ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಬೆಂಕಿ ಎಂದೇ ಖ್ಯಾತರಾದ ನಟಿ ತನಿಶಾ ಕುಪ್ಪಂಡ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ನಟ ಕೋಮಲ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ” ಕೋಣ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ವಿಭಿನ್ನ ಮೇಕಿಂಗ್ ಸೇರಿದಂತೆ ಇನ್ನಿತರೆ ಕಾರಣಗಳಿಂದ ಗಮನ ಸೆಳೆದಿದೆ.
ತನಿಶಾ ಕುಪ್ಪಂಡ ಜೊತೆ ರವಿಕಿರಣ್ ಮತ್ತು ಕಾರ್ತಿಕ್ ಕಿರಣ್ ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. ಈ ಹಿಂದೆ ನವರಸ ನಾಯಕ ಜಗ್ಗೇಶ್ ಅಭಿನಯದ “8 ಎಂಎಂ” ಚಿತ್ರ ನಿರ್ದೇಶನ ಮಾಡಿದ್ದ ಹರಿಕೃಷ್ಣ, ಇದೀಗ ಕೋಣ ನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.
ನಟಿ ತನಿಶಾ ಕುಪ್ಪಂಡ ನಿರ್ಮಾಪಕಿಯಾಗಿ ಬಡ್ತಿ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಹರಸಲು ಬಿಗ್‍ಬಾಸ್ ಸ್ಪರ್ಧಿಗಳಾದ ಸಿರಿ, ಪವಿ ಪೂವಪ್ಪ, ಕಾರುಣ್ಯ ರಾಮ್, ಹಾಸ್ಯ ಕಲಾವಿದರಾದ ಸುಶ್ಮಿತಾ, ಹುಲಿ ಕಾರ್ತಿಕ್ ಸೇರಿದಂತೆ ಅನೇಕರು ಆಗಮಿಸಿ ಸ್ನೇಹಿತೆಯ ಹೊಸ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನಟ ಕೋಮಲ್, ಚಿತ್ರದಲ್ಲಿ ಡಾರ್ಕ್ ಹ್ಯೂಮರ್ ಇದೆ ಅಂತ ಎಲ್ಲರೂ ಹೇಳ್ತಾರೆ. ಆದರೆ ಚಿತ್ರದಲ್ಲಿ ಹಲವು ಸಸ್ಪೆನ್ಸ್ ಇವೆ. ಚಾರ್ಲಿ ಚಾಪ್ಲಿನ್ ಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಜನರಿಗೆ ಹೇಗೆ ಮನರಂಜನೆ ನೀಡುತ್ತಿದ್ದರೋ ಆರೀತಿಯ ಪಾತ್ರ ಚಿತ್ರದಲ್ಲಿದೆ. ಕೋಣ ವಿಭಿನ್ನವಾದ ಕಥೆ ಮತ್ತು ನಿರೂಪಣೆ ಇರುವ ಚಿತ್ರ ಎಂದು ಮಾಹಿತಿ ನೀಡಿದರು.
ಚಿತ್ರದಲ್ಲಿ ಇದುವರೆಗೂ ಮಾಡದ ಪಾತ್ರ ಮಾಡುತ್ತಿದ್ದೇನೆ. ಚಿತ್ರದಲ್ಲಿ ರೋಬೋ ಇಟ್ಟುಕೊಂಡು ಶಾಸ್ತ್ರ ಹೇಳುವ ಪಾತ್ರ. ಈ ಮುಂಚೆ ಶಾಸ್ತ್ರ ಹೇಳುವ ಪಾತ್ರ ಮಾಡಬೇಕಾಗಿತ್ತು. ಅದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಪ್ರಭಾಸ್ ಅವರ ಕಲ್ಕಿ ಚಿತ್ರ ಬಂದಿದ್ದರಿಂದ ಅದನ್ನು ಅಲ್ಲಿಗೆ ಬಿಟ್ಟೆವು. ಈಗ ರೋಬೋ ಮೂಲಕ ಭವಿಷ್ಯ ಹೇಳುವ ಹೊಸತನದ ಪಾತ್ರ ಸಿಕ್ಕದೆ. ಚಿತ್ರೀಕರಣದಲ್ಲಿ ಭಾಗಿಯಾಗಲು ಎದುರು ನೋಡುತ್ತಿದ್ದೇನೆ ಎಂದರು.
ಕೋಣ ಚಿತ್ರದ ಇದುವರೆಗೂ ಬಂದ ಮಾಮೂಲಿ ಚಿತ್ರ ಅನ್ನಿಸಿದರೂ ವಿಭಿನ್ನ ಕತೆ, ಪಾತ್ರ ತಿರುಳು ಇದೆ,.ಗಂಭೀರವಾದ ವಿಷಯವನ್ನು ಕಾಮಿಡಿ ಮೂಲಕ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ನಿರ್ದೇಶಕ ಹರಿಕೃಷ್ಣ ಹೇಳಿದ ಕಥೆ ಇಷ್ಟವಾಯಿತು. ಟೀಸರ್ ಅದ್ಬುತವಾಗಿ ಮೂಡಿ ಬಂದಿದೆ. ನನಗೂ ಒಂದು ರೀತಿ ವಿಭಿನ್ನವಾದ ಪಾತ್ರ ಎಂದು ಹೇಳಿದರು.
ರಿಯಾಲಿಟಿ ಶೋಗಗಳಿಗೆ ಜಡ್ಜ್ ಆಗುವಂತೆ ಸಾಕಷ್ಟು ಅವಕಾಶಗಳು ಬಂದರೂ ಹೋಗಿರಲಿಲ್ಲ.,ಕೊನೆಗೆ ಮಕ್ಕಳು ಒತ್ತಾಯಕ್ಕೆ ಕಟ್ಟುಬಿದ್ದು ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಜಡ್ಜ ಆಗಿದ್ದೆ. ಇದರಿಂದ ಕಲಿಯಲು ಮತ್ತು ನಮ್ಮನ್ನು ನಾವು ಪ್ರಪಂಚದೆದುರು ತೆರೆದುಕೊಳ್ಳಲು ಹಲವು ಅವಕಾಶಗಳಿವೆ. ಅದು ರಿಯಾಲಿಟಿ ಶೋ ಮೂಲಕ ಸಿಕ್ಕಿತು. ಸಾಮಾನ್ಯವಾಗಿ 30 ಎಪಿಸೋಡ್‍ಗೆ ಮುಗಿಯುತ್ತಿದ್ದ ಶೋ 50 ಎಪಿಸೋಡ್ ಆಯಿತು ಅದಕ್ಕೆ ಅದರ ಪಾಪುಲಾರಿಟಿ ಕೂಡ ಎಂದರು.
ನನ್ನ ಚಿತ್ರಗಳು ಮತ್ತು ತಪ್ಪು ಒಪ್ಪುಗಳಿಗೆ ಹೆಂಡತಿ ಮತ್ತು ಮಕ್ಕಳೇ ನನಗೆ ದೊಡ್ಡ ಕ್ರಿಟಿಕ್. ಹೊಸ ಹೊಸ ಬಟ್ಟೆ ಹಾಕುವುದನ್ನು ಕಲಿತಿದ್ದೇ ದೊಡ್ಡ ಮಗಳಿಂದ ಎಂದು ಹೇಳಿದ ಕೋಮಲ್, ಕೋಣ ಚಿತ್ರದ ಟೀಸರ್ ಎರಡು ದಿನ ಮಾಡಲಾಯಿತಾದರೂ ಅದಕ್ಕಾಗಿ 4 ದಿನ ರಿಹರ್ಸಲ್ ಮಾಡಲಾಗಿದೆ. ಒಳ್ಳೆಯ ಚಿತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕ ಹರಿಕೃಷ್ಣ ಮಾತನಾಡಿ, ನಟಿ ತನಿಶಾ ಅವರು ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ, ಕೋಮಲ್ ಅವರಿಗೆ ಕಥೆ ಇಷ್ಟ ಆಯ್ತು ಅವರು ನಟಿಸಲು ಒಪ್ಪಿಕೊಂಡರು. ದೀಪಾವಳಿ ಹಾಜು ಬಾಜಿನಲ್ಲಿ ಮುಹೂರ್ತ ಮಾಡಲಿದ್ದೇವೆ. ಹಳ್ಳಿಯಲ್ಲಿ ಕೋಣದ ಜೊತೆ ನಡೆಯುವ ಕತೆ. ಹೀಗಾಗಿ ಚಿತ್ರಕ್ಕೆ ಕೋಣ ಎಂದು ಹೆಸರಿಟ್ಟಿದ್ದೇವೆ. ನವಂಬರ್ ಡಿಸೆಂಬರ್‍ನಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ. ಒಟ್ಟಾರೆ 60 ದಿನಗಳ ಕಾಲ ಚಿತ್ರೀಕರಣ ಮಾಡುವ ಉದ್ದೇಶವಿದೆ ಎಂದರು.
ತನಿಶಾ ಕುಪ್ಪಂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರದು ಚಿತ್ರದಲ್ಲಿ ಲಕ್ಷ್ಮಿ ಎನ್ನುವ ಪಾತ್ರ. ಅವರ ಜೊತೆ ಮತ್ತೊಂದು ನಾಯಕಿ ಚಿತ್ರದಲ್ಲಿ ಇರಲಿದ್ದಾರೆ. ಉಳಿದ ಕಲಾವಿದರನ್ನು ಹಂತ ಹಂತವಾಗಿ ಪರಿಚಯ ಮಾಡಲಾಗುವುದು ಎಂದ ಅವರು ಕೋಮಲ್ ಅವರನ್ನು ವಿಭಿನ್ನ ಪಾತ್ರದಲ್ಲಿ ತೋರಿಸಲಾಗುತ್ತಿದೆ ಎಂದು ಹೇಳಿದರು.
ಕಥೆ ಮೇಲೆ ಇದ್ದ ಭರವಸೆ ಮೇಲೆ ನಟ ಕೋಮಲ್ ಅವರನ್ನು ಬಹುಭಾಷೆಗೆ ಪರಿಚಯ ಮಾಡುವ ಕೆಲಸ ಮಾಡಲಾಗಿದೆ. ಪ್ಯಾನ್
ಇಂಡಿಯಾ ಸಿನಿಮಾ ಮಾಡೋಣ ಎಂದಾಗ ಅವರು ಖುಷಿ ಆಗಿದ್ದರು. ಭವಿಷ್ಯ ಹೇಳುವ ಪಾತ್ರ ಎನ್ನುವುದು ಮೇಲ್ನೋಟಕ್ಕೆ ಕಂಡು ಬಮದರೂ ಚಿತ್ರದಲ್ಲಿ ಬೇರೆಯದೇ ಟ್ವಿಸ್ಟ್ ಇದೆ ಎಂದು ಕುತೂಹಲ ಹೆಚ್ಚು ಮಾಡಿದರು.
ಚಿತ್ರದ ಕಲಾವಿದರಾದ ನಿರಂಜನ್, ಕರಣ್ ಆರ್ಯನ್ ಮತ್ತಿತರು ಮಾಹಿತಿ ಹಂಚಿಕೊಂಡರು. ಚಿತ್ರಕ್ಕೆ ಗಿರೀಶ್ ಗೌಡ ಕ್ಯಾಮರ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನೀಡುತ್ತಿದ್ದಾರೆ.