Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಕೆಂಡ`ದಂಥಾ ಬದುಕಿನ ಹಿಂದೆ-ಮುಂದೆ.....ರೇಟಿಂಗ್: 3/5 ***
Posted date: 27 Sat, Jul 2024 10:55:34 AM
ಛಾಯಾಗ್ರಹಣ, ನಿರ್ದೇಶನ :   ಸಹದೇವ ಕೆಲವಡಿ,
ನಿರ್ಮಾಪಕಿ :   ರೂಪಾ ರಾವ್,
ಸಂಗೀತ :    ರುತ್ವಿಕ್ ಕಾಯ್ಕಿಣಿ
ತಾರಾಗಣ :  ಬಿ.ವಿ.ಭರತ್, ಗೋಪಾಲಕೃಷ್ಣ ದೇಶಪಾಂಡೆ,
ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಸಚಿನ್ ಶ್ರೀನಾಥ್, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ, ರೇಖಾ ಕೂಡ್ಲಿಗಿ ಇತರರು...

ಮಾಧ್ಯಮ, ರಾಜಕೀಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಇಟ್ಟುಕೊಂಡು ಒಂದು ಕಾಲ್ಪನಿಕ ಕಥೆಯನ್ನು ನಿರ್ದೇಶಕಿ ರೂಪಾರಾವ್ ಅವರು ಚಲನಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ‌ ಮುಂದೆ ತಂದಿದ್ದಾರೆ.‌ ಈವಾರ ತೆರೆ ಕಂಡಿರುವ ಆ ಚಿತ್ರದ ಹೆಸರು  ಕೆಂಡ.  ಇದರಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ನೈಜ ಘಟನೆಗಳನ್ನು ಕುತೂಹಲಕಾರಿಯಾಗಿ ನಿರೂಪಿಸುವ 
 ಪ್ರಯತ್ನ ಮಾಡಲಾಗಿದೆ. 
 
ಕೆಂಡ ಕಥೆಯ ಬಗ್ಗೆ ಹೇಳೋದಾದರೆ, ಸ್ಟೀಲ್‍ ಫ್ಯಾಕ್ಟರಿಯೊಂದರಲ್ಲಿ ಕಾಸ್ಟಿಂಗ್‍ ಕೆಲಸ ಮಾಡುತ್ತಿದ್ದ ಕೇಶವ(ಬಿ.ವಿ. ಭರತ್) ಒಬ್ಬ ಸಾಮಾನ್ಯ ಬಡ ಕಾರ್ಮಿಕ. ತಾನು ಮಾಡುತ್ತಿರುವ ಅದೇ ಕಬ್ಬಿಣದ  ಕೆಲಸ, ಹಣಕ್ಕಾಗಿ ಪ್ರತಿದಿನ‌ ನಡೆಯೋ ಪರದಾಟ ಇದೆಲ್ಲದರಿಂದ  ಬೇಸತ್ತಿದ್ದ ಕೇಶವನಿಗೆ ಗೆಳೆಯ ವಿನಯ್ ಮೂಲಕ `ಮರುಧ್ವನಿ` ಪತ್ರಿಕೆಯ ಸಂಪಾದಕ ನರಸಿಂಹ ಶಾಸ್ತ್ರಿಯ (ವಿನೋದ್ ರವೀಂದ್ರನ್) ಪರಿಚಯವಾಗುತ್ತದೆ. ಆತ ತನ್ನ  ಯುವಪಡೆಯ ಜೊತೆಗೆ ಈ ಕೇಶವನನ್ನೂ  ಸೇರಿಸಿಕೊಳ್ಳುತ್ತಾರೆ. ಇವರ ಕೆಲಸ ದೊಡ್ಡದೇನಲ್ಲ,  ಕಲ್ಲು ಹೊಡೆಯುವುದು, ಗಲಾಟೆ ಮಾಡಿಸುವುದು, ಸಮಾಜದಲ್ಲಿ ಅರಾಜಕತೆ ಸೃಷ್ಠಿಸಿ, ಸ್ವಾಸ್ಥ್ಯ ಹದಗೆಡಿಸುವುದೇ ಆಗಿರುತ್ತದೆ. ನಂತರದಲ್ಲಿ  ಕೇಶವನಿಗೆ ತಾನು ಮಾಡ್ತಿರುವ  ತಪ್ಪು ಏನು, ತನ್ನಿಂದೇನಾಗುತ್ತಿದೆ ಎಂಬುದರ ಅರಿವಾಗುತ್ತದೆ. ಆ ನಂತರ ಆತ ಮುಂದೆ  ಇಡುವ  ಹೆಜ್ಜೆ ಯಾವುದು ಎನ್ನುವುದೇ ಕೆಂಡ ಚಿತ್ರದ ಕಾನ್ಸೆಪ್ಟ್. 
 
ಮಧ್ಯಮ ವರ್ಗದವರ ಬದುಕು-ಬವಣೆ ,  ಸಣ್ಣಪುಟ್ಟ ರೌಡಿಗಳ ಅಟ್ಟಹಾಸ, ಬುದ್ಧಿಜೀವಿಗಳ ಕೂಗು, ಮೀಡಿಯಾದಲ್ಲೂ ಇರುವ ರಾಜಕೀಯ,  ರೈತರ ನೋವು ಅವರ ತಳಮಳ  ಹೀಗೆ ಹತ್ತು ಹಲವು ವಿಚಾರಗಳನ್ನು ಕೆಂಡ ಚಿತ್ರವು  ತನ್ನ ಸೆರಗಲ್ಲಿ ಹೊತ್ತು ತಂದಿದೆ.  ನರಸಿಂಹ ಶಾಸ್ತ್ರಿಯ ಜೊತೆಗಿರುವ ಶಂಕರ್ (ಗೋಪಾಲಕೃಷ್ಣ ದೇಶಪಾಂಡೆ) ಮತ್ತು ಸಹಚರರ  ಕಾರ್ಯವೈಖರಿ  ಸರಿ, ತಪ್ಪುಗಳ ನಡುವೆ ಯಾತಕ್ಕಾಗಿ ಈ ಹೋರಾಟ , ಬದುಕು, ಅಗತ್ಯತೆ , ವಿಚಾರ, ಅಸ್ತಿತ್ವ, ಪರಿಸ್ಥಿತಿಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಕೇಶವನ ರೋಚಕ ಬದುಕಿನ ಪಯಣದ ಹಾದಿ ಜೀವನದ  ಕಟು ಸತ್ಯಗಳ  ದರ್ಶನ ಮಾಡಿಸುತ್ತದೆ. 

ಸಮಾಜದಲ್ಲಿ  ನಡೆಯುವ ಒಂದಷ್ಟು ರೋಚಕ ಘಟನೆಗಳ ಸುತ್ತ ಇಟ್ಟುಕೊಂಡು, ಸಮಾಜದ ಹಲವಾರು ಮುಖಗಳನ್ನು 
ಪರಿಚಯಿಸುತ್ತದೆ. ದಿಕ್ಕು ತಪ್ಪಿಸುತ್ತಿರುವವರ ನಡುವೆ ಜೀವನ ಎಷ್ಟು ಗೊಂದಲಮಯವಾಗಿರುತ್ತದೆ  ಎಂಬುದನ್ನ  ಸೂಕ್ಷ್ಮವಾಗಿ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕ ಸಹದೇವ  ಕೆಲವಡಿ.  ಜಾಗೃತಿ ಮೂಡಿಸುವಂಥ  ಚಿತ್ರವನ್ನ ನಿರ್ಮಿಸಿರುವ ನಿರ್ಮಾಪಕರ ಆಲೋಚನೆ ಮೆಚ್ಚುವಂಥದ್ದು, ಗಂಭೀರವಾಗಿ ಸಾಗೋ ಕಥೆಯಲ್ಕಿ ಸಂಗೀತ ಜೀವಕಳೆ ನೀಡಿದ್ದು , ಛಾಯಾಗ್ರಾಹಕರ ಕೆಲಸಸಹ  ಗಮನ ಸೆಳೆಯುತ್ತದೆ. ಕೇಶವನ ಪಾತ್ರದಲ್ಲಿ  ಬಿ.ವಿ. ಭರತ್ ನೈಜತೆಗೆ  ಒತ್ತು ಕೊಟ್ಟು  ಪಾತ್ರನಿರ್ವಹಣೆ ಮಾಡಿದ್ದಾರೆ. 
ಸಂಪಾದಕನ ಪಾತ್ರಕ್ಕೆ  ವಿನೋದ್ ರವೀಂದ್ರನ್ ಜೀವ ತುಂಬಿ ಅಭಿನಯಿಸಿದ್ದಾರೆ. ಎಂದಿನಂತೆ ನಟ ಗೋಪಾಲಕೃಷ್ಣ ದೇಶಪಾಂಡೆ ತಮ್ಮ  ಸಹಜಾಭಿನಯದ‌ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಉಳಿದ  ಎಲ್ಲಾ  ಕಲಾವಿದರುಗಳ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಸಿದ್ಧ ಸೂತ್ರಗಳನ್ನ ಬಿಟ್ಟು ಪ್ರಸ್ತುತ ಸಮಾಜಕ್ಕೆ ಕನ್ನಡಿ ಎಂಬಂತೆ ಈ ಚಿತ್ರ ಮೂಡಿ ಬಂದಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕೆಂಡ`ದಂಥಾ ಬದುಕಿನ ಹಿಂದೆ-ಮುಂದೆ.....ರೇಟಿಂಗ್: 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.