ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರೋ ಅನೀಶ್ ತೇಜೇಶ್ವರ್ ಆರಾಮ್ ಅರವಿಂದ ಸ್ವಾಮಿ ಸಿನಿಮಾ ಮೂಲಕ ರೋಮ್ಯಾಂಟಿಕ್ ಹೀರೋ ಆಗಿ ನಿಮ್ಮ ಮುಂದೆ ಬರ್ತಿದ್ದಾರೆ. ಆರಂಭದಿಂದಲೂ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರನ್ನು ಗಮನಸೆಳೆಯುತ್ತಿರುವ ಚಿತ್ರತಂಡ ಈಗ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಆರಾಮ್ ಅರವಿಂದ ಸ್ವಾಮಿ ಸಿನಿಮಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದು, ನವೆಂಬರ್ 22ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆಗೆ ಬರ್ತಿದೆ.
ಮುಂದೆ ಹೇಗೋ ಕುಣಿದು ಅನೀಶ್
ಟೈಟಲ್ ಟ್ರ್ಯಾಕ್ ಮೂಲಕ ಜಬರ್ದಸ್ತ್ ಆಗಿ ಕುಣಿದಿದ್ದ ಅನೀಶ್ ತೇಜೇಶ್ವರ್ ಈಗ ಮುಂದೆ ಹೇಗೋ ಏನೋ ಎನ್ನುತ್ತಾ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಅನೀಶ್ ಗೆ ಮಿಲನಾ ನಾಗರಾಜ್ ಸಾಥ್ ಕೊಟ್ಟಿದ್ದು, ಮಲ್ಲು ಕುಟ್ಟಿಯಾಗಿ ಮಿಂಚಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯದ ಮೆಲೋಡಿ ಹಾಡಿಗೆ ನಿಹಾಲ್ ಟೌರೊ ಧ್ವನಿಯಾಗಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಹಾಡಿನ ಶ್ರೀಮಂತಿಕೆ ಹೆಚ್ಚಿಸಿದೆ.
`ನಮ್ ಗಣಿ ಬಿಕಾಂ ಪಾಸ್`, `ಗಜಾನನ ಅಂಡ್ ಗ್ಯಾಂಗ್` ಅಂತಹ ಸಿನಿಮಾಗಳನ್ನು ನಿರ್ದೇಶಿಸಿರೋ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಲ್ಲಿ ಅನೀಶ್‌ಗೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಇಬ್ಬರು ನಾಯಕಿಯರು. `ಅಕಿರ` ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ `ಗುಳ್ಟು` ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್. ಬಿ. ಸಂಕಲನ ಈ ಸಿನಿಮಾಗಿದೆ. ಪ್ರಚಾರದ ಪಡಸಾಲೆಗೆ ಇಳಿದಿರುವ ಚಿತ್ರತಂಡ ಭರದಿಂದ ಪ್ರಚಾರ ನಡೆಸ್ತಿದ್ದು, ನವೆಂಬರ್ 22ಕ್ಕೆ ಸಿನಿಮಾವನ್ನು ತೆರೆಗೆ ಬರ್ತಿದೆ.