ್ಯಾಟ್ರಿಕ್​ ಹೀರೋ` ಶಿವರಾಜ್​ಕುಮಾರ್​ ಅವರ ಪುತ್ರಿ ನಿವೇದಿತಾ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ಹೀರೋ ಆಗಿ ಪ್ರೇಕ್ಷಕರರ ಮುಂದೆ ಬರಲಿದ್ದಾರೆ.
 
`ಫೈರ್ ಫ್ಲೈ` ಸಿನಿಮಾಗೆ  ಪಾತ್ರವರ್ಗದ ಮೂಲಕ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ನಟಿ ಶೀತಲ್ ಶೆಟ್ಟಿ, ನಟ ಮೂಗು ಸುರೇಶ್ , ಸುಧಾರಾಣಿ ಈ ಸಿನಿಮಾಗೆ ಸೇರ್ಪಡೆ ಆಗಿದ್ದರು. ಈಗ ಸುಧಾರಾಣಿ ಅಚ್ಯುತ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಜಯ್ ರಾಮ್ ಅವರು ಸಹ-ನಿರ್ದೇಶಕನ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಸಿನಿಮಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಫೈರ್ ಫ್ಲೈ ಸಿನಿಮಾ ಥಿಯೇಟರ್ ಬೆಳಗಲಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಫೈರ್ ಫ್ಲೈ` ತಂಡದಿಂದ ಹೊಸ ಸುದ್ದಿ...ಶಿವಣ್ಣನ ಪುತ್ರಿ ಜತೆ ಕೈ ಜೋಡಿಸಿದ ಅಚ್ಯುತ್ ಕುಮಾರ್ - Chitratara.com
Copyright 2009 chitratara.com Reproduction is forbidden unless authorized. All rights reserved.