Chief Editor
Manohar. R (Manu)
Photo Journalist
chitrataramanu@gmail.com
+91 9845549026
ವ್ಯವಸಾಯದ ಸಮಸ್ಯೆ ಸಾರುವ ಕಬಂಧ
Posted date: 31 Wed, Jul 2024 07:20:05 PM

ಕುಂಜಾರ ಫಿಲಂಸ್ ಲಾಂಛನದಲ್ಲಿ ಸಿದ್ದಗೊಂಡಿರುವ ಕಬಂಧ ಚಿತ್ರದ ಗೆಳೆತನ ಕುರಿತಾದ ಲಿರಿಕಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕೆ.ಕಲ್ಯಾಣ್ ಸಾಹಿತ್ಯ, ಸಾನಿತೇಜ್ ಸಂಗೀತದಲ್ಲಿ ವಾಸುಕಿವೈಭವ್ ಧ್ವನಿಯಾಗಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸತ್ಯನಾಥ್ ಮಾತನಾಡಿ  ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ ರಾಜ್ಯಾದ್ಯಂತ ಭಯ ಹುಟ್ಟಿಸಿತ್ತು. ಇದನ್ನೆ ಬಳಸಿಕೊಂಡು ಒಂದಷ್ಟು ಹಾರರ್ ರೂಪಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಅದರಲ್ಲೂ ವ್ಯವಸಾಯದ ಸಮಸ್ಯೆ ನಮಗೆ ಗೊತ್ತಿಲ್ಲದೆ ತುಂಬಾ ವರ್ಷದಿಂದ ಕಾಡ್ತಾ ಇದೆ. ಅದು ನಮ್ಮನೆವರೆಗೂ, ನಮ್ಮೋಳಗೂ ಹಾಗೂ ದೇಹಕ್ಕೂ ಬಂದಿದೆ. ಈಗಲೂ ಇದರ ಕಡೆ ಗಮನಹರಿಸದೆ ಹೋದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ. ಇಂತಹುದೆ ವಿಚಾರ, ವಿಷಯಗಳನ್ನು ಹೆಕ್ಕಿಕೊಂಡು ಬೋದನೆ ಮಾಡದೆ, ಮನರಂಜನೆ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಒಂದು ಸನ್ನಿವೇಶದಲ್ಲಿ ಮಗುವೊಂದು ನಂಗಾಗಿದ್ದೆ ನಿಂಗಾಗುತ್ತೆ ಎಂಬ ಡೈಲಾಗ್ ಕಥೆಗೆ ಪೂರಕವಾಗಿದೆ. ಅದು ಏನೆಂಬುದನ್ನು ಚಿತ್ರಮಂದಿರಕ್ಕೆ ಬಂದರೆ ತಿಳಿಯುತ್ತದೆ ಎಂದರು.

ನಾಯಕನಾಗಿ ಪ್ರಸಾದ್‌ವಶಿಷ. ನಾಯಕಿಯಾಗಿ ಪ್ರಿಯಾಂಕಮಲ್ಲಾಡಿ, ರಿಯಲ್‌ದಲ್ಲಿ ಕೃಷಿಕರಾಗಿರುವ ಕಿಶೋರ್‌ಕುಮಾರ್ ರೀಲ್‌ದಲ್ಲಿ ಅದೇ ಪಾತ್ರವನ್ನು ನಿರ್ವಹಿಸಿರುವುದಾಗಿ ಹೇಳಿಕೊಂಡರು. ಉಳಿದಂತೆ ಅವಿನಾಶ್, ನಿರ್ದೇಶಕ ಯೋಗರಾಜಭಟ್, ವಂದನ, ವಚನ, ವಿಶಾಲ್, ನಾಗಾರ್ಜುನಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್‌ಸಿದ್ದಿ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ವಿಷ್ಣುಪ್ರಸಾದ್, ಸಂಕಲನ ಸತ್ಯಜಿತ್‌ಸಿದ್ದಕಾಂತ್ ಅವರದಾಗಿದೆ. ದಾವಣಗೆರೆ, ತುಮಕೂರು ಮುಂತಾದ ಕಡೆಗಳಲ್ಲಿ ೪೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿ, ಶೇಕಡ ೮೦ರಷ್ಟು ರಾತ್ರಿ ವೇಳೆ ಸೆರೆ ಹಿಡಿದಿರುವುದು ವಿಶೇಷ. ಶುಕ್ರ ಫಿಲಿಂಸ್‌ನ ಸೋಮಣ್ಣ ಮುಖಾಂತರ ಸಿನಿಮಾವು ಸದ್ಯದಲ್ಲೆ ತೆರೆಗೆ ಬರುವ ಸಾಧ್ಯತೆ ಇದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ವ್ಯವಸಾಯದ ಸಮಸ್ಯೆ ಸಾರುವ ಕಬಂಧ - Chitratara.com
Copyright 2009 chitratara.com Reproduction is forbidden unless authorized. All rights reserved.