Chief Editor
Manohar. R (Manu)
Photo Journalist
chitrataramanu@gmail.com
+91 9845549026
ರೊಮ್ಯಾಂಟಿಕ್‌ ಕಾಮಿಡಿ ದಿ ರಾಜಾಸಾಬ್ ಚಿತ್ರದ ಝಲಕ್‌ ಮೂಲಕ ಆಗಮಿಸಿದ ಪ್ರಭಾಸ್‌
Posted date: 30 Tue, Jul 2024 09:29:42 AM
ಗೆಲುವಿನ ಲಯಕ್ಕೆ ಮರಳಿರುವ ಟಾಲಿವುಡ್‌ ನಟ, ರೆಬೆಲ್‌ ಸ್ಟಾರ್‌ ಪ್ರಭಾಸ್‌, ಇದೀಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಗ್ಲಿಂಪ್ಸ್‌ ಮೂಲಕ ಮತ್ತೆ ಫ್ಯಾನ್ಸ್‌ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಮಾಸ್‌ ಆಕ್ಷನ್‌ ಶೈಲಿಯ ಸಲಾರ್‌, ಕಲ್ಕಿ ಎಡಿ 2898 ಚಿತ್ರಗಳ ಯಶಸ್ಸಿನ ಬಳಿಕ ಇದೀಗ ಲವರ್‌ ಬಾಯ್‌ ಅವತಾರದಲ್ಲಿ ಎದುರಾಗಿದ್ದಾರೆ. ಆ ಪ್ಯಾನ್‌ ಇಂಡಿಯಾ ಚಿತ್ರವೇ "ದಿ ರಾಜಾಸಾಬ್". ಸೋಮವಾರ ಈ ಚಿತ್ರದ ಸಣ್ಣ ಝಲಕ್‌ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಕಿರು ಗ್ಲಿಂಪ್ಸ್‌‌ನಲ್ಲಿ ಪ್ರಭಾಸ್‌ ಅವರ ಡ್ಯಾಶಿಂಗ್‌ ಲುಕ್‌ ಎಲ್ಲರ ಗಮನ ಸೆಳೆಯುತ್ತಿದೆ.  

ಗ್ಲಿಂಪ್ಸ್‌ ಜತೆಗೆ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನೂ ಚಿತ್ರತಂಡ ಬಿಟ್ಟುಕೊಟ್ಟಿದೆ. `ರಾಜಾ ಸಾಬ್`2025ರ ಏಪ್ರಿಲ್ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಬರೀ ತೆಲುಗಿನಲ್ಲಷ್ಟೇ ಅಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿಯೂ ರಾಜಾಸಾಬ್‌ ಸಿನಿಮಾ ಬಿಡುಗಡೆ ಆಗಲಿದೆ. ಹಾಗಾದರೆ, ಇದ್ಯಾವ ರೀತಿಯ ಸಿನಿಮಾ? ರೋಮ್ಯಾಂಟಿಕ್ ಹಾರರ್ ಕಾಮಿಡಿಯಲ್ಲಿ ಪ್ರಭಾಸ್‌ ಎಲ್ಲರನ್ನು ಮೋಡಿ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕ ಮಾರುತಿ ಈ ಸಿನಿಮಾ ಮೂಲಕ ಪ್ರಭಾಸ್‌ ಅವರನ್ನು ಇನ್ನಷ್ಟು  ಸ್ಟೈಲಿಶ್ ಲುಕ್‌ನಲ್ಲಿ ತೋರಿಸಲಿದ್ದಾರೆ. 

ಈಗಾಗಲೇ ಶೇ. 40% ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್ 2ರಿಂದ ಮತ್ತೊಂದು ಹಂತದ ಶೂಟಿಂಗ್‌ ಪ್ರಾರಂಭವಾಗಲಿದೆ. ಎಸ್‌ಎಸ್ ಥಮನ್ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ರಾಮ್ ಲಕ್ಷ್ಮಣ್ ಮಾಸ್ಟರ್ಸ್ ಮತ್ತು ಕಿಂಗ್ ಸೊಲೊಮನ್ ಫೈಟ್ ಕೊರಿಯೋಗ್ರಫಿಯನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಭರ್ಜರಿ ಆಕ್ಷನ್‌ ನಿರೀಕ್ಷಿಸಬಹುದಾಗಿದೆ. ಬಾಹುಬಲಿ ಖ್ಯಾತಿಯ ಕಮಲಾ ಕಣ್ಣನ್ ಆರ್.ಸಿ. ವಿಎಫ್‌ಎಕ್ಸ್‌ನ ಉಸ್ತುವಾರಿ ವಹಿಸಿಕೊಂಡಿದ್ದು, ದೊಡ್ಡ ಪರದೆಯ ಮೇಲೆ ದೃಶ್ಯ ಚಮತ್ಕಾರ ನೀಡಲಿದೆ. 

ಮಾರುತಿ ನಿರ್ದೇಶನದ ರಾಜಾ ಸಾಬ್‌ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ. ರಾಜಾ ಸಾಬ್ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. `ಪ್ರತಿ ರೋಜು ಪಂಡಗ`, ತೆಲುಗಿನ ಹಾರರ್ ಕಾಮಿಡಿ `ಪ್ರೇಮ ಕಥಾ ಚಿತ್ರಂ` ಮತ್ತು ರೊಮ್ಯಾಂಟಿಕ್ ಕಾಮಿಡಿ ‘ಮಹಾನುಭಾವುಡು’ ಸೇರಿ ಹಲವು ಸೂಪರ್‌ಹಿಟ್‌ಗಳಿಗೆ ಸಿನಿಮಾ ನಿರ್ದೇಶನ ಮಾಡಿದ ಮಾರುತಿ, ಇದೀಗ ರಾಜಾಸಾಬ್‌ ಮೂಲಕ ರೊಮ್ಯಾಂಟಿಕ್ ಹಾರರ್ ಎಂಟರ್ಟೈನರ್ ಜತೆ ಆಗಮಿಸುತ್ತಿದ್ದಾರೆ. 

`ಕಾರ್ತಿಕೇಯ 2` ಮತ್ತು`ಧಮಾಕಾ` ಸೇರಿ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ ತೆಲುಗು ಚಿತ್ರೋದ್ಯಮದಲ್ಲಿ ಪ್ರಮುಖ ಹೆಸರು. ಇದೀಗ ಬಹುಕೋಟಿ ವೆಚ್ಚದಲ್ಲಿ ರಾಜಾ ಸಾಬ್ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಅದ್ಧೂರಿಯಾಗಿ, ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಕೋಟಗಿರಿ ವೆಂಕಟೇಶ್ವರ ರಾವ್ ಈ ಚಿತ್ರಕ್ಕೆ ಸಂಕಲನ ಮಾಡಿದರೆ, ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಂಗೀತವನ್ನು ಎಸ್‌ಎಸ್‌ ಥಮನ್ ಮಾಡಿದರೆ, ರಾಮ್ ಲಕ್ಷ್ಮಣ್ ಮತ್ತು ಕಿಂಗ್ ಸೊಲೊಮನ್ ಸವರ ಸಾಹಸ ಈ ಚಿತ್ರಕ್ಕಿರಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರೊಮ್ಯಾಂಟಿಕ್‌ ಕಾಮಿಡಿ ದಿ ರಾಜಾಸಾಬ್ ಚಿತ್ರದ ಝಲಕ್‌ ಮೂಲಕ ಆಗಮಿಸಿದ ಪ್ರಭಾಸ್‌ - Chitratara.com
Copyright 2009 chitratara.com Reproduction is forbidden unless authorized. All rights reserved.