Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೊದಲ ಪ್ಯಾರಲಲ್‌ ಲೈಫ್ ಚಿತ್ರ``ಹೆಜ್ಜಾರು`` ಇದೇ 19 ರಂದು ರಾಜ್ಯಾದ್ಯಂತ ತೆರೆಗೆ
Posted date: 17 Wed, Jul 2024 10:11:31 PM
ಬೆಳ್ಳಿ ಪರದೆಯ ಮೇಲೆ ವಿಭಿನ್ನ ಶೈಲಿಯ ವಿನೂತನ ಕತೆಯನ್ನು ನೋಡಬಯಸುವವರಿಗಾಗಿ ಒಂದು  ಪ್ರೇಮಕಥೆಯ ಮೂಲಕ ಇದೇ 19ರಂದು  ರಾಜ್ಯದ್ಯಂತ "ಹೆಜ್ಜಾರು" ಚಿತ್ರವನ್ನು ಬಿಡುಗಡೆ ಮಾಡುತಿದ್ದೇವೆ ಎಂದು ಹೇಳಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು. ಹಾಗೆಯೇ ಚಿತ್ರದ ಟ್ರೈಲರ್ ಅನ್ನು ಕೂಡ ಪ್ರದರ್ಶಿಸಲಾಯಿತು. 

 ನಿರ್ದೇಶಕ ಹರ್ಷಪ್ರಿಯ  ಮಾತನಾಡುತ್ತಾ ನಾನು ಮೂಲತಃ ಭದ್ರಾವತಿಯವನು , ನನ್ನ ವೃತ್ತಿ  ಪೈಂಟರ್ ಕೆಲಸ , ನನಗೆ ಸಿನಿಮಾ ಬಗ್ಗೆ ಅಪಾರ ಪ್ರೀತಿ , ಆಸಕ್ತಿ ಇತ್ತು ಆದರೆ ಅವಕಾಶ ಸಿಕ್ಕಿರಲಿಲ್ಲ. ಅದು ಸಿಕ್ಕಿದ್ದು ನಮ್ಮ ನಟ , ನಿರ್ದೇಶಕ ನವೀನ್ ಕೃಷ್ಣ ರ ಧಿಮಾಕು ಚಿತ್ರದ ಮೂಲಕ. ಬರಹಗಾರ ,  ಚಿತ್ರ ಸಾಹಿತಿಯಾಗಿ ನನ್ನ ಕೆಲಸವನ್ನು ಮೆಚ್ಚಿ  ತುಂಬಾ ಸಪೋರ್ಟ್ ಮಾಡಿದರು. ಶ್ರೀನಿವಾಸ್ ಮೂರ್ತಿ ಸರ್ ರಾಜು ಆಗಿದ್ದ ನನಗೆ ಹರ್ಷಪ್ರಿಯ ಎಂದು ಹೆಸರು ಕೊಟ್ಟರು. ನಂತರ ರವಿ ಗರಣಿ ಗುರುಗಳ ಕೃಷ್ಣ ರುಕ್ಮಿಣಿ  ಸೀರಿಯಲ್ ನಲ್ಲಿ ಕೆಲಸ ಮಾಡುತ್ತಾ ರೈಟರ್ , ಡೈರೆಕ್ಟರ್ ಆಗಿ ಮುಂದುವರಿಯುತ್ತಾ ಝೀ ವಾಹಿಯ ಫಿಕ್ಷನ್ ಹೆಡ್ ಆಗಿ ಜವಾಬ್ದಾರಿ ವಹಿಸಿಕೊಂಡೆ. ಅಲ್ಲಿಂದ ನಾನು ಹಿಂತಿರುಗಿ ನೋಡಲೇ ಇಲ್ಲ. ನಾನು ಕೂಡ ಒಂದು ಚಿತ್ರ ನಿರ್ದೇಶನ ಮಾಡಬೇಕೆಂದು ಕತೆಯನ್ನು ಬರೆದು ಒಂದಷ್ಟು ಹಣದೊಂದಿಗೆ ಚಿತ್ರೀಕರಣ ಆರಂಭಿಸಿದೆ, ಆದರೆ ಒಂದಷ್ಟು ಸಮಸ್ಯೆ ಎದುರಾಯಿತು.  ಆಗ ನನಗೆ ಬೆನ್ನೆಲುಬಾಗಿ ನಿಂತಿದ್ದೆ ರಾಮ್ ಜಿ. ನನ್ನ ಅವರ ಒಡನಾಟ ಸೀರಿಯಲ್ ಸಂದರ್ಭದಲ್ಲಿ ಚೆನ್ನಾಗಿತ್ತು. ಒಮ್ಮೆ ಕರೆದು ನನಗೂ ಕಥೆ ಹೇಳಲ್ವಾ ಅಂದಿದ್ರು, ಅವರ ಮನಸ್ಥಿತಿ ನನಗೆ ಅರ್ಥವಾಯಿತು. ಅಲ್ಲಿಂದ ಶುರುವಾದ ಚಿತ್ರ ಇಂದು ಬಿಡುಗಡೆ ಹಂತಕ್ಕೆ ಬಂದಿದೆ. 
 
ಇನ್ನು ಚಿತ್ರದ ವಿಚಾರ  ಹೇಳೋದಾದ್ರೆ  ಕನ್ನಡದ ಮೊಟ್ಟ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಎನ್ನಬಹುದು. 
 
ಒಬ್ಬರ ಜೀವನದಲ್ಲಿ ನಡೆದಿದ್ದು , ಇನ್ನೊಬ್ಬರ ಜೀವನದಲ್ಲಿ ನಡೆಯುವಂತ ಕಥೆ ಇದು. ಇದನ್ನ ಕಾಲ್ಪನಿಕವಾಗಿ ಸೃಷ್ಟಿಸಿ 1965 ರಲ್ಲಿ ನಡೆದ ಘಟನೆಗೂ 1995 ರಲ್ಲಿ ನಡೆಯುವ ಘಟನೆಗೂ ಸಾಮ್ಯತೆ ತೋರುವಂತೆ ಕಥಾಂದರವಿದ್ದು, ಪ್ರೀತಿ , ಎಮೋಷನ್,  ಸಾಂಗ್, ಫೈಟ್ ಎಲ್ಲವೂ ಇದ್ದು ಕಾಮಿಡಿ ಇಲ್ಲದೆ  ಕುತೂಹಲಕಾರಿಯಾಗಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಉಜಿರೆ , ಮಾಡ್ನಿತ್ಯರ್ , ಬೆಳ್ತಂಗಡಿ ಸುತ್ತಮುತ್ತ ಚಿತ್ರೀಕರಣ ಮಾಡಿದ್ದು , ಮಳೆ ಈ ಚಿತ್ರಕ್ಕೆ ಬೇಕಿತ್ತು. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು , ಒಂದು ಹಾಡು 25 ಲಕ್ಷ ಖರ್ಚು ಮಾಡಿ ಅದನ್ನು ಚಿತ್ರದಲ್ಲಿ ತೋರಿಸಿದೆ ಪ್ರಮೋಷನ್ ಗಾಗಿ ಬಳಸಿಕೊಳ್ಳುತ್ತಿದ್ದೇವೆ. ಚಿತ್ರಕ್ಕೆ ಅಗತ್ಯ ಇರುವಷ್ಟು ಮಾತ್ರ ಬಳಸಿಕೊಳ್ಳುವ ನಿರ್ಧಾರ ನನ್ನದು ಹಾಗೂ ನನ್ನ ನಿರ್ಮಾಪಕರದ್ದು, ಇದು ನನ್ನ ಮೊದಲ ಪ್ರಯತ್ನ ಎಲ್ಲರೂ ಚಿತ್ರವನ್ನ ನೋಡಿ ಪ್ರೋತ್ಸಾಹಿಸಿ ಎಂದರು.  
 
ಈ ಚಿತ್ರದ ನಿರ್ಮಾಪಕ ಕೆ . ಎಸ್. ರಾಮ್ ಜಿ ಮಾತನಾಡುತ್ತಾ ನಿರ್ದೇಶಕ ಹರಿಪ್ರಿಯ ಬಹಳ ಬುದ್ಧಿವಂತ, ಶ್ರಮಜೀವಿ , ಯಾರಿಗೂ ಕಿಂಚಿತ್ತು ಮನಸ್ಸು ನೋಯಿಸಿದಂತ ವ್ಯಕ್ತಿ. ಆತನಿಗೆ ಯಶಸ್ಸು ಸಿಗಬೇಕು ಒಳ್ಳೆಯದಾಗಬೇಕೆಂಬ ಉದ್ದೇಶ. ನನ್ನ ಧಾರವಾಹಿಗಳಿಗೆ ಅವರು ಸಾಹಿತ್ಯ ಬರೆದರೆ ಒಂದು ರೀತಿ ಪಾಸಿಟಿವ್. ಅವರು ನನ್ನ ಜೊತೆ ಇರುವುದಷ್ಟೇ ಮುಖ್ಯ. ಅವರ ಚಿತ್ರಕಥೆ ಶೈಲಿ ಇಷ್ಟವಾಯಿತು ಹಾಗಾಗಿ ಒಪ್ಪಿಕೊಂಡೆ. ನಾನೊಬ್ಬ ನಿರ್ದೇಶಕನಾಗಿಯೂ ಕೂಡ ಯಾವುದೇ ವಿಚಾರಕ್ಕೂ ಮಧ್ಯಕ್ಕೆ ಹೋಗದೆ ಸಂಪೂರ್ಣ ಜವಾಬ್ದಾರಿ ಕೊಟ್ಟಿದ್ದೆ. ಚಿತ್ರಕೂಡ ಅಷ್ಟೇ ಉತ್ತಮವಾಗಿ ಮೂಡಿ ಬಂದಿದೆ. ಇಡೀ ತಂಡದ ಶ್ರಮಕ್ಕೆ ಮುಂದೆ ಉತ್ತಮ ಭವಿಷ್ಯವಿದೆ. ಇದೇ 19ರಂದು ಚಿತ್ರಮಂದಿರದಲ್ಲಿ ಎಲ್ಲರೂ ಚಿತ್ರವನ್ನ ನೋಡಿ ಪ್ರೋತ್ಸಾಹಿಸಿ, ನಾನು ಯಾವುದೇ ಸೆಲೆಬ್ರಿಟಿ , ಫ್ರೀ ಶೋ  ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಕಷ್ಟಪಟ್ಟ ಮಾಡಿರುವ ಸಿನಿಮಾಕ್ಕೆ ದುಡ್ಡು ಕೊಟ್ಟು ನೋಡುವುದೇ ಉತ್ತಮ ಎಂದರು. ತಂಡಕ್ಕೆ ಶುಭ ಕೋರುವರು ಬಂದಂತ ರವಿಗರಣಿ ಮಾತನಾಡುತ್ತಾ ನನ್ನೊಟ್ಟಿಗೆ ರಾಮ್ ಜಿ ಹಾಗೂ ಹರ್ಷ ಪ್ರಿಯ ಇಬ್ಬರು ಕೆಲಸ ಮಾಡಿದ್ದಾರೆ. ಈ ನಿರ್ದೇಶಕರು ಬಹಳ ಕಷ್ಟಪಟ್ಟು ಸಾಧನೆ ಮಾಡಿ ಮುಂದೆ ಬಂದಿದ್ದಾರೆ. ಹರ್ಷ ಪ್ರಿಯ ಯುವಕರಿಗೆ ಸ್ಪೂರ್ತಿದಾಯಕ ವ್ಯಕ್ತಿ. ಇದು ಈಗ ಎಕ್ಸಾಮ್ ಟೈಮ್ ಪ್ರೇಕ್ಷಕರು ನೋಡಿ ರಿಸಲ್ಟ್ ಹೇಳಬೇಕು , ತಂಡಕ್ಕೆ ಯಶಸ್ಸು ಸಿಗಲಿ ಎಂದರು.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನವೀನ್ ಕೃಷ್ಣ ಮಾತನಾಡುತ್ತಾ ನಮ್ಮ ಧಿಮಾಕು ಚಿತ್ರದ ಮೂಲಕ ಎಂಟ್ರಿ ಆದ ರಾಜು ಈಗ ಹರ್ಷಪ್ರಿಯ ರಾಗಿ ಚಿತ್ರ ನಿರ್ದೇಶನ ಮಾಡಿದ್ದಾರೆ. ಅವರ ಶ್ರಮಕ್ಕೆ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ.  ನನಗೆ ಸೀರಿಯಲ್ ಹಾಗೂ ಸಿನಿಮಾದಲ್ಲೂ ಅವಕಾಶ ಕೊಟ್ಟಿದ್ದಾರೆ. ನನ್ನದು ಒಂದು ವಿಭಿನ್ನ ಪಾತ್ರ ಖಂಡಿತ ನಿಮ್ಮೆಲ್ಲರಿಗೂ ಈ ಚಿತ್ರ ಇಷ್ಟವಾಗುತ್ತೆ ಚಿತ್ರ ನೋಡಿ ಎಲ್ಲರನ್ನೂ ಹರಸಿ ಎಂದರು. 

ನಾಯಕನಾಗಿ ಭಗತ್ ಅಲ್ವಾ ಮಾತನಾಡುತ್ತಾ ಇವತ್ತು ನನಗೆ ಸೀರಿಯಲ್  ಹಾಗೂ ಸಿನಿಮಾದಲ್ಲಿ ಅವಕಾಶ ಕೊಟ್ಟ ಇಬ್ಬರೂ ಇದ್ದಾರೆ. ನನಗೆ ತುಂಬಾ ಸಂತೋಷದ ದಿನ. ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದೆ. ಇದು ನನ್ನ ಮೊದಲ ನಾಯಕನಾಗಿ ಬೆಳ್ಳಿ ಪರದೆಗೆ ಬರುತ್ತಿರುವಂತಹ ಚಿತ್ರ. ನನ್ನ ಏಳು ವರ್ಷದ ಸಿನಿಮಾ ಜರ್ನಿಯ ಪಯಣ. ಅದರಲ್ಲೂ ನಾಲ್ಕು ವರ್ಷ ಚೆನ್ನೈನಲ್ಲಿ ಕಲಿತಿದ್ದೇನೆ. ನಾನು ಈ ತಂಡದೊಂದಿಗೆ ಸ್ಕ್ರಿಪ್ಟ್ ಹಂತದಿಂದಲೂ ಕೆಲಸ ಮಾಡಿದ್ದೇನೆ. ಅದು ನನ್ನ ಪಾತ್ರಕ್ಕೂ ಹಾಗೂ ಕಲಿಕೆಗೂ ತುಂಬಾ ಅನುಕೂಲವಾಗಿದೆ. 
 
ನನ್ನನ್ನು ಹರಸಿ , ಬೆಳೆಸಿ ಎಂದರು. ಇನ್ನು ನಾಯಕಿಯಾಗಿ ಅಭಿನಯಿಸಿರುವ ಶ್ವೇತಾ ಲಿಯೋನಿಲ್ಲ ಡಿಸೋಜಾ ಮಾತನಾಡುತ್ತಾ
ನಾನು ಇಲ್ಲಿಯವರೆಗೂ ಈ ರೀತಿಯ ಕಥೆಯನ್ನ ನೋಡಿಲ್ಲ. ನನ್ನದು ಬಹಳ ಇಂಪಾರ್ಟೆಂಟ್ ರೋಲ್. ಚಿತ್ರದಲ್ಲಿ ನನ್ನದು ಕಾಡುವಂತಹ ಪಾತ್ರ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಟಿಕೆಟ್ ಪಡೆದು ನಮ್ಮ ಸಿನಿಮಾವನ್ನು ನೋಡಿ ಎಂದರು. ಉಳಿದಂತೆ ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಬಾಲರಾಜ್, ಮುನಿರಾಜ್, ವಿನೋದ್ ಭಾರತಿ ಸೇರಿ ರಂಗಭೂಮಿ ಕಲಾವಿದರು ಸಿನಿಮಾದಲ್ಲಿದ್ದಾರೆ. ಈ ಚಿತ್ರವನ್ನು ಗಗನ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ವಿಮಲಾ .ಎನ್ ನಿರ್ಮಾಣ ಮಾಡಿದ್ದು, ಸುನಿತಾ ಟಿ. ಆರ್. ಸಹ ನಿರ್ಮಾಪಕರಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದು, ಅಜಿತ್ ದ್ರಾಕುಲ ಸಂಕಲನ, ಅಮರ ಗೌಡ ಛಾಯಾಗ್ರಹಣ, ಗಿರೀಶ್ ಕನಕಪುರ ಎಕ್ಸಿಕ್ಯೂಟಿವ್, ಭಜರಂಗಿ ಮೋಹನ್ ನೃತ್ಯ ನಿರ್ದೇಶನವಿದೆ. ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಫ್ ಸ್ಟೋರಿ ಸಿನಿಮಾ ಇದಾಗಿದ್ದು, ಇದೇ ವಾರ ಬೆಳ್ಳಿ ಪರದೆಯ ಮೇಲೆ ರಾರಾಜಿಸಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೊದಲ ಪ್ಯಾರಲಲ್‌ ಲೈಫ್ ಚಿತ್ರ``ಹೆಜ್ಜಾರು`` ಇದೇ 19 ರಂದು ರಾಜ್ಯಾದ್ಯಂತ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.