Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೈಸೂರಿನಲ್ಲಿ 100 ವರ್ಷಗಳ ಹಳೆಯ ಮನೆಯಲ್ಲಿ ಆರ್ ಚಂದ್ರು `ಫಾದರ್` ಸಿನಿಮಾ ಶೂಟಿಂಗ್
Posted date: 10 Wed, Jul 2024 09:32:58 AM
ಆರ್. ಚಂದ್ರು ಒಡೆತನದ ಆರ್.ಸಿ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ `ಫಾದರ್` ಚಿತ್ರದ ಶೂಟಿಂಗ್ ಅರಮನೆ ನಗರ ಮೈಸೂರಿನಲ್ಲಿ ಭರದಿಂದ ಸಾಗಿದೆ. ಕಳೆದ 10 ದಿನಗಳಿಂದ ಮೈಸೂರಿನ 100 ವರ್ಷಗಳ ಹಳೆಯ ಮನೆಯಲ್ಲಿ ಮುಖ್ಯವಾದ ಕಥಾವಸ್ತುವನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮಾದ್ಯಮ ಮಿತ್ರರು ಸೆಟ್ ಗೆ ಭೇಟಿ ನೀಡಿದಾಗ ಬ್ರೇಕ್ ತೆಗೆದುಕೊಂಡ ಚಿತ್ರತಂಡ ಪ್ರೆಸ್ ಮಿಟ್ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಬಹು ಭಾಷಾ ನಟ ಪ್ರಕಾಶ್ ರಾಜ್  ಮೈಸೂರು ನೋಡಲು ತುಂಬಾ ಇಷ್ಟ. ಚಂದ್ರು ಜೊತೆ ಈ ಮೊದಲೊಂದು ಸಿನಿಮಾ ಮಾಡಬೇಕಿತ್ತು ಆಗಲಿಲ್ಲ. ಇದರಲ್ಲಿ ಹಾರ್ಟ್ ಗೆ ಟಚ್ಚಿಂಗ್ ಆದ ಕಥೆ ಇದೆ. ತಂದೆ-ಮಗನ ಪ್ರೀತಿಗಿಂತ ಇವತ್ತಿನ ತಂದೆ ಮಕ್ಕಳ ಸಂಬಂಧದ ಬಗ್ಗೆ ಹೇಳಲಾಗಿದೆ. ಇದು ಒಳ್ಳೆ ಅಭಿರುಚಿ ಇರುವ ಚಿತ್ರ ಆಗುತ್ತದೆ. ಕಥೆ ಕೇಳಿದಾಗ ನಂಗೆ ಇಂದು ಇದು ಮುಖ್ಯವಾಗಿ ಬೇಕಾದ ಸಿನಿಮಾ ಎನಿಸಿತು. ನಾನು ಒಬ್ಬ ನಿರ್ಮಾಪಕನಾಗಿಯೂ ಚಂದ್ರು ಅವರ 5 ಸಿನಿಮಾ ನಿರ್ಮಾಣದ ಐಡಿಯಾ ಒಳ್ಳೆಯದು ಅನಿಸಿತು. ಇದು ನಂಗೆ ಒಳ್ಳೆಯ ಅನುಭವ. ಅದರಲ್ಲೂ ಮೈಸೂರಿನಲ್ಲಿ ಶೂಟಿಂಗ್ ಇರೋದು ತುಂಬಾ ಸಹಕಾರ ಆಗಿದೆ. ಕಾಡುವಂತ ಸಿನಿಮಾ ಇದು ಎನ್ನಬಹುದು. ಇದರಲ್ಲಿ ತಂದೆಯನ್ನು ಮಗ ಮಗನನ್ನು ತಂದೆ ಅರ್ಥ ಮಾಡಿಕೊಳ್ಳುವ ಕಥೆ ಇದರಲಿದೆ  ಎಂದು ಹೇಳಿದರು.

ನಂತರ ಚಿತ್ರದ ನಿರ್ಮಾಪಕ ಆರ್. ಚಂದ್ರು  ಇದು ಆರ್.ಸಿ ಸ್ಟುಡಿಯೋಸ್ ಬ್ಯಾನರ್ ನಿರ್ಮಾಣದ ಮೊದಲ ಸಿನಿಮಾ. 100 ರೂ ತಗೊಂಡು ಗಾಂಧಿನಗರಕ್ಕೆ ಬಂದು, ಇಂದು 5 ಸಿನಿಮಾ ನಿರ್ಮಾಣ ಮಾಡತಾ ಇದ್ದೇನೆ. ಈ ಮಟ್ಟಕ್ಕೆ ಬೆಳೆಸಿದವರು ಮಾದ್ಯಮದವರು. ಈ ಚಿತ್ರಕ್ಕೆ ಗ್ರಾಂಡ್ ಫಾದರ್ ಪ್ರಕಾಶ್ ರಾಜ್ ಎನ್ನಬಹುದು. ಪ್ರಾರಂಭದಲ್ಲಿ ಕೃಷ್ಣ ಅವರ ಫಾದರ್ ನನಗೆ ಇವನನ್ನು ಹೀರೋ ಮಾಡು ಎಂದು ಪರಿಚಯಿಸಿದರು. ಈಗ ಕೃಷ್ಣ ಸ್ಟಾರ್ ನಟ ಆದಮೇಲೆ ಅವರ ಸಿನಿಮಾ ಮಾಡುತ್ತಿರುವುದು ಖುಷಿ ಇದೆ. ಇದು `ತಾಜಮಹಲ್` ತರಾ ಎಮೋಷನ್ ಇರುವಂತ ಚಿತ್ರ. ಇದರಲ್ಲಿ ತಂದೆ ಮಗನ ಬಾಂದವ್ಯ ತೋರಿಸಲಾಗುತ್ತಿದ್ದು, ಫಾದರ್ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಬಲ್ಲೇ. ಚಿತ್ರವನ್ನು ಒಂದೇ ಹಂತದಲ್ಲಿ ಮೈಸೂರು, ವಾರಣಾಸಿ, ಮಂಗಳೂರಿನಲ್ಲಿ ಶೂಟಿಂಗ್ ಮಾಡಲು ಯೋಜನೆ ಹಾಕಲಾಗಿದೆ  ಎಂದರು. ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ಕಥೆ ಕೇಳಿದಾಗ ತುಂಬಾ ಇಂಟ್ರೇಷ್ಟ್ ಆಗಿದೆ ಎಂದಷ್ಟೇ ಹೇಳಿದ್ದೆ. ಆದರೇ ಮಿಲನಾ ತುಂಬಾ ಇಷ್ಟ ಪಟ್ಟು ಇದನ್ನು ನೀನು ಮಾಡಲೇ ಬೇಕೆಂದು ಹೇಳಿದರು. ಪ್ರಕಾಶ್ ರಾಜ್ ಅವರ ಜೊತೆ ನಟಿಸೂವಾಗ ಮೊದಲು ಭಯ ಆಗುತ್ತಿತ್ತು. `ಫಾದರ್` ತುಂಬಾ ದಿನಗಳವರೇಗೆ ಜನರ ಮನಸಿನಲ್ಲಿ ಉಳಿಯುವಂತ ಚಿತ್ರವಾಗುತ್ತದೆ ಎಂದರು. 

ನಾಯಕಿ ಅಮೃತ ಅಯ್ಯಂಗಾರ್  ನಮ್ಮೂರಲ್ಲಿ ಶೂಟಿಂಗ್ ಆಗತಾ ಇರೋದು ಖುಷಿ. ಈ ಚಿತ್ರದಿಂದ ಪ್ರಕಾಶ್ ರೈ ಜೊತೆ ನಟಿಸುವ ಆಸೆ ಇಡೇರಿದೆ. ಎಲ್ಲ ಮನೆಯ ಮನಗಳಿಗೆ ತಲುಪುವ ಕಥೆ ಇದು  ಎಂದು ಹೇಳಿದರು. ರಾಜ ಮೋಹನ ನಿರ್ದೇಶನದ ಈ ಚಿತ್ರಕ್ಕೆ ಸುಜ್ಞಾನಮೂರ್ತಿ ಛಾಯಾಗ್ರಹಣವಿದೆ. ಅಂದಂಗೆ ಈ ಚಿತ್ರಕ್ಕೆ ನಿರ್ದೇಶಕ ದಯಾಳ್ ಪದ್ಮನಾಭ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಯಿಸುತ್ತಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ದಯಾಳ್  ಪ್ರೀತಿಯಿಂದ ಈ ತಂಡ ಸೇರಿದ್ದೇನೆ. ಚಂದ್ರು ಅವರು 5 ಸಿನಿಮಾ ಬಗ್ಗೆ ಹೇಳಿದಾಗ ತುಂಬಾ ಇಷ್ಟವಾಯ್ತು. ಪ್ರೆಂಡ್ಸಿಪ್ ನಿಂದ ಚಂದ್ರುಗೆ ಜೊತೆ ನಿಂತಿದ್ದೇನೆ.‌ ಫಾದರ್ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ. ಸಿನಿಮಾ ಚನ್ನಾಗಿ ಬರತಾ ಇದೆ  ಎಂದು ಹೇಳಿದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೈಸೂರಿನಲ್ಲಿ 100 ವರ್ಷಗಳ ಹಳೆಯ ಮನೆಯಲ್ಲಿ ಆರ್ ಚಂದ್ರು `ಫಾದರ್` ಸಿನಿಮಾ ಶೂಟಿಂಗ್ - Chitratara.com
Copyright 2009 chitratara.com Reproduction is forbidden unless authorized. All rights reserved.