Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿಜಯ ಕುಮಾರ್ ನಟನೆ ಬಹು ನಿರೀಕ್ಷಿತ ಚಿತ್ರ ``ಭೀಮ``ಚಿತ್ರ ಆಗಸ್ಟ್ 9 ರಂದು ತೆರೆಗೆ ಬರಲು ಸಜ್ಜು
Posted date: 25 Thu, Jul 2024 03:07:03 PM
ಸ್ಯಾಂಡಲ್ ವುಡ್ ಸಲಗ ವಿಜಯ ಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ " ಭೀಮ" ಆಗಸ್ಟ್ 9 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಧೂಳ್ ಎಬ್ಬಿಸಲು ಸಜ್ಜಾಗಿದೆ.
 
ಸಲಗ ಚಿತ್ರದ ಬಳಿಕ ವಿಜಯ ಕುಮಾರ್ ನಟಿಸಿ‌, ನಿರ್ದೇಶಿಸಿರುವ 
" ಭೀಮ"  ಹೀಗಾಗಲೇ ರಾಪ್ ಶೈಲಿಯ ಹಾಡು ಸೇರಿದಂತೆ ನೈಜ ಘಟನೆಗಳ ಚಿತ್ರರೂಪಕ್ಕೆ ತರುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸಿದೆ‌. 

ಡೋಂಟ್ ವರಿ ಬೇಬಿ ಚಿನ್ನಮ್ಮ,  ಬ್ಯಾಡ್ ಬ್ಯಾಯ್ಸ್ , ಬೂಮ್ ಬೂಮ್ ಬೆಂಗಳೂರು, ಸೇರಿದಂತೆ ಚಿತ್ರದ ಪತ್ರಿಯೊಂದು ಹಾಡು ಟಪ್ಪಾನುಗುಚ್ಚಿ ಶೈಲಿಯ ಹಾಡು ಅಭಿಮಾನಿಗಳನ್ನು ಹುಚ್ಚೆದ್ದುಬಕುಣಿಯುವಂತೆ ಮಾಡಿದೆ. ಇದೇ ಖುಷಿಯಲ್ಲಿ ನಟ, ನಿರ್ದೇಶಕ ವಿಜಯ ಕುಮಾರ್ ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರಲು ಮುಂದಾಗಿದ್ದಾರೆ.

ಚರಣ್ ರಾಜ್ ಸಂಗೀತ, ಎಂ.ಸಿ‌ ಬಿಜ್ಜು ರಾಪ್ ಹಾಡು, ಎಲ್ಲಾದಕ್ಕಿಂತ ಮಿಗಿಲಾಗಿ ವಿಜಯ ಕುಮಾರ ಅವರ ರಗಡ್ ಶೈಲಿಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳನ್ನು ಮೋಡಿ ಮೋಡಿದ್ದು ಚಿತ್ರ ಬಿಡುಗಡೆಗೆ ಕನ್ನಡ ಚಿತ್ರರಸಿಕರನ್ನು ತುದಿಗಾಲ‌ ಮೇಲೆ ನಿಲ್ಲಿಸುವಂತೆ ಮಾಡಿದೆ.

ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಹಾಡುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು .ಈ ವೇಳೆ ಮಾತಿಗಿಳಿದ ನಟ ವಿಜಯ ಕುಮಾರ್ ,  ಆಗಸ್ಡ್ ಮೊದಲ ವಾರ  ಬಿಡುಗಡೆ ಆಗಲಿದೆ ಎಂದು
 
ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಚಿತ್ರಕ್ಕೆ ಬಂಡವಾಳ ಹಾಕಿದ್ದು 
 ,2021 ರಲ್ಲಿ ಸಲಗ ವಿತರಣೆ ಮಾಡುವ ಜವಾಬ್ದಾರಿ ಕೊರೋನಾ ಸಮಯದಲ್ಲಿ ಇದ್ದ ಪರಿಸ್ಥಿತಿ ಈಗ ಬಂದಿದೆ.  ಸ್ಟಾರ್ ಗಳು ವರ್ಷಕ್ಕೆ ಎರಡು ಚಿತ್ರ ಮಾಡಿ ಎಂದರು
 
ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ ಕಲಿಯಲು ಸಿಕ್ಕಿತು. 6 ಹಾಡು 2 ಬಿಟ್ ಇವೆ.  ಸೆನ್ಸಾರ್ ಸಾಮಾಜಿಕ ಜವಾಬ್ದಾರಿ ಸಿನಿಮಾ, ಮನರಂಜನಾ ‌ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ. ಆಲ್ಬಂ ನಲ್ಲಿ ಹಾಡಿರುವ ಎಲ್ಲರಿಗೂ ಧನ್ಯವಾದ ಎಂದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿಜಯ ಕುಮಾರ್ ನಟನೆ ಬಹು ನಿರೀಕ್ಷಿತ ಚಿತ್ರ ``ಭೀಮ``ಚಿತ್ರ ಆಗಸ್ಟ್ 9 ರಂದು ತೆರೆಗೆ ಬರಲು ಸಜ್ಜು - Chitratara.com
Copyright 2009 chitratara.com Reproduction is forbidden unless authorized. All rights reserved.