ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಸಂಸ್ಥೆ ವರ್ಷ ಪೂರೈಸಿದೆ. ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಮತ್ತು ದಸರಾ ಸಂಭ್ರಮ ಆಯೋಜಿಸಲಾಗಿತ್ತು.
ವೇಲ್ಸ್ ಗ್ರೂಪ್ ಆಫ್ ಕಂಪನಿ ಮಾಲೀಕತ್ವದಲ್ಲಿ ಜಾಲಿವುಡ್ ಸ್ಟುಡಿಯೋ ತಮಿಳಿನಲ್ಲಿ 15 ಸಿನಿಮಾ ನಿರ್ಮಾಣ ಮಾಡಿದೆ. ಶಿಕ್ಷಣ ಮತ್ತು ಮನರಂಜನೆಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹಲವು ಕ್ಷೇತ್ರಗಳಲ್ಲಿ ಗಮನ ಹರಿಸಿದೆ. ಡಾ.ಐಸಿರಿ ಕೆ ಗಣೇಶ್ ಅವರು ಜಾಲಿವುಡ್ ಸ್ಟುಡಿಯೋ ಸಾರಥ್ಯದಲ್ಲಿ ನಡೆದುಕೊಂಡು ಬರುತ್ತಿದೆ.
ಜಾಲಿವುಡ್ ಸ್ಥಳೀಯ ಮುಖ್ಯಸ್ಥ ಬಷೀರ್ ಅಹಮದ್ ಮಾತನಾಡಿ 2021 ರಲ್ಲಿ ಸ್ಟುಡಿಯೋ ಆರಂಭಿಸುವ ವೇಳೆ ಹೆಸರು ಇನ್ನೂ ಇಟ್ಟಿರಲಿಲ್ಲ. ಕಳೆದ ವರ್ಷ ಸ್ಟುಡಿಯೋ ಆರಂಭವಾದಾಗ ಸಿಕ್ಕ ಸಹಕಾರ ಪೆÇ್ರೀತ್ಸಾಹ ಬೆಂಬಲ ಅಪರಿಮಿತವಾದದ್ದು ಮಾದ್ಯಮದ ಸಹಕಾರ ಇಲ್ಲದೆ ಏನೂ ಸಾದ್ಯವಾಗುತ್ತಿರಲಿಲ್ಲ. ಜಾಲಿವುಡ್ ಒಂದು ವರ್ಷ ಪೂರ್ಣಗೊಳಿಸಿದೆ. 10 ಲಕ್ಷ ಗ್ರಾಹಕರಿಗೆ ಸೇವೆ ಸಲ್ಲಿಸಿದ್ದೇವೆ. ಮುಂದೆಯೂ ಸಹಾಕರ ಹೀಗೆ ಇರಲಿ ಎಂದು ಹೇಳಿದರು.
ಎಕ್ಸೀಪೀರಿಯನ್ಸ್ ಮುಖ್ಯಸ್ಥ ಕಲ್ಲೋಲ್ ಪೆÇೀಲೆ ಮಾತನಾಡಿ ಜಾಲಿವುಡ್ ನಲ್ಲಿ ಜಾಲಿವುಡ್‍ನಲ್ಲಿ ಸಂತೋಷವನ್ನು ಹಂಚುತ್ತಿದ್ದೇವೆ ಎಂದು ಹೇಳಿದರು
ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ರಮಣ್‍ಕುಮಾರ್ ಬೆಂಗಳೂರು ಸುತ್ತ ಮುತ್ತಲ ಶಾಲೆಯ 2ರಿಂದ 2.5 ಲಕ್ಷ ವಿದ್ಯಾರ್ಥಿಗಳು ಬಂದಿದ್ದು , ಹಾಲಿಡೇ ತಾಣವಾಗಿ ಸಂತೋಷ, ಉಲ್ಲಾಸ ಉತ್ಸಾಹ ಪಡೆಯುತ್ತಿದ್ದಾರೆ. ಇಲ್ಲಿ ಕಾಪೆರ್Çರೇಟ್ ಕಂಪನಿಗಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ವಿವಾಹ ವಾರ್ಷಿಕೋತ್ಸವ ಸೇರಿದಂತೆ ಯಾವುದೇ ರೀತಿಯ ಉಲ್ಲಾಸ ಉತ್ಸಾಹ ಇಲ್ಲಿ ಲಭ್ಯವಿದೆ ಎಂದರು.
ಜಾಲಿವುಡ್ ಸ್ಟುಡಿಯೋದ ಪ್ರಮೋಷನಲ್ ಪಾಟ್ನರ್ ನವರಸನ್ ಮಾತನಾಡಿ, 2021 ರಲ್ಲಿ ಬಷೀರ್ ಕಡೆಯಿಂದ ಆರಂಭವಾಗಿ ಜಾಲಿವುಡ್ ತನಕ ಬಂದಿದೆ. ಜಾಲಿವುಡ್‍ನಲ್ಲಿ ಅಡೆ ತಡೆಯ ನಡುವೆಯೂ ಯಶಸ್ವಿಯಾಗಿ ನಡೆಸುತ್ತಿದೆ. ಐಸಿರಿ ಗಣೇಶ್ ಅವರು ನಮ್ಮನ್ನು ನಂಬಿದ್ದಾರೆ. ಹೀಗಾಗಿ ಅವರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗ ಕೊಡಿ ಎನ್ನುತ್ತಿದ್ದಾರೆರೆ. ಶೇಕಡಾ 85 ರಷ್ಟು ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ ಇದಕ್ಕೆಲ್ಲಾ ಐಸಿರಿ ಗಣೇಶ್ ಅವರ ಸಹಕಾರವೇ ಕಾರಣ ಎಂದರು.
ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಿತ್ತಿದ್ದೇವೆ ರೀಸಿಸನಬಲ್ ರೇಟ್ ಸೋಮವಾರಿಂದ ಶನಿವಾರದವರೆಗೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಸಹಕಾರ ಹೀಗೆ ಇರಲಿ ಚಿತ್ರೀಕಣಕ್ಕಾಗಿ ಮೆಟ್ರೋ ರೈಲು ಸೇರಿದಂತೆ ಎರಡು ಹೊಸ ಯೋಜನೆ ಆರಂಭವಾಗಗಲಿದೆ ಎಂದು ಕೇಳಿದರು
ಮನರಂಜನೆಹೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾಮಾನ್ಯ ದಿನದಲ್ಲಿ 999 ಮತ್ತು ವಾರಾಂತ್ಯದಲ್ಲಿ 1199 ಬೆಲೆ ಟಿಕೆಟ್ ಬೆಲೆ ನಿಗಧಿ ಮಾಡಲಾಗಿದೆ. ಜಾಲಿವುಡ್ ಸಂಸ್ಥೆ ವತಿಯಿಂದ ಪ್ರತಿ ವರ್ಷ ಪ್ರಶಸ್ತಿ ನೀಡುವ ಉದ್ದೇಶವಿದೆ.ಕಳೆದ ಒಂದು ವರ್ಷದಲ್ಲಿ ಯಾವುದೇ ಲೋಪ ದೋಷ ಆಗದಂತೆ ನೋಡಿಕೊಳ್ಳಲಾಗಿದೆ. ಆವರಣದಲ್ಲಿ ವೈದ್ಯರು ಮತ್ತು ಅಂಬುಲೆನ್ಸ್ ವ್ಯವಸ್ಥೆ ಇದೆ ಎಂದರು.
ಹಿರಿಯ ಪ್ರಚಾರಕರ್ತ ಪಿಆರ್ ಓ ವೆಂಕಟೇಶ್ ಮಾತನಾಡಿ, ವರ್ಷ ಪೂರ್ಣಗೊಳಿಸಿರುವುದು ಆಶ್ವರ್ಯವಾಗುತ್ತಿದೆ. ಇಡೀ ತಂಡ ಒಳ್ಳೆಯದಾಗಲಿ. ಜಾಲಿವುಡ್ ಸ್ಥಾಪಕ ಐಸಿರಿ ಗಣೇಶ ಅವರನ್ನು ಬ್ರಹ್ಮನೇ ಸೃಷ್ಟಿ ಮಾಡಿರಬೇಕು. ಅವರು ದೀರ್ಘ ಕಾಲ ಬಾಳಲಿ. ಸಿನಿಮಾ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಮತ್ತಷ್ಟು ಅವಕಾಶ ಮಾಡಿಕೊಡಲಿ ಎಂದು ಹೇಳಿದರು.