Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರೇಕ್ಷಕರ‌ ಮನಗೆದ್ದ ಚಿತ್ರ ``ರಮ್ಮಿ ಆಟ``
Posted date: 24 Tue, Sep 2024 09:26:45 AM
ಸಾಮಾಜಿಕ ಜಾಲತಾಣಗಳಲ್ಲಿ ಮುಗ್ಧ ಯುವಕರನ್ನು ರಂಗು ರಂಗಿನ ಆಟಗಳ ಮೂಲಕ ಸೆಳೆಯುತ್ತ, ಅಧಿಕ ಲಾಭದ ಆಸೆ ತೋರಿಸಿ, ಅವರನ್ನು  ವಂಚಿಸುವ ಆನ್‌ಲೈನ್ ಗೇಮ್ ರೂವಾರಿಗಳನ್ನು ನ್ಯಾಯವಾದಿಯೊಬ್ಬ  ಹೇಗೆ ಕಟಕಟೆಗೆ ತಂದು ನಿಲ್ಲಿಸಿದ ಎಂಬುದನ್ನು ರೋಚಕವಾಗಿ ನಿರೂಪಿಸಿರುವ  ಚಿತ್ರ ರಮ್ಮಿಆಟ. ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾದ ಈ ಚಿತ್ರವೀಗ ಯಶಸ್ವಿ ಪ್ರದರ್ಶನ ಕಾಣುತ್ತಿದೆ,  ಬುಕ್ ಮೈ ಷೋದಲ್ಲಿ 9.4 ರೇಟಿಂಗ್ ಪಡೆಯುವ ಮೂಲಕ  ಈವಾರ ತೆರೆಕಂಡ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎನಿಸಿಕೊಂಡಿದೆ. 
 
ಇಂಥ ಆಟಗಳನ್ನು ಪ್ರೊಮೋಷನ್ ಮಾಡುವ ಸಿನಿಮಾ ಸ್ಟಾರ್‌ಗಳಿಗೂ ಇದೊಂದು ಪಾಠವಾಗಿದೆ, ತಮ್ಮ ನೆಚ್ಚಿನ ಸ್ಟಾರ್‌ಗಳು ಏನೇ ಮಾಡಿದರೂ ಅಂದಾಭಿಮಾನಿಗಳು ಅದನ್ನು ಫಾಲೋ ಮಾಡುತ್ತಾರೆ, ಇದರಲ್ಲಿ ನಡೆಯುವ ಮೋಸದ ಆಟದಿಂದ ಮನೆ ಮಠ ಕಳೆದುಕೊಂಡು, ಸಾಲ ಮಾಡಿ ತೀರಿಸಲಾರದೆ ಸೂಸೈಡ್ ಮಾಡಿಕೊಳ್ಳುವ ಸ್ಥಿತಿ ತಲುಪುತ್ತಾರೆ, ಸಾಮಾಜಿಕ ಜಾಗೃತಿ ಮೂಡಿಸುವ  ಇಂಥ ಗಹನವಾದ ವಿಷಯವನ್ನು ಚಿತ್ರದ ನಿರ್ಮಾಪಕ,  ನಿರ್ದೇಶಕ  ಉಮರ್ ಷರೀಫ್  ಅವರು ತೆರೆಮೇಲೆ ಪರಿಣಾಮಕಾರಿಯಾಗಿ ಮೂಡಿಸಿರುವುದು ಸಿನಿಪ್ರಿಯರನ್ನು ಆಕರ್ಷಿಸುತ್ತಿದೆ, ಸಮಾಜದ ಬಹುತೇಕರ ಮನೆಯಲ್ಲಿ ನಡೆಯಬಹುದಾದ  ವಸ್ತುಸ್ಥಿತಿಯನ್ನು  ಕಣ್ಣಿಗೆ ಕಟ್ಟುವ ಹಾಗೆ ಹೇಳಿರುವ ನಿರ್ದೇಶಕರ ಶೈಲಿ ಕನ್ನಡ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.   
 
ಚಿತ್ರನಟರು, ಕ್ರಿಕೆಟ್ ಸ್ಟಾರ್‌ಗಳೂ ಸಹ ಜನರನ್ನು ಪ್ರಚೋದಿಸುವ ಇಂಥ ಮೋಸದಾಟದ ಜಾಹಿರಾತುಗಳಲ್ಲಿ ತಾವು ಅಭಿನಯಿಸಬಾರದೆಂದು ತಿಳಿದುಕೊಳ್ಳಬೇಕು ಎಂದು ಹೇಳಿರುವ ಮೆಸೇಜ್ ಪರಿಣಾಮಕಾರಿಯಾಗಿದೆ, ಚಿತ್ರ ನೋಡಿದವರೆಲ್ಲ  ಮೊಬೈಲ್ ಗೇಮ್‌ಗಳ ಮೂಲಕ ಇಷ್ಟುದೊಡ್ಡ ವಂಚನೆ ನಡೆಯುತ್ತಿದೆ ಎಂದು ನಮಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ, ನಮ್ಮ ಸ್ನೇಹಿತರಿಗೂ ಈ ಚಿತ್ರದ ಬಗ್ಗೆ ಹೇಳುತ್ತೇವೆ ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ,
 
ಪ್ರೇಕ್ಷಕರ ಪಾಸಿಟಿವ್ ರೆಸ್ಟಾನ್ಸ್ ಖುಷಿಯಾಗಿರುವ   ಚಿತ್ರತಂಡ ಮುಂದಿನ ದಿನಗಳಲ್ಲಿ ಮತ್ತಷ್ಟು  ಷೋಗಳನ್ನು  ಹೆಚ್ಚಿಸುವ ಆಲೋಚನೆಯಲ್ಲಿದೆ, 
 
ಒಬ್ಬ ಸ್ಟಾರ್‌ನಟ, ಆತನ ಅಭಿಮಾನಿಯ ಕುಟುಂಬ ಹಾಗೂ ಸಾಮಾಜಿಕ ಕಳಕಳಿ ಇರುವ ಲಾಯರ್. ಇಷ್ಟು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ನಿರ್ದೇಶಕ ಉಮರ್ ಷರೀಫ್  ಅವರು ಅದ್ಭುತವಾದ ಕೃತಿಯನ್ನು ತೆರೆಮೇಲೆ ಮೂಡಿಸಿದ್ದಾರೆ, ಅವರ ಆಶಯ ಪ್ರೇಕ್ಷಕರನ್ನು ತಲುಪಿದೆ. 
 
ವಿನ್ಯಾ ಶೆಟ್ಟಿ, ರಾಘವ ಸೂರ್ಯ, ಸೈಯದ್ ಇರ್ಫಾನ್ ಹಾಗೂ ಸ್ನೇಹ ರಾವ್ ಇವರೆಲ್ಲ ಸಹಜ ಅಭಿನಯದ ಮೂಲಕವೇ ತಂತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರದ ಕೊನೆಯಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಹೈಕೋರ್ಟ್ ನ್ಯಾಯಾಧೀಶರಾಗಿ  ನಿರ್ದೇಶಕ ಉಮರ್ ಷರೀಫ್ ಅವರೇ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ,
 
ಎಯ್ಟ್ ಏಂಜೆಲ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರವನ್ನು ನೆರಳು ಮೀಡಿಯಾ ಮೂಲಕ  ಹನುಮೇಶ್ ಪಾಟೀಲ್ ಅವರು ಬಿಡುಗಡೆ ಮಾಡಿದ್ದಾರೆ.   ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಉಮರ್ ಅವರ ಸಂಭಾಷಣೆ, ಪ್ರಭು ಎಸ್.ಆರ್. ಅವರ ಸಂಗೀತ ಈ ಚಿತ್ರದ ಹೈಲೈಟ್ ಆಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರೇಕ್ಷಕರ‌ ಮನಗೆದ್ದ ಚಿತ್ರ ``ರಮ್ಮಿ ಆಟ`` - Chitratara.com
Copyright 2009 chitratara.com Reproduction is forbidden unless authorized. All rights reserved.