ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ರಿಷಿ ಚಿತ್ರರಂಕ್ಕೆ ಪಾದಾರ್ಪಣೆ ಮಾಡಿ ಏಳು ವರ್ಷಗಳಾಗಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ರಿಷಿ ನಾಯಕನಾಗಿ ನಟಿಸಿದ್ದ ಮೊದಲ ಚಿತ್ರ "ಆಪರೇಷನ್ ಅಲಮೇಲಮ್ಮ" ತೆರೆಕಂಡು ಏಳ ವಸಂತಗಳು(2017) ಕಳೆದಿದೆ. ಮೊದಲ ಚಿತ್ರದಲ್ಲೇ ರಿಷಿ ನಾಯಕನಾಗಿ ಕನ್ನಡಿಗರ ಮನ ಗೆದ್ದಿದ್ದರು. ಆನಂತರ ವಾಹಿನಿಯಲ್ಲೂ ಅಧಿಕ ಬಾರಿ ಪ್ರಸಾರಗೊಂಡ ಎಲ್ಲರ ಮನೆ ಹಾಗೂ ಮನ ತಲುಪಿದೆ.
ಅಮರೇಶ್ ಸೂರ್ಯಕಾಂತಿ ಅವರು ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನವಿತ್ತು. ಈ ಚಿತ್ರದ ಹಾಡುಗಳು ಸಹ ಎಲ್ಲರ ಗಮನ ಸೆಳೆದಿತ್ತು. ಅಷ್ಟೇ ಅಲ್ಲದೆ ಜನಪ್ರಿಯ ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡಿದ ಮೊದಲ ಚಿತ್ರ ಕೂಡ "ಆಪರೇಷನ್ ಅಲಮೇಲಮ್ಮ".
ಈ ಚಿತ್ರದಲ್ಲಿ ರಿಷಿ ಅವರಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದರು. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸುಮುಖ ಮುಂತಾದವರು ತಾರಾಬಳಗದಲ್ಲಿದ್ದರು.
ತಮ್ಮ ಮೊದಲ ಚಿತ್ರ ಬಿಡುಗಡೆಯಾಗಿ ಏಳು ವರ್ಷಗಳು ಪೂರೈಸಿರುವ ಈ ಸಮಯದಲ್ಲಿ ನಟ ರಿಷಿ ಕನ್ನಡ ಕಲಾಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.