Chief Editor
Manohar. R (Manu)
Photo Journalist
chitrataramanu@gmail.com
+91 9845549026
ತನು ಟಾಕೀಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ``ಲಂಗೋಟಿ ಮ್ಯಾನ್`` ಚಿತ್ರಕ್ಕೆ ಸಂಜೋತಾ ಭಂಡಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಇದೇ ಸೆಪ್ಟೆಂಬರ್ 20 ರಂದು ಚಿತ್ರ ತೆರೆಗೆ ಬರಲಿದೆ.
Posted date: 12 Thu, Sep 2024 08:59:45 PM
ಚಿತ್ರದ ಟ್ರೈಲರ್ ಮತ್ತು ಹಾಡಿನ ಪ್ರದರ್ಶನವಿತ್ತು. ಈ ವೇಳೆ ಮಾತಿಗಿಳಿದ ಚಿತ್ರತಂಡ "ಲಂಗೋಟಿ ಮ್ಯಾನ್ " ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. ಲಂಗೋಟಿ ಹಾಕಿಕೊಳ್ಳುವಂತೆ ಮನೆಯಲ್ಲಿ ಒತ್ತಡ ಹೇರಿದ್ದರಿಂದ ಮುಂದೆ ಏನೆಲ್ಲಾ ಸಮಸ್ಯೆ ಎದುರಿಸಬೇಕಾಯಿತು ಎನ್ನುವುದನ್ನು ಹಾಸ್ಯದ ರೂಪದಲ್ಲಿ ತೆರೆಗೆ ಕಟ್ಟಿಕೊಟ್ಟಿದ್ದಾರೆ.

ನಿರ್ದೇಶಕಿ ಸಂಜೋತಾ ಭಂಡಾರಿ ಮಾತನಾಡಿ, ಲಂಗೋಟಿ ಮ್ಯಾನ್ ಚಿತ್ರ ಅನಗತ್ಯ ಕಾರಣಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರ ನೋಡಿ ಆ ಮೇಲೆ ಚಿತ್ರದ ಶೀರ್ಷಿಕೆ  ಇಟ್ಟಿರುವುದು ಗೊತ್ತಾಗಲಿದೆ. ಲಂಗೋಟಿಗೆ ಅಂಡರ್‍ವೇರ್ ವಿಲನ್ .ಯಾವ ಸಮಯದಾಯವನ್ನು ಅವಮಾನ ಮಾಡುವ ಮತ್ತು ನೋಯಿಸುವ ಇದ್ದೇಶ ಹೊಂದಿಲ್ಲ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿಕೊಂಡರು.

ಹಿರಿಯ ಕಲಾವಿದ ಧಮೇಂದ್ರ ಮಾತನಾಡಿ, ಲಂಗೋಟಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ತಾತನಿಗೆ ಸಂಪ್ರದಾಯ ಆಚಾರ ವಿಚಾರ ಪಾಲಿಸಬೇಕು ಎನ್ನುವ ನಂಬಿಕೆ. ಸಂಪ್ರದಾಯ ಹೇರಿಕೆಯಿಂದ ನಾಯಕ ರೆಬೆಲ್ ಆಗ್ತಾನೆ. ಕಥೆ ಆಸಕ್ತಿಕರವಾಗಿದೆ. ಒಳ್ಳೆಯ ಪ್ಯಾಮಿಲಿ ಡ್ರಾಮ, ಜೊತೆಗೆ ಮಾನವೀಯತೆ ಚಿತ್ರದಲ್ಲಿ ಎದ್ದು ಕಾಣಲಿದೆ.ಎಂದರು.

ನಟ ಆಕಾಶ್ ರಾಂಬೋ ಮಾತನಾಡಿ ,ತಾತ ಮೊಮ್ಮಗ ನ ಸುತ್ತ ಮುತ್ತ ನಡೆಯುವ ಕಥೆ ಹಾಸ್ಯದ ರೂಪದಲ್ಲಿ ಚಿತ್ರವನ್ನು ತೆರೆಗೆ ಕಟ್ಟಿಕೊಡಲಾಗಿದೆ ಎಂಂದರು.

ನಾಯಕ ಸಂಹಿತಾ ವಿನ್ಯಾ, ಚಿತ್ರದಲ್ಲಿ ಪೆÇಲೀಸ್ ಅಧಿಕಾರಿಯ ಪಾತ್ರ. ಜೊತೆಗೆ ಇನ್ನೊಂದು ಪ್ರಮುಖ ಪಾತ್ರ ಚಿತ್ರದಲ್ಲಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು. ಚಿತ್ರ ನೋಡದೆ ಯಾರೂ ಕೂಡ ಅನಗತ್ಯವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಚಿತ್ರ ನೋಡಿದ ಮೇಲೆ ಚಿತ್ರಕ್ಕೆ ಶೀರ್ಷಿಕೆ ಯಾಕೆ ಇಟ್ಟಿದ್ದೇವೆ ಎನ್ನುವುದು ತಿಳಿಯಲಿದೆ ಎಂದರು.

ಮತ್ತೊಬ್ಬ ನಟಿ ಸ್ನೇಹ, ಒಳ್ಳೆಯ ಪಾತ್ರ ಸಿಕ್ಕಿದೆ. ನಿರ್ದೇಶಕರು ಕಥೆ ಹೇಳಿದಾಗ ಹೇಗೆ ಸಿನಿಮಾ ಮಾಡ್ತಾರೆ ಅಂದುಕೊಂಡಿದ್ದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಸಹ ಕಲಾವಿದ ಹುಲಿ ಕಾರ್ತಿಕ್ ಮಾತನಾಡಿ, ನೀನೇನು ಪುಟಗೋಸಿ ಮಾಡಿದ್ದೀಯಾ ಅಂತ ಯಾರು ಕೇಳುವ ಹಾಗಿಲ್ಲ. ಲಂಗೋಟಿ ಮ್ಯಾನ್ ಸಿನಿಮಾ ಮಾಡಿದ್ದೇನೆ ಎಂದು ದೈರ್ಯವಾಗಿ ಹೇಳುತ್ತೇನೆ.  ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಕಾಮಿಡಿಯಾಗಿ ಹಲವು ಗಂಭೀರವಾದ ವಿಷಯ ವನ್ನು ಚಿತ್ರದ ಮೂಲಕ ಹೇಳಿದ್ದೇವೆ. ಟೀಸರ್ ನಲ್ಲಿ ನನ್ನ ದೃಶ್ಯಗಳು ಇಲ್ಲ. ಮೊದಲೇ ನಿರ್ದೇಶಕರು ಮಾತನಾಡಿ ಪಾತ್ರವನ್ನು ಜನರು ಸಿನಿಮಾದಲ್ಲಿ ಎಂಜಾಯ್ ಮಾಡಲಿ  ಎನ್ನುವುದು ನಮ್ಮ ಉದ್ದೇಶ ಎಂದರು. 

ಕಲಾವಿದರಾದ ಪಲ್ಟಿ ಗೋವಿಂದ್, ಸಾಯಿ ಪವನ್ ಕುಮಾರ್ ಮತ್ತಿತರು  ಮಾತನಾಡಿ ಚಿತ್ರದ ಮೂಲಕ ಒಳ್ಳೆಯ ಪಾತ್ರ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ತನು ಟಾಕೀಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ``ಲಂಗೋಟಿ ಮ್ಯಾನ್`` ಚಿತ್ರಕ್ಕೆ ಸಂಜೋತಾ ಭಂಡಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಇದೇ ಸೆಪ್ಟೆಂಬರ್ 20 ರಂದು ಚಿತ್ರ ತೆರೆಗೆ ಬರಲಿದೆ. - Chitratara.com
Copyright 2009 chitratara.com Reproduction is forbidden unless authorized. All rights reserved.