Chief Editor
Manohar. R (Manu)
Photo Journalist
chitrataramanu@gmail.com
+91 9845549026
``1990 s``ಏಕಕಾಲಕ್ಕೆ ಬಿಡುಗಡೆಯಾಯಿತು ನಾಲ್ಕು ಭಾಷೆಗಳ ಟೀಸರ್ .
Posted date: 01 Sun, Sep 2024 06:55:24 PM
ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ - ರಾಣಿ ವರದ್ ಅಭಿನಯದ "1990s" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಲಹರಿ ವೇಲು ಸೇರಿದಂತೆ ಅನೇಕ ಗಣ್ಯರು ನಾಲ್ಕು ಭಾಷೆಗಳ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ಹಿಂದಿ ಟೀಸರ್ ತಾಂತ್ರಿಕ ಕಾರಣದಿಂದ ಇಂದು ಬಿಡುಗಡೆಯಾಗಲಿಲ್ಲ. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
 
ನಾನು ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಿರ್ದೇಶಕನಾಗಿ ಇದು ಚೊಚ್ಚಲ ಚಿತ್ರ. ಈ ಚಿತ್ರ ಆಗಲು ಪ್ರಮುಖ ಕಾರಣ ಚಿತ್ರದ ಛಾಯಾಗ್ರಹಕ ಹಾಲೇಶ್, ಸಂಗೀತ ನಿರ್ದೇಶಕ ಮಹಾರಾಜ, ಸಂಕಲನಕಾರ ಕೃಷ್ಣ ಹಾಗೂ ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್ ಹಾಗೂ ಚಿತ್ರದ ನಾಯಕ ಅರುಣ್. ಇವರೆಲ್ಲರು ನನ್ನ ಜೊತೆಗೆ ಕೈಜೋಡಿಸಿದ್ದು ನಾನು ಈ ಚಿತ್ರ ನಿರ್ದೇಶನ ಮಾಡಲು ಕಾರಣವಾಯಿತು. ಇವರೆಲ್ಲರಿಗೂ ಹಾಗೂ ನಿರ್ಮಾಣ ಸಂಸ್ಥೆ ಮನಸ್ಸು ಮಲ್ಲಿಗೆ ಕಂಬೈನ್ಸ್ ಗೆ ನಾನು ಆಬಾರಿ. ಇನ್ನು "1990s" ತೊಂಭತ್ತರ ದಶಕದಲ್ಲಿ ನಡೆಯುವ ಪ್ರೇಮಕಥೆ. ಅರುಣ್ ಹಾಗೂ ರಾಣಿ ವರದ್ ನಾಯಕ - ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಕಷ್ಟು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಚಿತ್ರದ ಶೀರ್ಷಿಕೆಯನ್ನು "1990s" ಎಂದು ಇಡಲಾಗಿದೆ ಎಂದರು ನಿರ್ದೇಶಕ ನಂದಕುಮಾರ್. 
 
ರಂಗಭೂಮಿ ಕಲಾವಿದನಾಗಿ ಹತ್ತುವರ್ಷಗಳ ಅನುಭವವಿರುವ ನನಗೆ ಹಿರಿತೆರೆತಲ್ಲಿ ಇದು ಮೊದಲ ಚಿತ್ರ. ನಂದಕುಮಾರ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಚಿತ್ರ ಹಿಡಿಸುವ ನಂಬಿಕೆ ಇದೆ‌. ಈ ಚಿತ್ರದಲ್ಲಿ ನನ್ನದು ಮುಗ್ದ ಪ್ರೇಮಿಯ ಪಾತ್ರ ಎಂದು ತಿಳಿಸಿದ ನಾಯಕ ಅರುಣ್,  ನಾನು ಹಿರಿಯ ಸಂಕಲನಕಾರ ಜನಾರ್ದನ್ ಅವರ ಪುತ್ರ ಎಂದರು.

ಛಾಯಾಗ್ರಾಹಕ ಹಾಲೇಶ್, ಸಂಗೀತ ನಿರ್ದೇಶಕ ಮಹಾರಾಜ, ಸಂಕಲಕಾರ ಕೃಷ್ಣ, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್ ಮುಂತಾದ ತಂತ್ರಜ್ಞರು ಹಾಗೂ ಕಲಾವಿದರು "1990s" ಕುರಿತು ಮಾತನಾಡಿದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``1990 s``ಏಕಕಾಲಕ್ಕೆ ಬಿಡುಗಡೆಯಾಯಿತು ನಾಲ್ಕು ಭಾಷೆಗಳ ಟೀಸರ್ . - Chitratara.com
Copyright 2009 chitratara.com Reproduction is forbidden unless authorized. All rights reserved.