Chief Editor
Manohar. R (Manu)
Photo Journalist
chitrataramanu@gmail.com
+91 9845549026
ದಾಖಲೆ ಮೊತ್ತಕ್ಕೆ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ `ಫೈರ್ ಫ್ಲೈ` ಆಡಿಯೋ ಹಕ್ಕು ಆನಂದ್ ಆಡಿಯೋ ಸಂಸ್ಥೆ ಬಿಕರಿ..
Posted date: 28 Sun, Jul 2024 04:59:24 PM
`ಫೈರ್ ಫ್ಲೈ` ಮ್ಯೂಸಿಕಲ್ ಪಯಣಕ್ಕೆ ರೆಡಿನಾ..? ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರದ ಆಡಿಯೋ ಹಕ್ಕು
 
ಕನ್ನಡದ ಬಹುನಿರೀಕ್ಷಿತ ಸಿನಿಮಾ ಫೈರ್ ಫ್ಲೈ ಬಹಳ ವಿಶೇಷವಾಗಿದೆ. ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಎಂಬ ಕಾರಣದ ಜೊತೆಗೆ ಹೆಸರಾಂತ ತಾರೆಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ  ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನವ ನಾಯಕ ಮತ್ತು ನಿರ್ದೇಶಕ ವಂಶಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಫೈರ್ ಫ್ಲೈ ಸಿನಿಮಾದ ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.
 
ವಂಶಿ ಚೊಚ್ಚಲ ಬಾರಿಗೆ ನಿರ್ದೇಶಿಸಿ ನಟಿಸುತ್ತಿರುವ ಫೈರ್ ಫ್ಲೈ ಸಿನಿಮಾಗೆ ಚರಣ್ ರಾಜ್ ಅದ್ಭುತ ಸಂಗೀತ ಒದಗಿಸಿದ್ದಾರೆ. ಶೀಘ್ರದಲ್ಲಿಯೇ ಚರಣ್ ಟ್ಯೂನ್ ಹಾಕಿರುವ ಹಾಡುಗಳ ಹಬ್ಬ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಶುರುವಾಗಲಿದೆ. ಆನಂದ್ ಆಡಿಯೋ ಸಂಸ್ಥೆ ಒಂದೊಳ್ಳೆ ಮೊತ್ತಕ್ಕೆ ಫೈರ್ ಫ್ಲೈ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. 
 
`ಫೈರ್ ಫ್ಲೈ` ಸಿನಿಮಾದಲ್ಲಿ ವಂಶಿ ಅವರು ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. `ಹ್ಯಾಟ್ರಿಕ್​ ಹೀರೋ` ಶಿವರಾಜ್​ಕುಮಾರ್​ ಅವರ ಪುತ್ರಿ ನಿವೇದಿತಾ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ಹೀರೋ ಆಗಿ ಪ್ರೇಕ್ಷಕರರ ಮುಂದೆ ಬರಲಿದ್ದಾರೆ.

ಈ ಚಿತ್ರಕ್ಕೆ ಜಯ್ ರಾಮ್ ಅವರು ಸಹ-ನಿರ್ದೇಶಕನ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಸಿನಿಮಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಫೈರ್ ಫ್ಲೈ ಸಿನಿಮಾ ಥಿಯೇಟರ್ ಬೆಳಗಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದಾಖಲೆ ಮೊತ್ತಕ್ಕೆ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ `ಫೈರ್ ಫ್ಲೈ` ಆಡಿಯೋ ಹಕ್ಕು ಆನಂದ್ ಆಡಿಯೋ ಸಂಸ್ಥೆ ಬಿಕರಿ.. - Chitratara.com
Copyright 2009 chitratara.com Reproduction is forbidden unless authorized. All rights reserved.