ಚಿತ್ರ: ಲಾಫಿಂಗ್ ಬುದ್ದ
ನಿರ್ದೇಶನ; ಭರತ್ ರಾಜ್
ನಿರ್ಮಾಣ: ರಿಷಬ್ ಶೆಟ್ಟಿ
ತಾರಾಗಣ: ಪ್ರಮೋದ್ ಶೆಟ್ಟಿ, ತೇಜು ಬೆಳವಾಡಿ, ದಿಗಂತ್,ಸುಂದರ್ ರಾಜ್, ಎಸ್.ಕೆ ಉಮೇಶ್ ಮತ್ತಿತರರು
ರೇಟಿಂಗ್ : * 3 / 5 - ***
ಪೊಲೀಸ್ ಠಾಣೆಯ ಕೆಲಸ ಒತ್ತಡದ, ತೂಕ ಇಳಿಸಿಕೊಳ್ಳಲು ಪರದಾಟ, ವರ್ಗಾವಣೆಯ ಬಯಕೆ, ಶಾಕಸರ ಆಸೆ, ಲೋಲುಪತನ, ರೈಸ್ ಪುಲ್ಲಿಂಗ್ ದುರಾಸೆ, ಕಳ್ಳತನ, ಪೊಲೀಸ್ ಠಾಣೆಯಲ್ಲಿಯೂ ಜಿಮ್ ಇರಬೇಕು ಎನ್ನುವ ಉಪದೇಶ.
ಇದಿಷ್ಟು ಈ ವಾರ ತೆರೆಗೆ ಬಂದಿರುವ " ಲಾಫಿಂಗ್ ಬುದ್ದ" ಚಿತ್ರದ ತಿರುಳು.
ಪೊಲೀಸರ ಅಧಿಕ ದೇಹದ ಸಮಸ್ಯೆಯನ್ನು ಮುಂದಿಟ್ಟು ಕೊಂಡು ಅದರ ಹಿಂದೆ ಮುಂದೆ ನಿರ್ದೇಶಕ ಭರತ್ ರಾಜ್ ಗಿರಕಿ ಹೊಡೆದಿದ್ದಾರೆ. ಸರಳದ ವಾದ ಕಥೆ,, ಪೊಲೀಸ್ ಠಾಣೆ, ಅಲ್ಲಿನ ಸಿಬ್ಬಂದಿಯ ಅಧಿಕತೂಕದ ಸಮಸ್ಯೆ, ಹಿರಿಯ ಅಧಿಕಾರಿಯ ಆದೇಶದಿಂದ ತೂಕ ಕಡಿಮೆ ಮಾಡಿಕೊಳ್ಳೋದು ಇಲ್ಲ ಕೆಲಸ ಕೆಳೆದುಕೊಳ್ಳುವ ಒತ್ತಡಕ್ಕೆ ಸಿಲುಕಿದ ಪೇದೆಗಳ ಕಥೆ ವ್ಯಥೆ ಇದು.
ಶಿವಮೊಗ್ಗ ಜಿಲ್ಲೆಯ ನಿರೂರು ಪೊಲೀಸ್ ಠಾಣೆಯಲ್ಲಿನ ಕಾನ್ಸ್‌ಟೇಬಲ್ ಗೋವರ್ದನ್ ( ಪ್ರಮೋದ್ ಶೆಟ್ಟಿ) ತಿಂಡಿ ಪೋತ. ಸಿಕ್ಕ ಸಿಕ್ಕಿದ್ದು ತಿಂದು ಧಡೂತಿ ದೇಹ ಬೆಳೆಸಿಕೊಂಡವ. ಠಾಣೆಯಲ್ಲಿ ಎಂತಹ ಜಠಿಲ ಸಮಸ್ಯೆ ಇದ್ದರೂ ನಗುತ್ತಾ ಅದನ್ನು ಬಗೆಹರಿಸಿದಾತ ( ಒಂದೇ ಬಾರಿ ,ಕೊನೆಗೊಮ್ಮೆ) .ಕೆಲಸದ ಒತ್ತದಡಲ್ಲಿ ಮನೆಯಲ್ಲಿಯದ್ದರೂ ಹೆಂಡತಿ ಸತ್ಯವತಿ ( ತೇಜು ಬೆಳವಾಡಿ) ಮಗಳ ಕಡೆಗೆ ಸಮಯ ಕೊಡದಷ್ಟು ಒತ್ತಡ.
ಕೆಲಸದ ಒತ್ತಡದ ಪರಿಸ್ಥಿತಿಯಿಂದ ಪಾರಾಗಲು ಠಾಣೆಯ ಎಲ್ಲಾ ಸಿಬ್ಬಂದಿಗಳಿಗೆ "ಆತ್ಮೀಯ ಮಿಲನ" ಸಂತೋಷಕೂಟ ಆಯೋಜಿಸುತ್ತಾರೆ.ಅದೇ ಗೋವರ್ದನಗೆ ಸಮಸ್ಯೆ ತಂದೊಡ್ಡುತ್ತದೆ. ಇತ್ತ ಕಾರ್ಯಕ್ರಮದಲ್ಲಿ ತಮ್ಮ ಭಾವಚಿತ್ರ ಸರಿಯಾಗಿ ಹಾಕಿಲ್ಲ ಎನ್ನುವ ಕಾರಣಕ್ಕೆ ಸಿಡಿಮಿಡಿಗೊಳ್ಳುವ ಶಾಸಕ ,ವರ್ಗಾವಣೆ ಬೇಕು ಎಂದರೆ ಹಣ ಹೊಂದಿಸಿಕೋ ಎಂದು ನೇರವಾಗಿಯೇ ಇನ್ಸ್‌ಪೆಕ್ಟರ್ ಗೆ ಹೇಳುತ್ತಾನೆ. ಹೆಂಡತಿಯ ಒತ್ತಡಕ್ಕೆ ಒಳಗಾಗಿ ಆತ ಮಾಡುವ ಕೆಲಸ ಏನು ಅದರಿಂದ ಮುಂದೇನಾಗುತ್ತದೆ.
ರೈಸ್ ಪುಲ್ಲಿಂಗ್, ಅದರಿಂದ ಹಣ ಲಪಟಾಯಿಸುವುದು ಯಾಕೆ. ಈ ನಡುವೆ ನಟ ದಿಗಂತ್ ಯಾಕೆ ಬರ್ತಾರೆ. ಶಾಸಕನ ಆಸೆ, ಲೋಲುಪತನದ ನಡುವೆ ಅಧಿಕ. ತೂಕದ ಸಮಸ್ಯೆಗೆ ಬಳಲುವ ಗೋವರ್ಧನ ತೂಕ ಕಡಿಮೆ ಮಾಡಿಕೊಂಡನಾ ಇಲ್ಲ ಮುಂದೇನಾಗುತ್ತದೆ ಚಿತ್ರದ ತಿರುಳು.
ನಿರ್ದೇಶಕ ಭರತ್ ರಾಜ್ ಸರಳವಾದ ಕಥೆಯನ್ನು ಮುಂದಿಟ್ಟುಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರಕ್ಕೆ ನಟ ,ನಿರ್ಮಾಪಕ ರಿಷಬ್ ಶೆಟ್ಟಿ ನಿರ್ಮಾಣ ಎನ್ನುವುದು ಒಂದು ಬಲ
ನಟ ಪ್ರಮೋದ್ ಶೆಟ್ಟಿ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದಾರೆ. ತೂಕ ಇಳಿಸುವ ಪೇದೆಯ ಪಾತ್ರದಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ತಿಣುಕಾಡಿದ್ದಾರೆ. ಹೆಚ್ಚು ಅರ್ಭಟ, ಅಬ್ಬರ ಇಲ್ಲದೆ ಸೈಲೆಂಟ್ ಆಗಿಯೇ ಪಾತ್ರ ನಿರ್ವಹಿಸಿದ್ದಾರೆ.
ತೇಜು ಬೆಳವಾಡಿ, ಸುಂದರ್ ರಾಜ್, ದಿಗಂತ್ ಮತ್ತಿತರಿದ್ದಾರೆ.
"ಲಾಫಿಂಗ್ ಬುದ್ದ" ಶೀರ್ಷಿಕೆ ಚಿತ್ರಕ್ಕೆ ಅನ್ವರ್ಥರೋ ಅನರ್ಹವೋ ಎನ್ನುವುದನ್ನು ತಿಳಿಯಲು ಚಿತ್ರ ನೋಡಬೇಕು.ವಿಷ್ಣು ವಿಜಯ್ ಸಂಗೀತ, ಚಂದ್ರಶೇಖರನ್ ಛಾಯಾಗ್ರಾಹಣ ಚಿತ್ರಕ್ಕಿದೆ.
ರೇಟಿಂಗ್ : ಕಳೆಪೆ - * / ಅಷ್ಟಕಷ್ಟೆ - * / ಪರವಾಗಿಲ್ಲ - */ ಉತ್ತಮ - ** / ಅತ್ಯುತ್ತಮ - ***