Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಾಧಕರು ಮೆಚ್ಚಿದ ಮಿಂಚುಹುಳು..... ಪ್ರಮುಖ ಪಾತ್ರದಲ್ಲಿ ವರದಪ್ಪನವರ‌ ಮೊಮ್ಮಗ ಪೃಥ್ವಿರಾಜ್
Posted date: 29 Sun, Sep 2024 11:44:28 AM
ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ಕುಡಿ, ಅಣ್ಣಾವ್ರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಅಭಿನಯದ ಚೊಚ್ಚಲ‌ ಚಿತ್ರ "ಮಿಂಚುಹುಳು" ಅಕ್ಟೊಬರ್ 4 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಮಹೇಶ್ ಕುಮಾರ್ ಅವರ ಕಥೆ, ಚಿತ್ರಕಥೆ, ನಿರ್ದೇಶನವಿರುವ  ಈ  ಚಿತ್ರಕ್ಕೆ ಭೂನಿ ಪಿಕ್ಚರ್ಸ್ ಅಡಿ ರಾಜಗೋಪಾಲ್ ದೊಡ್ಡಹುಲ್ಲೂರು ಅವರು  ಬಂಡವಾಳ ಹಾಕಿದ್ದು
ವಿಜಯ್ ಕುಮಾರ್ ಮತ್ತು  ಅಬ್ದುಲ್ ರಫೀಕ್ ಉಲ್ಲಾ ಸಾಥ್ ನೀಡಿದ್ದಾರೆ. ಅಣ್ಣಾವ್ರ ಆತ್ಮೀಯರಾದ   ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರು ತಮ್ಮ ಊರಿನವರೇ ಆದ ನಿರ್ಮಾಪಕರ ಜೊತೆ ಹೆಗಲಾಗಿ ನಿಂತು ಈ ಚಿತ್ರ ನಿರ್ಮಾಣದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ.
 
ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ವಿಶೇಷ ಪ್ರದರ್ಶನದಲ್ಲಿ  ನಾದಬ್ರಹ್ಮ ಹಂಸಲೇಖಾ, ಹಿರಿಯನಟಿ ಜಯಮಾಲಾ, ನಿರ್ದೇಶಕ ಪಿ.ಶೇಷಾದ್ರಿ, ಲಹರಿ ವೇಲು, ಶಾಸಕ ಶರತ್ ಬಚ್ಚೇಗೌಡ, ಚಿಂತಕ ಪ್ರೊ. ರಾಜಪ್ಪ ದಳವಾಯಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.
 
ಅಲ್ಲದೆ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ್ರು, ದೊಡ್ಡಹುಲ್ಲೂರು ರುಕ್ಕೋಜಿರಾವ್,‌ ರಾಜ್ ಪುತ್ರಿಯರಾದ ಶ್ರೀಮತಿ ಲಕ್ಷ್ಮಿ, ಪೂರ್ಣಿಮಾ ರಾಮ್ ಕುಮಾರ್ ಸೇರಿದಂತೆ ಅವರ ಕುಟುಂಬದ ಬಹುತೇಕ ಸದಸ್ಯರು ಚಿತ್ರವನ್ನು ವೀಕ್ಷಿಸಿದರು.
 
ನಗರ ಪ್ರದೇಶದಲ್ಲಿ ನಡೆಯುವ ಕಥೆ ಇದಾಗಿದ್ದು,  ಬೇವಬ್ದಾರಿ ತಂದೆ ಹಾಗೂ ಮಗನ ನಡುವಿನ ಕಥೆ ಇದಾಗಿದ್ದು, ಆ ತಂದೆಯ ಬದುಕಿನ ಬದುಕಿನ ವೈರುದ್ಯ,  ಅಪ್ಪ- ಮಕ್ಕಳು ಬಾಡಿಗೆ ಕಟ್ಟಲಾಗದೆ ಪಾಳು ಮನೆ ಸೇರಿದಾಗ, ಆ ಮನೆಯಲ್ಲಿ ವಿದ್ಯುತ್ ಇರುವುದಿಲ್ಲ. ಏನಾದರೂ ಮಾಡಿ ವಿದ್ಯುತ್ ಹಾಕಿಸಬೇಕೆಂದು, ಪೇಪರ್ ಏಜೆಂಟ್ ಸಹಾಯದಿಂದ ಕರೆಂಟ್ ಹಾಕಿಸಲು ಮುಂದಾಗುತ್ತಾನೆ. ಆದರೆ ಒಮ್ಮೆ ಆತ ಕೂಡಿಟ್ಟ ಹಣವನ್ನು ಇಲಿಯೊಂದು ಕಚ್ಚಿ ಹಾಕುತ್ತದೆ. ಮಿಂಚು ಹುಳುವೊಂದನ್ನು ನೋಡಿದ  ಆ ಹುಡುಗನಿಗೆ ಹೊಸ ಆಲೋಚನೆ ಬಂದು, ವಿದ್ಯಾರ್ಥಿಯ ಬದುಕಿನಲ್ಲಿ ಹೊಸದಾರಿಗೆ ಅವಕಾಶ ಮಾಡಿಕೊಡುತ್ತದೆ, ಅದು ಏನು ಎಂಬುದೇ ಮಿಂಚುಹುಳು ಚಿತ್ರದ ಕಥಾಹಂದರ.
    ಪ್ರದರ್ಶನದ ನಂತರ ನಡೆದ  ಪತ್ರಿಕಾ ಗೋಷ್ಠಿಯಲ್ಲಿ  ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ,  ಅಕ್ಟೋಬರ್ 4 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ, ಮುಖ್ಯವಾಗಿ ಈ ಚಿತ್ರ ಆಗಲು ಪುನೀತ್ ರಾಜ್ ಕುಮಾರ್ ಅವರೇ ಕಾರಣ. ಕನ್ನಡಕ್ಕೆ ಕಂಟೆಂಟ್ ಓರಿಯೆಂಟ್ ಚಿತ್ರಗಳ ಅಗತ್ಯತೆ ತುಂಬಾ ಇದೆ. ಅಂಥಾ ಮತ್ತೊಂದು ಚಿತ್ರವಿದು‌. ಒಳ್ಳೇ ಸಿನಿಮಾನ ಬೆಂಬಲಿಸಿ ಎಂದರು.
  ಬಾಲನಟ ಪ್ರೀತಂ ಕೊಪ್ಪದ  ಮಾತನಾಡಿ  ನಮ್ಮ  ಚಿತ್ರ ನಾಲ್ಕನೇ ತಾರೀಕು ಚಿತ್ರ ಬಿಡುಗಡೆಯಾಗುತ್ರಿದೆ ಎಲ್ಲರೂ ಚಿತ್ರ ನೋಡಿ ಸಹಕರಿಸಿ ಎಂದರು.
 
ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಮಾತನಾಡಿ, ಚಿತ್ರದಲ್ಲಿ  ನನ್ನದು ಮುಖ್ಯ ಪಾತ್ರಕ್ಕೆ ಪೂರಕವಾಗಿ‌ ನಿಲ್ಲುವ ಪಾತ್ರ. ನಮ್ಮ ಚಿತ್ರಕ್ಕೆ ಎಲ್ಲರ ಸಹಕಾರ, ಬೆಂಬಲ ಬೇಕು ಎಂದು ಕೇಳಿಕೊಂಡರು.
 
ನಿರ್ಮಾಪಕ ರಾಜ್ ಗೋಪಾಲ್ ಮಾತನಾಡಿ, ನಾನು ಸಿನಿಮಾ ಮಾಡಬೇಕೆಂದುಕೊಂಡಿರಲಿಲ್ಲ. ಬಾಲ್ಯದ ಗೆಳೆಯ ರುಕ್ಕೋಜಿ ಅವರು ಈ ಥರದ ಒಂದು ಕಥೆ ಇದೆ, ಸಿನಿಮಾ  ಮಾಡೋಣ ಅಂದರು. ಎಲ್ಲರೂ ಸೇರಿ ಈ ಚಿತ್ರ ಮಾಡಿದ್ದೇವೆ‌. ನೋಡಿ ಆಶೀರ್ವಾದ ಮಾಡಿ ಎಂದು ಕೇಳಿಕೊಂಡರು.
 
ಹಿರಿಯ ನಟಿ ಜಯಮಾಲಾ ಮಾತನಾಡಿ ವರದಪ್ಪ ಅವರ ಅಳಿಯ ಮಕ್ಕಳ ಚಿತ್ರಕ್ಕೆ ಕೈ ಹಾಕಿದ್ದಾರೆ. ಅವರ ಮಗ ನಟಿಸಿದ್ದಾರೆ‌, ಮಕ್ಕಳು ಯಾವ ರೀತಿ ವಿಕಾಸ ಹೊಂದುತ್ತಾರೆ ಅನ್ನೋದನ್ನು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ, ಮಕ್ಕಳ ಚಿತ್ರಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಬೇಕು ಎಂದರು. 
 
ಹಂಸಲೇಖಾ ಮಾತನಾಡಿ ಜಯಮಾಲಾ ಅವರು ಮಕ್ಕಳ ಚಿತ್ರ ಮಾಡಿದರೆ ಏನು ಸಮಸ್ಯೆ ಇದೆ, ಹೇಗೆ ರಿಲೀಸ್ ಮಾಡಬೇಕೆಂದು ತಿಳಿಸಿದ್ದಾರೆ. ರುಕ್ಕೋಜಿ ಮೊದಲು ಈ ಹುಳ ಬಿಟ್ಟಿದ್ದು. ಈ ಸಿನಿಮಾ ನೋಡುವಾಗ ನನಗೆ ಪಂತುಲು ನೆನಪಾದರು. ಆ ಮಗು  ಸಮಸ್ಯೆಗಳ ನಡುವೆ ಬೆಳೆಯಲು ಹೊರಟಿದ್ದು  ಖುಷಿಯಾಯ್ತು.
 
ಮಕ್ಕಳ‌ ಮುಂದೆ ಸವಾಲುಗಳನ್ನು ಇಡಿ, ಅವರಿಗೆ ಕುತೂಹಲ ಬೆಳೆಸಿ. ಅವರು ಕೇಳದೆ ಏನನ್ನೂ ಕೊಡಬೇಡಿ, ವರದಪ್ಪ ಅವರು ಒಂದು ಭಾಷಣ ಮಾಡಿದ್ದು ನಾನು ಎಂದೂ ನೋಡಿಲ್ಲ. ಹಿಂದೆನಿಂತು ನೋಡಿಕೊಳ್ತಿದ್ದರು. ರಾಜಣ್ಣ ಅವರನ್ನು ಭೂಮಿತೂಕದ ವ್ಯಕ್ತಿ ಅಂತಿದ್ದರು. ಈಗ ಅವರ ಮೊಮ್ಮಗ ಬೇರಿನೆಡೆಗೆ ಹೊರಟಿದ್ದಾನೆ ಎಂದು ಹೇಳಿದರು.
 
ನಿರ್ದೇಶಕ ಪಿ.ಶೇಷಾದ್ರಿ ಮಾತನಾಡುತ್ತ  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಿನಿಮಾ ತೋರಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.ಸರ್ಕಾರ ಅನುಮತಿ ಕೊಡಬೇಕು. ನೂರು ಮಕ್ಕಳು ಈ ಸಿನಿಮಾ ನೋಡಿದರೆ ಅದರಲ್ಲಿ ಹತ್ತು ಮಕ್ಕಳ‌ಮನೋಭಾವ ಬದಲಾಗುತ್ತೆ. ಮುಖ್ಯವಾಗಿ ದೊಡ್ಡವರು ಈ ಸಿನಿಮಾ ನೋಡಬೇಕು ಎಂದು ಹೇಳಿದರು.
 
ಲಹರಿ ಸಂಸ್ಥೆಯ ವೇಲು, ನಿವೃತ್ತ  ಪ್ರಾಧ್ಯಾಪಕ ಪ್ರೊ ರಾಜಪ್ಪ ದಳವಾಯಿ, ಶಾಸಕ ಶರತ್ ಬಚ್ಚೇಗೌಡ,  ಕಾರ್ಯಕಾರಿ ನಿರ್ಮಾಪಕ ವಿಜಯ್ ಕುಮಾರ್, ಸಹ ನಿರ್ಮಾಪಕ ರಫೀಕ್ ಉಲ್ಲಾ  ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಾಧಕರು ಮೆಚ್ಚಿದ ಮಿಂಚುಹುಳು..... ಪ್ರಮುಖ ಪಾತ್ರದಲ್ಲಿ ವರದಪ್ಪನವರ‌ ಮೊಮ್ಮಗ ಪೃಥ್ವಿರಾಜ್ - Chitratara.com
Copyright 2009 chitratara.com Reproduction is forbidden unless authorized. All rights reserved.